For Quick Alerts
ALLOW NOTIFICATIONS  
For Daily Alerts
 

Team India's schedule : ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ: IPL 2023ರವರೆಗೆ

Team india schedule

ಐಸಿಸಿ ಟಿ20 ವಿಶ್ವಕಪ್‌ ಗೆಲ್ಲುವ ಕನಸು ನನಸಾಗದೆ ಟೀಂ ಇಂಡಿಯಾ ಬರಿಗೈನಲ್ಲಿ ವಾಪಸ್ಸಾಗಿದೆ. ಟಿ20 ವಿಶ್ವಕಪ್ ಗೆಲುವಿನ ಫೇವರಿಟ್‌ ಆಗಿದ್ದ ಭಾರತ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತು ತವರಿಗೆ ಹಿಂದಿರುಗುವಂತಾಯಿತು.

168ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ವಿಫಲಗೊಂಡ ಭಾರತ, ಎದುರಾಳಿಯ ಒಂದು ವಿಕೆಟ್ ಸಹ ಪಡೆಯದೇ 10 ವಿಕೆಟ್‌ಗಳ ಹೀನಾಯ ಸೋಲನ್ನ ಅನುಭವಿಸಿತು. ಆದ್ರೀಗ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ರಾಂತಿ ಬಯಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್ ಸರಣಿಗೆ ಮರಳಲಿರುವ ಸ್ಟಾರ್ ಪ್ಲೇಯರ್ಸ್

ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್ ಸರಣಿಗೆ ಮರಳಲಿರುವ ಸ್ಟಾರ್ ಪ್ಲೇಯರ್ಸ್

ಮುಂಬರುವ ಐಪಿಎಲ್ ಸೀಸನ್‌ವರೆಗೆ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸರಣಿಯಲ್ಲಿ ಭಾಗವಹಿಸಲಿದ್ದು, ನ್ಯೂಜಿಲೆಂಡ್ ಪ್ರವಾಸದ ಬಳಿಕ ಬಾಂಗ್ಲಾದೇಶಕ್ಕೆ ತೆರಳಲಿದ್ದು ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ನ್ಯೂಜಿಲೆಂಡ್ ಸರಣಿಯಲ್ಲಿ ವಿಶ್ರಾಂತಿ ಬಯಸಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಸ್ಕ್ವಾಡ್‌ ಸೇರಲಿದ್ದು, ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಆಡಲಿದ್ದಾರೆ.

ಭಾರತ ತಂಡದ ಸೋಲಿಗೆ ಬೌಲರ್‌ಗಳನ್ನು ದೂಷಿಸಿದ ರೋಹಿತ್ ಶರ್ಮಾಗೆ ಬೆಂಡೆತ್ತಿದ ವೀರೇಂದ್ರ ಸೆಹ್ವಾಗ್

ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ವಿರುದ್ಧ ಸರಣಿ ಬಳಿಕ ಲಂಕಾ ವಿರುದ್ಧ ಹೋರಾಟ

ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ವಿರುದ್ಧ ಸರಣಿ ಬಳಿಕ ಲಂಕಾ ವಿರುದ್ಧ ಹೋರಾಟ

ಕಿವೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾ ತವರಿಗೆ ಮರಳಲಿದ್ದು, ಶ್ರೀಲಂಕಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ರಾಷ್ಟ್ರಗಳು ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಇದಾದ ಬಳಿಕ ನ್ಯೂಜಿಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬರಲಿದೆ.

ಕಿವೀಸ್ ವಿರುದ್ಧ ಹೋರಾಟದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದು, ನಾಲ್ಕು ಟೆಸ್ಟ್ ಪಂದ್ಯಗಳನ್ನೊಳಗೊಂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉಭಯ ತಂಡಗಳು ಆಡಲಿವೆ.

ಈ ಟೆಸ್ಟ್ ಸರಣಿಯು ಮುಂಬರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಉಭಯ ರಾಷ್ಟ್ರಗಳು ಕಠಿಣ ಪೈಪೋಟಿಯನ್ನ ನಡೆಸಲಿವೆ. ಈ ಟೆಸ್ಟ್ ಸರಣಿಯಲ್ಲಿ ಸಿಗುವ ಪಾಯಿಂಟ್ಸ್‌ಗಳು 2023ರ ಜೂನ್‌ನಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸ್ಥಾನ ಪಡೆಯಲು ನೆರವಾಗಲಿದೆ.

T20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದಿದ್ರೆ, ಐಪಿಎಲ್ ಏಕೆ ಬೇಕು?: ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಕಿಡಿ

ಐಪಿಎಲ್ 2023ರವರೆಗೆ ಟೀಂ ಇಂಡಿಯಾದ ಕ್ರಿಕೆಟ್ ಸರಣಿಗಳು

ಐಪಿಎಲ್ 2023ರವರೆಗೆ ಟೀಂ ಇಂಡಿಯಾದ ಕ್ರಿಕೆಟ್ ಸರಣಿಗಳು

ಟಿ20 ವಿಶ್ವಕಪ್ ಫೈನಲ್ ನವೆಂಬರ್ 13ರಂದು ನಡೆಯಲಿದ್ದು, ಚಾಂಪಿಯನ್ ಯಾರಾಗಲಿದ್ದಾರೆ ಎಂದು ತಿಳಿದುಬರಲಿದೆ. ಇದಾದ ಬಳಿಕ ಟೀಂ ಇಂಡಿಯಾ ಮುಂದಿನ ಐಪಿಎಲ್ ಸೀಸನ್‌(2023)ವರೆಗೆ ಭಾಗಿಯಾಗಲಿರುವ ಕ್ರಿಕೆಟ್ ಸರಣಿಗಳು ಈ ಕೆಳಗಿನಂತಿವೆ.

3 ಒಡಿಐ ಮತ್ತು 3 ಟೆಸ್ಟ್ vs ನ್ಯೂಜಿಲೆಂಡ್ (ವಿದೇಶ)

3 ಒಡಿಐ ಮತ್ತು 2 ಟೆಸ್ಟ್ vs ಬಾಂಗ್ಲಾದೇಶ (ವಿದೇಶ)

3 ಒಡಿಐ ಮತ್ತು 3 ಟಿ20 ಪಂದ್ಯ vs ಶ್ರೀಲಂಕಾ (ತವರು)

3 ಒಡಿಐ ಮತ್ತು 3 ಟಿ20 ಪಂದ್ಯ vs ನ್ಯೂಜಿಲೆಂಡ್ (ತವರು)

3 ಒಡಿಐ ಮತ್ತು 4 ಟೆಸ್ಟ vs ಆಸ್ಟ್ರೇಲಿಯಾ (ತವರು)

Story first published: Friday, November 11, 2022, 19:18 [IST]
Other articles published on Nov 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+