ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಶತಕಗಳಲ್ಲಿ ದಾಖಲೆ ನಿರ್ಮಿಸಿದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ

ಲಕ್ನೋ, ನವೆಂಬರ್ 6: ವೆಸ್ಟ್ ಇಂಡೀಸ್ ವಿರುದ್ಧದ ಎರಡನೆಯ ಟಿ20 ಪಂದ್ಯದಲ್ಲಿ ಅಬ್ಬರದ ಶತಕ ಚಚ್ಚಿದ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ನಾಲ್ಕು ಶತಕಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಲಕ್ನೋ ಕ್ರಿಕೆಟ್ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರುಲಕ್ನೋ ಕ್ರಿಕೆಟ್ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರು

ರೋಹಿತ್ ಶರ್ಮಾ ಕೇವಲ 61 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ನೆರವಿನಿಂದ ಅಜೇಯ 111 ರನ್ ಬಾರಿಸಿದರು.

Rohit Sharma become first player to hits 4 centuries in international T20

ನಾಲ್ಕು ಶತಕಗಳಲ್ಲಿ ಕೊನೆಯ ಮೂರು ಶತಕಗಳು ಕಳೆದ 12 ತಿಂಗಳಿನಲ್ಲಿ ದಾಖಲಾಗಿವೆ. ನ್ಯೂಜಿಲೆಂಡ್‌ನ ಕಾಲಿನ್ ಮುನ್ರೋ 3 ಟಿ20 ಶತಕಗಳನ್ನು ಬಾರಿಸಿದ್ದಾರೆ.

ಬ್ರೆಂಡನ್ ಮೆಕಲಂ, ಕೆಎಲ್ ರಾಹುಲ್, ಕ್ರಿಸ್ ಗೇಲ್, ಎವಿನ್ ಲೆವಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಫಿಂಚ್ ಮತ್ತು ಮಾರ್ಟಿನ್ ಗುಪ್ಟಿಲ್ ತಲಾ ಎರಡು ಶತಕಗಳನ್ನು ಗಳಿಸಿದ್ದಾರೆ.

ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್

ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳನ್ನು (3) ಗಳಿಸಿದ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ.

ಮಂಗಳವಾರದ ಪಂದ್ಯದಲ್ಲಿ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗೌರವಕ್ಕೆ ಕೂಡ ಹಿಟ್ ಮ್ಯಾನ್ ಭಾಜನರಾದರು.

ಒಟ್ಟಾರೆ 32.57ರ ಸರಾಸರಿಯಲ್ಲಿ 2203 ರನ್ ಗಳಿಸಿರುವ ಶರ್ಮಾ, ಅದಕ್ಕಾಗಿ 86 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 48.88ರ ಸರಾಸರಿಯಲ್ಲಿ 2102 ರನ್ ಗಳಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಪಟ್ಟಿಯಲ್ಲಿ ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗುಪ್ಟಿಲ್ (2271) ಹೆಸರು ಮೊದಲಿದೆ.

ಟಿ20ಯಲ್ಲಿ 50ಕ್ಕೂ ಹೆಚ್ಚು ರನ್‌ಗಳನ್ನು ಅಧಿಕ ಬಾರಿ ಗಳಿಸಿದ ದಾಖಲೆ ಸಹ ರೋಹಿತ್ ಪಾಲಾಗಿದೆ. ರೋಹಿತ್ 19 ಇನ್ನಿಂಗ್ಸ್‌ಗಳಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ (18) ಮಾರ್ಟಿನ್ ಗುಪ್ಟಿಲ್ (16) ಈ ಸಾಧನೆಗಳನ್ನು ಮಾಡಿದ್ದಾರೆ.

ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಈ ಹಿಂದೆಯೇ ಶರ್ಮಾ ನಿರ್ಮಿಸಿದ್ದರು. 2017ರಲ್ಲಿ ಶ್ರೀಲಂಕಾ ವಿರುದ್ಧ ಹತ್ತು ಸಿಕ್ಸರ್‌ಗಳನ್ನು ಬಾರಿಸಿದ್ದರು. ಕೆಎಲ್ ರಾಹುಲ್ ಶ್ರೀಲಂಕಾ ವಿರುದ್ಧ ಎಂಟು ಸಿಕ್ಸರ್ ಹೊಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಏಳು ಸಿಕ್ಸರ್‌ಗಳನ್ನು ಸಿಡಿಸಿದರು.

ಒಟ್ಟಾರೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮತ್ತು ಮಾರ್ಟಿನ್ ಗುಪ್ಟಿಲ್ (103) ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ 92 ಸಿಕ್ಸರ್ ಬಾರಿಸಿದ್ದಾರೆ.

Story first published: Wednesday, November 7, 2018, 8:28 [IST]
Other articles published on Nov 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X