ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ODI ಗೆಲುವಿನ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರು: ಕೊಹ್ಲಿಗೆ ಎಷ್ಟನೇ ಸ್ಥಾನ?

Virat kohli

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸುವ ಮೂಲಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ಇತ್ತೀಚೆಗಷ್ಟೇ ಟಿ20 ನಾಯಕನಾಗಿದ್ದ ರೋಹಿತ್ ಶರ್ಮಾರಿಗೆ ಏಕದಿನ ಕ್ರಿಕೆಟ್‌ ನಾಯಕತ್ವ ಪಟ್ಟವನ್ನ ಬಿಸಿಸಿಐ ಕಟ್ಟಿದೆ.

ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ಸೀಟ್ ಬಿಟ್ಟುಕೊಟ್ಟಿದ್ದ ಕೊಹ್ಲಿಗೆ, ಬಲವಂತವಾಗಿ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿದಂತಿದೆ. ಆದ್ರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿವಾದಕ್ಕೆ ಬ್ರೇಕ್ ಹಾಕಿದ್ದು, ಕೊಹ್ಲಿಗೆ ಟಿ20 ನಾಯಕತ್ವ ಬಿಟ್ಟುಕೊಡದಂತೆ ಎಷ್ಟೇ ಹೇಳಿದರೂ, ನಾಯಕ ಸ್ಥಾನ ತ್ಯಜಿಸಿದರು. ಇದರ ಪರಿಣಾಮವಾಗಿಯೇ ವೈಟ್‌ ಬಾಲ್ ಕ್ರಿಕೆಟ್‌ಗೆ ಇಬ್ಬರು ನಾಯಕರು ಬೇಡ ಎಂಬ ನಿರ್ಧಾರವನ್ನ ಆಟಗಾರರ ಆಯ್ಕೆ ಸಮಿತಿ ಮತ್ತು ಬಿಸಿಸಿಐ ತೆಗೆದುಕೊಂಡಿದೆ ಎಂದು ದಾದಾ ತಿಳಿಸಿದ್ದಾರೆ.

ಇದಕ್ಕೂ ಮೊದಲು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ರೋಹಿತ್ ಶರ್ಮಾರನ್ನ ಮುಂದಿನ ಟಿ20 ಹಾಗೂ ಏಕದಿನ ಕ್ರಿಕೆಟ್ ನಾಯಕನಾಗಿ ಮುಂದುವರಿಸಿರುವುದಾಗಿ ಘೋಷಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕಂಡುಬಂದಿತು. ಬಿಸಿಸಿಐ ವಿರುದ್ಧ ನೆಟ್ಟಿಗರು ಸಾಕಷ್ಟು ಟ್ರೋಲ್ ಮಾಡಿದರು.

ಹಾಗಿದ್ದರೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ ನಾಯಕತ್ವದಲ್ಲಿ ಹಿಂದೆ ಬಿದ್ದಿದ್ರಾ? ಭಾರತದ ಈ ಹಿಂದಿನ ಏಕದಿನ ನಾಯಕಾರ ಗೆಲುವಿನ ಸರಾಸರಿ ಎಷ್ಟಿದೆ? ಎಂಬುದನ್ನ ಹೋಲಿಕೆ ಮಾಡಿ ಈ ಕೆಳಗೆ ತಿಳಿಸಲಾಗಿದೆ.

ವಿರಾಟ್ ಕೊಹ್ಲಿ: ಗೆಲುವಿನ ಸರಾಸರಿ ಶೇ. 68

ವಿರಾಟ್ ಕೊಹ್ಲಿ: ಗೆಲುವಿನ ಸರಾಸರಿ ಶೇ. 68

ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಟ್ರೋಫಿ ಗೆಲ್ಲಲು ವಿಫಲರಾದರು.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಭಾರತೀಯ ನಾಯಕರ ಪೈಕಿ, ವಿರಾಟ್ ಕೊಹ್ಲಿ ODIಗಳಲ್ಲಿ ಗೆಲುವಿನ ಶೇಕಡಾವಾರು ವಿಷಯದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ 95 ODIಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 65 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಅವರ ಅಡಿಯಲ್ಲಿ, ಭಾರತವು 19 ರಲ್ಲಿ 15 ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ, ಇದರಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಸರಣಿ ಗೆಲುವುಗಳು ಸೇರಿವೆ.

ಹೀಗಾಗಿ ವಿರಾಟ್ ಕೊಹ್ಲಿ ನಾಯಕನಾಗಿ ODIಗಳಲ್ಲಿ ಶೇಕಡಾ 68ರಷ್ಟು ಗೆಲುವನ್ನು ಹೊಂದಿದ್ದಾರೆ (ಕನಿಷ್ಠ 20 ಪಂದ್ಯಗಳು), ಯಾವುದೇ ಭಾರತೀಯ ಕ್ರಿಕೆಟ್ ತಂಡದ ನಾಯಕನಿಗಿಂತ ಅತಿ ಹೆಚ್ಚು ಸರಾಸರಿ ಇದಾಗಿದೆ.

