For Quick Alerts
ALLOW NOTIFICATIONS  
For Daily Alerts
 

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಟಾಪ್ 5 ಕ್ರಿಕೆಟರ್ಸ್‌

Virat kohli

ಸಾಮಾಜಿಕ ಜಾಲತಾಣವು ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ, ಆಳವಾಗಿ ಜನರ ಮೇಲೆ ಪರಿಣಾಮ ಬೀರುತ್ತಿರುವ ವೇದಿಕೆಯಾಗಿದೆ. ಸಾಮಾಜಿಕ ಮಾಧ್ಯಮವು ಪ್ರತಿಯೊಂದು ವಿಭಿನ್ನ ಮಾರ್ಗಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಕಾರ್ಪೊರೇಟ್‌ಗಳಿಂದ ಹಿಡಿದು ಜಾಹೀರಾತಿನ ಜಗತ್ತು, ಸಣ್ಣ ವ್ಯಾಪಾರಗಳಿಂದ ದೊಡ್ಡ ಕೈಗಾರಿಕೆಗಳವರೆಗೆ, ಪ್ರತಿಯೊಂದು ಘಟಕವು ಸಾಮಾಜಿಕ ಮಾಧ್ಯಮದ ವ್ಯಾಪ್ತಿಗೆ ಒಳಪಟ್ಟಿದೆ.

ಕ್ರೀಡಾ ಪ್ರಪಂಚವು ಸಹ ಸಾಮಾಜಿಕ ಜಾಲತಾಣದ ವ್ಯಾಪ್ತಿಯಲ್ಲಿರುವ ಕ್ಷೇತ್ರವಾಗಿ. ನಿಧಾನವಾಗಿ ಜಾಗತಿಕ ಆಟವಾಗಿ ಬದಲಾಗುತ್ತಿರುವ ಕ್ರಿಕೆಟ್, ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕರ ಗಮನವನ್ನು ಸೆಳೆಯುವ ಕ್ರೀಡೆಗಳಲ್ಲಿ ಒಂದಾಗಿದೆ. ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟಿಗರನ್ನು ಸಹಿ ಮಾಡುವ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬ್ರ್ಯಾಂಡ್‌ಗಳಿಗೆ ಇದು ಅತಿದೊಡ್ಡ ವೇದಿಕೆಯಾಗಿದೆ.

ವಿಶ್ವದ ಕ್ರಿಕೆಟ್‌ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾದ ಭಾರತದ ಕ್ರಿಕೆಟರ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟರ್ಸ್ ಇತರೆ ರಾಷ್ಟ್ರಗಳ ಕ್ರಿಕೆಟರ್ಸ್‌ಗಿಂತ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಕ್ರಿಕೆಟಿಗರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸುರೇಶ್ ರೈನಾ: 44.4 ಮಿಲಿಯನ್

ಸುರೇಶ್ ರೈನಾ: 44.4 ಮಿಲಿಯನ್

ಐಪಿಎಲ್ 15ನೇ ಸೀಸನ್‌ನಲ್ಲಿ ಅನ್‌ಸೋಲ್ಡ್‌ ಆಗಿರುವ ಸುರೇಶ್ ರೈನಾರನ್ನ ಚೆನ್ನೈ ಸೂಪರ್ ಕಿಂಗ್ಸ್‌ ಸೇರಿದಂತೆ ಯಾವುದೇ ತಂಡ ಖರೀದಿಸಲು ಮುಂದಾಗಲಿಲ್ಲ. ಆದ್ರೆ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಕಳೆದ ಸೀಸನ್‌ವರೆಗೂ ಐಪಿಎಲ್‌ನಲ್ಲಿ ತಮ್ಮ ಹವಾ ಹೊಂದಿದ್ದರು.

2005ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ರೈನಾ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹತ್ತಿರ 45 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ರೈನಾ ಟ್ವಿಟ್ಟರ್‌ನಲ್ಲಿ 19.7 ಮಿಲಿಯನ್ ಗರಿಷ್ಠ ಅನುಯಾಯಿಗಳನ್ನ ಹೊಂದಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ 18.7 ಮಿಲಿಯನ್ ಹಾಗೂ ಫೇಸ್‌ಬುಕ್‌ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ರೋಹಿತ್ ಶರ್ಮಾ: 63.8 ಮಿಲಿಯನ್

ರೋಹಿತ್ ಶರ್ಮಾ: 63.8 ಮಿಲಿಯನ್

ಟೀಂ ಇಂಡಿಯಾದ ಮೂರು ಫಾರ್ಮೆಟ್‌ನ ನಾಯಕನಾಗಿರುವ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಮೇಲೆ ಸತತ ಪಂದ್ಯಗಳನ್ನ ಗೆಲ್ಲುತ್ತಾ ಬಂದಿದ್ದಾರೆ. ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 64 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 22.7 ಮಿಲಿಯನ್ ಹಾಗೂ ಫೇಸ್‌ಬುಕ್‌ನಲ್ಲಿ 20 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ 20.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಶರ್ಮಾ ಮೈದಾನದಲ್ಲಿ ತಮ್ಮ ಪ್ರದರ್ಶನಗಳಲ್ಲಿ ಸ್ಥಿರವಾಗಿದ್ದಾರೆ ಮತ್ತು ಭಾರತಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲುವ ಮೂಲಕ ಅವರ ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಾರೆ. ಹೀಗಾಗಿ, ಅವರ ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಹೆಚ್ಚಿಸಿದೆ.

