ವಿರಾಟ್ ಕೊಹ್ಲಿಯ ಮತ್ತೊಂದು ಶತಕಕ್ಕಾಗಿ 1000 ದಿನ ಕಾಯಬೇಕಿಲ್ಲ ಎಂದುಕೊಳ್ಳುತ್ತೇನೆ: ಆಕಾಶ್ ಚೋಪ್ರಾ

ಭಾರತದ ಏಷ್ಯಾ ಕಪ್ 2022 ಸೂಪರ್ 4 ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಹುನಿರೀಕ್ಷಿತ ಶತಕ ಗಳಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಯನ್ನು ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.

ಸೆಪ್ಟೆಂಬರ್ 8, ಗುರುವಾರ ದುಬೈನಲ್ಲಿ ಭಾರತ ತಂಡವು 213 ರನ್‌ಗಳ ಬೃಹತ್ ಗುರಿಯನ್ನು ಅಫ್ಘಾನಿಸ್ತಾನಕ್ಕೆ ನೀಡಿತು. ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದರು. ಅಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡ 111 ರನ್ ಗಳಿಸಿ 101 ರನ್‌ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು.

ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಆಕಾಶ್ ಚೋಪ್ರಾ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಅನ್ನು ಮುಂದುವರೆಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Pakistan vs Sri Lanka Asia Cup : ತಪ್ಪು ತಿದ್ದಿಕೊಳ್ಳಲು ಶ್ರೀಲಂಕಾ-ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಅವಕಾಶPakistan vs Sri Lanka Asia Cup : ತಪ್ಪು ತಿದ್ದಿಕೊಳ್ಳಲು ಶ್ರೀಲಂಕಾ-ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಅವಕಾಶ

"ವಿರಾಟ್ ಕೊಹ್ಲಿ ಭಾರತದ ಗೌರವ ಮತ್ತು ಹೆಮ್ಮೆ, ಕೊಹ್ಲಿ ಮೊದಲ ಟಿ20 ಅಂತರಾಷ್ಟ್ರೀಯ ಶತಕ, 1021 ದಿನಗಳ ಕಾಯುವಿಕೆ ನಂತರ, 83 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಿದ ಬಳಿಕ 71 ನೇ ಶತಕ ಗಳಿಸಿದ್ದಾರೆ. ಕೊಹ್ಲಿಯ ಫಾರ್ಮ್ ಮರಳಿ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರು ಅದೇ ಶೈಲಿಯಲ್ಲಿ ಮುಂದುವರಿಯುತ್ತಾರೆ. ಅವರ ಮುಂದಿನ ಶತಮಾನಕ್ಕಾಗಿ ನಾವು 1000 ದಿನ ಕಾಯಬೇಕಾಗಿಲ್ಲ ಎಂದು ಭಾವಿಸುತ್ತೇವೆ." ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ಮಾನಸಿಕ, ದೈಹಿಕವಾಗಿ ದಣಿದಿತ್ತು

ಅಫ್ಘಾನಿಸ್ತಾನ ಮಾನಸಿಕ, ದೈಹಿಕವಾಗಿ ದಣಿದಿತ್ತು

ವಿರಾಟ್ ಕೊಹ್ಲಿಯ ಆಟವನ್ನು ಶ್ಲಾಘಿಸಿರುವ ಆಕಾಶ್ ಚೋಪ್ರಾ, ಅಫ್ಘಾನಿಸ್ತಾದ ಆಟಗಾರರ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯವನ್ನಾಡಿದ ಮರು ದಿನವೇ ಭಾರತದ ವಿರುದ್ಧ ಪಂದ್ಯವನ್ನಾಡಿದ ಅಫ್ಘಾನಿಸ್ತಾನ ಆಟಗಾರರು, ಮಾನಸಿಕ ಮತ್ತು ದೈಹಿಕವಾಗಿ ದಣಿದಿದ್ದರು ಎಂದು ಹೇಳಿದರು.