ಎಂ.ಎಸ್ ಧೋನಿ: ಗೆಲುವಿನ ಸರಾಸರಿ ಶೇ. 55

ಎಂ.ಎಸ್ ಧೋನಿ: ಗೆಲುವಿನ ಸರಾಸರಿ ಶೇ. 55

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಭಾರತ ಹಿಂದೆದೂ ಕಾಣದ ಅದ್ಭುತ ನಾಯಕರಾಗಿದ್ದಾರೆ. 2007ರ ಟಿ20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ, ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯನ್ನ ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ.

ವಿಶ್ವದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ನಾಯಕ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ ಒಬ್ಬರೆ. ಹೀಗಾಗಿ ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಅವರು ಭಾರತದ ಫಿಟ್ನೆಸ್ ಗುಣಮಟ್ಟವನ್ನು ಉನ್ನತೀಕರಿಸಿದರು ಮತ್ತು ಕೇವಲ ತವರಿನಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ದ್ವಿಪಕ್ಷೀಯ ಸರಣಿಗಳನ್ನು ಗೆಲ್ಲಲು ಸಹಾಯ ಮಾಡಿದರು.

ODIಗಳಲ್ಲಿ (ಕನಿಷ್ಠ 20 ಪಂದ್ಯಗಳು) ಭಾರತೀಯ ನಾಯಕನ ಗೆಲುವಿನ ಶೇಕಡಾವಾರು ಪ್ರಕಾರ, ಎಂಎಸ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಗೆಲುವಿನ ಶೇಕಡಾವಾರು 55 ರಷ್ಟು ಹೊಂದಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

'ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ಭಾರೀ ಪ್ರಯತ್ನ ನಡೆದಿತ್ತು'': ರವಿಶಾಸ್ತ್ರಿ

ರಾಹುಲ್ ದ್ರಾವಿಡ್: ಗೆಲುವಿನ ಸರಾಸರಿ ಶೇ. 53

ರಾಹುಲ್ ದ್ರಾವಿಡ್: ಗೆಲುವಿನ ಸರಾಸರಿ ಶೇ. 53

ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯ ಗೆಲುವಿನ ಸರಾಸರಿ ಹೊಂದಿರುವ ನಾಯಕರಲ್ಲಿ ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದ್ದಾರೆ. ದ್ರಾವಿಡ್ ಇದುವರೆಗೆ ಆಡಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು ಮತ್ತು ಭಾರತಕ್ಕಾಗಿ ರನ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ.

ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?

ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಅಸ್ತವ್ಯಸ್ತವಾಗಿರುವಾಗ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. ಸೌರವ್ ಗಂಗೂಲಿ ಮತ್ತು ಗ್ರೆಗ್ ಚಾಪೆಲ್ ನಡುವಿನ ಕಿತ್ತಾಟದ ನಂತರ, 2005 ಮತ್ತು 2007 ರ ನಡುವೆ, ರಾಹುಲ್ ದ್ರಾವಿಡ್ ಅಲ್ಪಾವಧಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದರು.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ದ್ರಾವಿಡ್ ಅವರ ನಾಯಕತ್ವವನ್ನು ಬಹಳಷ್ಟು ಜನರು ಶ್ಲಾಘಿಸುವುದಿಲ್ಲ. ಆದ್ರೆ ಅವರ ಅಡಿಯಲ್ಲಿ ಭಾರತವು ವಿದೇಶಗಳಲ್ಲಿ ಸೇರಿದಂತೆ ಹಲವಾರು ಏಕದಿನ ಸರಣಿಗಳನ್ನು ಗೆದ್ದುಕೊಂಡಿತು. ಗಂಗೂಲಿಯಿಂದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ರಾಹುಲ್ ದ್ರಾವಿಡ್ ಭಾರತವನ್ನು 79 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದರು, 42 ಪಂದ್ಯಗಳನ್ನು ಗೆದ್ದರು. ಅವರು ODIಗಳಲ್ಲಿ (ಕನಿಷ್ಠ 20 ಪಂದ್ಯಗಳು) ಭಾರತೀಯ ನಾಯಕರಾಗಿ ಶೇಕಡಾ 53 ರಷ್ಟು ಗೆಲುವನ್ನು ಹೊಂದಿದ್ದಾರೆ.

