
ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿರುವ ಟೀಂ ಇಂಡಿಯಾ ಪ್ಲೇಯರ್ಸ್
ಹೌದು ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ 16ರಂದು ತೆರಳಲಿರುವ ಟೀಂ ಇಂಡಿಯಾ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ. ಇದಕ್ಕೂ ಮೊದಲು ಡಿಸೆಂಬರ್ 12 ರಂದು ಎಲ್ಲಾ ಆಟಗಾರರು ಮುಂಬೈನಲ್ಲಿ ನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ
ಬಾಕ್ಸಿಂಗ್ ಡೇ ಎನ್‌ಕೌಂಟರ್‌ನಿಂದ ಪ್ರಾರಂಭವಾಗಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಈಗಾಗಲೇ ಟೀಂ ಇಂಡಿಯಾ 18 ಸದಸ್ಯರನ್ನೊಳಗೊಂಡ ತಂಡವು ಪ್ರಕಟಗೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ಏಕದಿನ ತಂಡವನ್ನು ಹೆಸರಿಸುವ ಸಾಧ್ಯತೆಯಿದೆ.
ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ ಎನ್‌ಕೌಂಟರ್‌ನಿಂದ ಪ್ರಾರಂಭವಾಗುವ ಮೂರು ಟೆಸ್ಟ್‌ಗಳಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ ಇತ್ತೀಚೆಗೆ ಘೋಷಿಸಿತ್ತು, ಆದರೆ ಮುಂದಿನ ಒಂದೆರಡು ದಿನಗಳಲ್ಲಿ ODI ತಂಡವನ್ನು ಹೆಸರಿಸುವ ಸಾಧ್ಯತೆಯಿದೆ.
ಈ ಮೊದಲು ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದಲ್ಲಿ ನಿಗದಿಪಡಿಸಲಾಗಿತ್ತು. ಆದ್ರೆ ಈ ವೆನ್ಯೂಗಳನ್ನ ಮತ್ತೆ ಪರಿಷ್ಕರಿಸಿದ್ದು, ಸೆಂಚುರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ನಡೆಯಲಿದೆ. ಇನ್ನು ಎರಡನೇ ಪಂದ್ಯವು ಹೊಸ ವರ್ಷದಲ್ಲಿ, ಅಂದರೆ 2022 ರಿಂದ ಆರಂಭವಾಗಲಿದೆ.
'ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ಭಾರೀ ಪ್ರಯತ್ನ ನಡೆದಿತ್ತು'': ರವಿಶಾಸ್ತ್ರಿ

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
ಅತಿ ಹೆಚ್ಚು ODI ಗೆಲುವಿನ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರು: ಕೊಹ್ಲಿಗೆ ಎಷ್ಟನೇ ಸ್ಥಾನ?

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ವೈರಸ್ ಭೀತಿ
ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಹೊಸ ರೂಪಾಂತರ ಒಮಿಕ್ರಾನ್ ಹೆಚ್ಚಾಗಿ ಕಂಡು ಬಂದಿರುವ ಹಿನ್ನಲೆಯಲ್ಲಿ ಯಾವುದೇ ದೇಶದ ಆಟಗಾರರು ಬಯೋ ಬಬಲ್‌ನಲ್ಲಿ ಉಳಿಯಬೇಕಾಗಿದೆ. ಅನೇಕ ಯುರೋಪಿಯನ್ ರಾಷ್ಟ್ರಗಳು ಆಫ್ರಿಕಾದ ದಕ್ಷಿಣ ಪ್ರಾಂತ್ಯಗಳ ಮೇಲೆ ಪ್ರಯಾಣ ನಿರ್ಬಂಧಗಳನ್ನು ಹೇರಿದ್ದರಿಂದ ಅನೇಕ ಟೂರ್ನಿಗಳು ರದ್ದುಗೊಂಡಿವೆ. ಜಿಂಬಾಬ್ವೆಯಲ್ಲಿ ICC ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ರದ್ದುಗೊಳಿಸಲಾಯಿತು.


Click it and Unblock the Notifications
