
6ನೇ ಟಿ20 ಶತಕ ದಾಖಲಿಸಿದ ವಿರಾಟ್ ಕೊಹ್ಲಿ
ಚುಟುಕು ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ದಾಖಲಿಸೋದಕ್ಕೂ ಮೊದಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಅದಾಗಲೇ ಐದು ಶತಕಗಳನ್ನ ದಾಖಲಿಸಿದ್ದಾರೆ. ಈ ಮೂಲಕ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ತನ್ನ ಆರನೇ ಶತಕವನ್ನ ಮುಟ್ಟಿದ್ದಾರೆ.
61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ ಕೊಹ್ಲಿ, 200 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.

70 ಮತ್ತು 71ನೇ ಶತಕದ ಅಂತರದಲ್ಲಿ 72 ಪಂದ್ಯಗಳನ್ನಾಡಿದ ಕಿಂಗ್ ಕೊಹ್ಲಿ
ವಿರಾಟ್ ಕೊಹ್ಲಿ 2019 ನವೆಂಬರ್‌ನಲ್ಲಿ 70ನೇ ಅಂತರಾಷ್ಟ್ರೀಯ ಶತಕ ದಾಖಲಿಸಿದ ಬಳಿಕ ನಂತರದ 71ನೇ ಶತಕವನ್ನು 2022 ಸೆಪ್ಟೆಂಬರ್ 8 ರಂದು ದಾಖಲಿಸಿದ್ರು. ಈ ಶತಕಗಳ ಅಂತರದಲ್ಲಿ ವಿರಾಟ್ ಕೊಹ್ಲಿ 72 ಪಂದ್ಯಗಳನ್ನಾಡಿದ್ದಾರೆ.
72 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 36.10ರ ಬ್ಯಾಟಿಂಗ್ ಸರಾಸರಿಯಲ್ಲಿ 2,708 ರನ್ ಕಲೆಹಾಕಿದ್ದಾರೆ. ಈ ವೇಳೆ 26 ಅರ್ಧಶತಕ ದಾಖಲಾಗಿದ್ದು, 94 ಗರಿಷ್ಠ ಸ್ಕೋರ್ ಆಗಿದೆ.
ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುತ್ತಾರಾ ಎನ್ನುವ ಪ್ರಶ್ನೆಗೆ ಕೆ.ಎಲ್.ರಾಹುಲ್ ಗರಂ

1021 ದಿನಗಳ ಬಳಿಕ ವಿರಾಟ್ ಸೆಂಚುರಿ!
ವಿರಾಟ್ ಕೊಹ್ಲಿ ಮೂರು ವರ್ಷಗಳ ಬಳಿಕ ಶತಕ ದಾಖಲಿಸುವ ಮೂಲಕ ಭಾರೀ ನಿರೀಕ್ಷೆಯಲ್ಲಿದ್ದ ಬರವನ್ನ ನೀಗಿಸಿದ್ರು. ನವೆಂಬರ್ 2019ರಲ್ಲಿ ಕೊನೆಯ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ಹತ್ತಿರ ಮೂರು ವರ್ಷಗಳ ಬಳಿಕ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದಾರೆ ಅಂದ್ರೆ ನಂಬಲು ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕೊಹ್ಲಿ ಹೋದಲೆಲ್ಲಾ 71ನೇ ಶತಕ ಯಾವಾಗ ದಾಖಲಿಸುತ್ತಾರೆ ಎಂದು ಪ್ರಶ್ನೆಗಳೇ ಹೆಚ್ಚಿದ್ದವು. ಹೀಗಿರುವಾಗ ವಿರಾಟ್ ಕೊಹ್ಲಿ ಕೊನೆಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
"ಕಳೆದ 2.5 ವರ್ಷಗಳು ನನಗೆ ಬಹಳಷ್ಟು ಕಲಿಸಿದವು, ನಾನು ಸ್ವಲ್ಪ ಆಘಾತಕ್ಕೊಳಗಾಗಿದ್ದೇನೆ ಏಕೆಂದರೆ ಇದು ನಾನು ಶತಕವನ್ನು ನಿರೀಕ್ಷಿಸಿದ ಕನಿಷ್ಠ ಸ್ವರೂಪವಾಗಿತ್ತು" ಎಂದು ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿದ ಬಳಿಕ ಹೇಳಿಕೆ ನೀಡಿದ್ದಾರೆ.
ಕೊಹ್ಲಿ ಜಾಗದಲ್ಲಿ ಬೇರೆ ಯಾರೇ ಇದ್ರೂ, ಶತಕ ಸಿಡಿಸದೇ 3 ವರ್ಷ ತಂಡದಲ್ಲಿ ಉಳಿಯುತ್ತಿರಲಿಲ್ಲ: ಗೌತಮ್ ಗಂಭೀರ್