ಕಪಿಲ್ ದೇವ್ : ಗೆಲುವಿನ ಸರಾಸರಿ ಶೇ. 52

ಕಪಿಲ್ ದೇವ್ : ಗೆಲುವಿನ ಸರಾಸರಿ ಶೇ. 52

2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಐಸಿಸಿ ವಿಶ್ವಕಪ್ ಗೆಲ್ಲುವವರೆಗೂ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 50 ಓವರ್‌ಗಳ ವಿಶ್ವಕಪಪ್ ಗೆದ್ದ ಏಕೈಕ ನಾಯಕ ಎಂದರೆ ಅದು ಕಪಿಲ್ ದೇವ್. ಅವರ ನಾಯಕತ್ವದಲ್ಲಿ, ಭಾರತವು 1983 ರಲ್ಲಿ ತಮ್ಮ ಮೊದಲ ಐಸಿಸಿ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಹೀಗಾಗಿಯೇ ಕಪಿಲ್ ದೇವ್ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಕೇವಲ ನಾಯಕನಾಗಿ ಅಷ್ಟೇ ಅಲ್ಲದೆ ಅವರು ಅದ್ಭುತ ಆಲ್‌ರೌಂಡರ್ ಆಗಿದ್ದರು ಮತ್ತು ವಾಸ್ತವವಾಗಿ, ಇಲ್ಲಿಯವರೆಗಿನ ಭಾರತದ ಶ್ರೇಷ್ಠ ಆಲ್‌ರೌಂಡರ್ ಎಂದು ಪರಿಗಣಿಸಲಾಗಿದೆ. ಐಸಿಸಿ 1983 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 175 ರನ್‌ಗಳ ಸ್ಫೋಟಕ ಶತಕಗಳಿಸಿದ ನಂತರ, ಐಸಿಸಿ ಈವೆಂಟ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗರಾದರು.

ಅವರ ನಾಯಕತ್ವದಲ್ಲಿ ಭಾರತ 74 ಏಕದಿನ ಪಂದ್ಯಗಳಲ್ಲಿ 39 ಪಂದ್ಯ ಗೆಲುವು ದಾಖಲಿಸಿದೆ. ಅವರು ನಾಯಕನಾಗಿ (ಕನಿಷ್ಠ 20 ಪಂದ್ಯಗಳು) ಗೆಲುವಿನ ಶೇಕಡಾವಾರು 52ರಷ್ಟು ಹೊಂದಿದ್ದಾರೆ.

ಸೌರವ್ ಗಂಗೂಲಿ: ಗೆಲುವಿನ ಸರಾಸರಿ ಶೇ. 52

ಸೌರವ್ ಗಂಗೂಲಿ: ಗೆಲುವಿನ ಸರಾಸರಿ ಶೇ. 52

ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಆಕ್ರಮಣಶೀಲತೆ ಮತ್ತು ನಿರ್ಭೀತ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು. ಮ್ಯಾಚ್‌ ಫಿಕ್ಸಿಂಗ್ ಕೆನ್ನಾಲಿಗೆಗೆ ಸಿಲುಕಿದ್ದ ಟೀಂ ಇಂಡಿಯಾವನ್ನ ಮೇಲಕೆತ್ತಿದ ಕೀರ್ತಿ ಇವರದ್ದು. ಇವರು ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಎರಡರಲ್ಲೂ ವಿಶೇಷ ಗೆಲುವು ದಾಖಲಿಸಿದೆ. 2000ನೇ ಇಸವಿಯಲ್ಲಿ ನಾಯಕತ್ವ ವಹಿಸಿಕೊಂಡು ಭಾರತವನ್ನು ಎತ್ತರಕ್ಕೆ ಕೊಂಡೊಯ್ದರು.

ನ್ಯಾಟ್ವೆಸ್ಟ್ ಟ್ರೋಫಿ ಗೆಲುವು ಮತ್ತು 2002 ರಲ್ಲಿ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರದರ್ಶನವು ಅವರ ನಾಯಕತ್ವದ ವೃತ್ತಿಜೀವನದ ಹೈಲೈಟ್ ಆಗಿದೆ. ಇದರ ಜೊತೆಗೆ ಗಂಗೂಲಿ ಅಡಿಯಲ್ಲಿ ಭಾರತವು ಐಸಿಸಿ ವಿಶ್ವಕಪ್ 2003 ರ ಫೈನಲ್ ತಲುಪಿತು.

ಏಕದಿನ ಗೆಲುವಿನ ಸರಾಸರಿ ಪಟ್ಟಿಯಲ್ಲಿ ಸೌರವ್ ಗಂಗೂಲಿ ದನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 146 ಪಂದ್ಯಗಳಲ್ಲಿ 76 ಪಂದ್ಯಗಳನ್ನು ಗೆದ್ದಿದೆ. ಅವರು ಓಡಿಐಗಳಲ್ಲಿ ನಾಯಕನಾಗಿ (ಕನಿಷ್ಠ 20 ಪಂದ್ಯಗಳು) ಗೆಲುವಿನ ಶೇಕಡಾವಾರು 52ರಷ್ಟು ಹೊಂದಿದ್ದಾರೆ.

Story first published: Friday, December 10, 2021, 18:02 [IST]
Other articles published on Dec 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X