ರಣಜಿ ಕ್ರಿಕೆಟ್: ತನ್ನ ಮಗುವಿನ ಅಂತ್ಯಕ್ರಿಯೆ ಮುಗಿಸಿ ಬಂದು, ಶತಕ ಸಿಡಿಸಿದ ವಿಷ್ಣು ಸೋಲಂಕಿ

ಮಹೇಂದ್ರ ಸಿಂಗ್ ಧೋನಿ: 72.9 ಮಿಲಿಯನ್

ಮಹೇಂದ್ರ ಸಿಂಗ್ ಧೋನಿ: 72.9 ಮಿಲಿಯನ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ನಾಯಕ ರೋಹಿತ್ ಶರ್ಮಾಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದಿರುವ ವಿಶ್ವದ ಏಕೈಕ ನಾಯಕನಾಗಿರುವ ಮಾಹಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದ್ರೆ ಕೆಲವೊಮ್ಮೆ ಪೋಸ್ಟ್‌ಗಳನ್ನ ಹಾಕುವ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ.

ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನ ಹೊಂದಿರುವ ಮಾಹಿ ಇನ್‌ಸ್ಟಾಗ್ರಾಮ್‌ನಲ್ಲಿ 37.5 ಮಿಲಿಯನ್ ಹಾಗೂ ಫೇಸ್‌ಬುಕ್‌ನಲ್ಲಿ 27 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ 8.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಮಹೇಂದ್ರ ಸಿಂಗ್ ಧೋನಿ ನನ್ನ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್‌: ರವೀಂದ್ರ ಜಡೇಜಾ

ಸಚಿನ್ ತೆಂಡೂಲ್ಕರ್ : 106.9 ಮಿಲಿಯನ್

ಸಚಿನ್ ತೆಂಡೂಲ್ಕರ್ : 106.9 ಮಿಲಿಯನ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಸಾಮಾಜಿಕ ಜಾಲತಾಣಗಳ ಫಾಲೋವರ್ಸ್ ಹೊಂದಿರುವ ಎರಡನೇ ಕ್ರಿಕೆಟಿಗರಾಗಿದ್ದಾರೆ. 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಸಚಿನ್ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಬರೋಬ್ಬರಿ 107 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಚಿನ್ ಇನ್‌ಸ್ಟಾಗ್ರಾಮ್‌ನಲ್ಲಿ 33 ಮಿಲಿಯನ್ ಹಾಗೂ ಫೇಸ್‌ಬುಕ್‌ನಲ್ಲಿ 37 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ 36.9 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಸಚಿನ್ ತೆಂಡೂಲ್ಕರ್ ಸಕ್ರಿಯ ಕ್ರಿಕೆಟ್ ಆಡುವ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಈಗಿನಂತೆ ಇದ್ದಿದ್ದರೆ ಸಚಿನ್ ಎಷ್ಟು ಫಾಲೋವರ್ಸ್ ಹೊಂದಿರುತ್ತಿದ್ದರು ಎಂದು ಆಶ್ಚರ್ಯವಾಗುತ್ತದೆ.

ವಿರಾಟ್ ಕೊಹ್ಲಿ: 278.8 ಮಿಲಿಯನ್

ವಿರಾಟ್ ಕೊಹ್ಲಿ: 278.8 ಮಿಲಿಯನ್

ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗ ಅಂದ್ರೆ ಅದು ವಿರಾಟ್ ಕೊಹ್ಲಿ ಆಗಿದ್ದಾರೆ. ಟೀಂ ಇಂಡಿಯಾದ ಎಲ್ಲಾ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ವಿಶ್ವ ಕ್ರಿಕೆಟ್‌ನ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನ ಹೆಚ್ಚಾಗಿ ಬಳಸುವ ಕೊಹ್ಲಿ ಫಿಟ್ನೆಸ್ ಮತ್ತು ಯೂತ್ ಐಕಾನ್ ಆಗಿದ್ದಾರೆ.

ಮಾಜಿ ಭಾರತೀಯ ನಾಯಕ ಇನ್‌ಸ್ಟಾಗ್ರಾಮನ್‌ಲ್ಲಿ ಮಾತ್ರ 183 ಮಿಲಿಯನ್‌ ಫಾಲೋವರ್ಸ್‌ ಅನ್ನು ಹೊಂದಿದ್ದು, 49 ಮಿಲಿಯನ್ ಫೇಸ್‌ಬುಕ್ ಮತ್ತು 46.8 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಹೊಂದಿದ್ದಾರೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 280 ಮಿಲಿಯನ್ ಫಾಲೋವರ್ಸ್ ಹೊಂದಿರುವ ವಿರಾಟ್ ದೀರ್ಘಕಾಲದಿಂದ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ.

Story first published: Saturday, February 26, 2022, 17:10 [IST]
Other articles published on Feb 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+