ಭಾರತ ಪರ ಟಿ20 ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್
ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಬಹು ತಿಂಗಳ ದಾಖಲೆಯನ್ನ ಮುರಿದರು. 2017ರಲ್ಲಿ ಶ್ರೀಲಂಕಾ ವಿರುದ್ಧ 118 ರನ್ ಸಿಡಿಸಿದ ರೋಹಿತ್ ಶರ್ಮಾ ಗರಿಷ್ಟ ಸ್ಕೋರರ್ ಆಗಿದ್ದರು. ಆದ್ರೆ ಕೊಹ್ಲಿ ಇದನ್ನ ಹಿಂದಿಕ್ಕಿದ್ದಲ್ಲದೆ ಅಜೇಯ 122 ರನ್ ಕಲೆಹಾಕಿದ್ದಾರೆ.
ವಿರಾಟ್ ಕೊಹ್ಲಿಯ ಮತ್ತೊಂದು ಶತಕಕ್ಕಾಗಿ 1000 ದಿನ ಕಾಯಬೇಕಿಲ್ಲ ಎಂದುಕೊಳ್ಳುತ್ತೇನೆ: ಆಕಾಶ್ ಚೋಪ್ರಾ

100 ಸಿಕ್ಸರ್ ಗಡಿದಾಟಿದ ವಿರಾಟ್
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 100 ಸಿಕ್ಸರ್ ಗಡಿದಾಟಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ 122ರನ್‌ಗಳ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು. ಈ ಮೂಲಕ ಕೊಹ್ಲಿ ಸಿಕ್ಸರ್‌ಗಳ ಶತಕ ಸಿಡಿಸಿದ್ದು, ಅತಿ ಹೆಚ್ಚು T20I ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಸಿಕ್ಸರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅಗ್ರಸ್ಥಾನದಲ್ಲಿದ್ದು 172 ಸಿಕ್ಸರ್ ದಾಖಲಿಸಿದ್ದಾರೆ. ನಂತರದಲ್ಲಿ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 171 ಸಿಕ್ಸರ್ ಹೊಂದಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್‌ಗೇಲ್ 124, ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ 120, ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ 117 ಸಿಕ್ಸರ್ ಸಿಡಿಸಿದ್ದಾರೆ.
IND vs AFG: 71ನೇ ಶತಕ ಸಿಡಿಸಿದ ನಂತರ ಮುಂದಿನ ಗುರಿ ಏನೆಂದು ಬಹಿರಂಗಪಡಿಸಿದ ವಿರಾಟ್ ಕೊಹ್ಲಿ

3500 ಟಿ20 ರನ್ ದಾಖಲಿಸಿದ ಎರಡನೇ ಬ್ಯಾಟರ್ ಕೊಹ್ಲಿ
ಅಫ್ಘಾನಿಸ್ತಾನದ ವಿರುದ್ಧದ ಅಮೋಘ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 3500 ರನ್ ಗಡಿ ದಾಟುವ ಮೂಲಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಮೈಲಿಗಲ್ಲು ತಲುಪಿದ್ದಾರೆ. ರೋಹಿತ್ ಶರ್ಮಾ ಬಳಿಕ ವಿರಾಟ್ 3500 ರನ್ ಗಡಿದಾಟಿದ್ದು, ವೇಗವಾಗಿ ಈ ಸಾಧನೆ ಮಾಡಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಯು ಇದೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ (3620) ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನವನ್ನ ವಿರಾಟ್ ಕೊಹ್ಲಿ (3584) ಪಡೆದಿದ್ದಾರೆ.


Click it and Unblock the Notifications