"ಪಂದ್ಯದ ಆಟಗಾರ ವಿರಾಟ್ ಕೊಹ್ಲಿ ಆಗಿರಬೇಕು. ರೋಹಿತ್ ಶರ್ಮಾ ಸ್ವತಃ ವಿಶ್ರಾಂತಿ ಪಡೆದರು ಮತ್ತು ಕೆಎಲ್ ರಾಹುಲ್ ಜೊತೆಗೆ ವಿರಾಟ್ ಕೊಹ್ಲಿಗೆ ಓಪನಿಂಗ್ ನೀಡಿದರು. ನಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದು ಸರಿಯಾದ ನಿರ್ಧಾರವಾಗಿತ್ತು ಆದರೆ ತಂಡವು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದೆ." ಎಂದು ಹೇಳಿದರು.

ಕಷ್ಟದ ದಿನಗಳಲ್ಲಿ ಆತ್ಮವಿಶ್ವಾಸ ತುಂಬಿದ ವಿಶೇಷ ವ್ಯಕ್ತಿಯನ್ನು ನೆನಪಿಸಿಕೊಂಡ ವಿರಾಟ್ ಕೊಹ್ಲಿ

ಕೊಹ್ಲಿಯ ಕೆಲವು ಹೊಡೆತಗಳು ಅದ್ಭುತ

ಕೊಹ್ಲಿಯ ಕೆಲವು ಹೊಡೆತಗಳು ಅದ್ಭುತ

ಕೊಹ್ಲಿ ಆಡಿದ ಕೆಲವು ಹೊಡೆತಗಳ ಬಗ್ಗೆ ಆಕಾಶ್ ಚೋಪ್ರಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕೊಹ್ಲಿಗೆ ಜೀವದಾನ ಸಿಕ್ಕಿತು, ಇಬ್ರಾಹಿಂ ಝದ್ರಾನ್ 28 ರನ್ ಗಳಿಸಿದ್ದಾಗ ಕ್ಯಾಚ್ ಕೈಬಿಟ್ಟರು. ಅದರ ನಂತರ, ಕೊಹ್ಲಿ ಬಾರಿಸಿದ ಬೌಂಡರಿ ಮತ್ತು ಸಿಕ್ಸರ್ ಉತ್ತಮವಾಗಿದ್ದವು, ಪ್ರಾಬಲ್ಯವನ್ನು ಮರಳಿ ಪಡೆದರು, ಹಳೆಯ ವಿರಾಟ್ ಕೊಹ್ಲಿ ಹಿಂತಿರುಗಿದರು. ನಂತರ ಅವರು ರಶೀದ್ ವಿರುದ್ಧ ಬಾರಿಸಿದ ಸಿಕ್ಸರ್. ಫಜಲ್ಹಕ್ ಫಾರೂಕಿ ವಿರುದ್ಧದ ಪುಲ್ ಹೊಡೆತಗಳು ಸಂಪೂರ್ಣವಾಗಿ ಮನಮುಟ್ಟುವಂತಿದ್ದವು." ಎಂದು ಹೊಗಳಿದ್ದಾರೆ.

ಭಾರತವು ಬೃಹತ್ ಸ್ಕೋರ್ ತಲುಪಲು ಸಹಾಯ ಮಾಡುವಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದಕ್ಕಾಗಿ ಸ್ಟ್ಯಾಂಡ್-ಇನ್ ನಾಯಕ ಕೆಎಲ್ ರಾಹುಲ್ (41 ಎಸೆತಗಳಲ್ಲಿ 62 ರನ್‌) ಆಟವನ್ನು ಆಕಾಶ್ ಚೋಪ್ರಾ ಶ್ಲಾಘಿಸಿದರು.

ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸುವ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ಮಾತ್ರ 100 ಶತಕಗಳನ್ನು ದಾಖಲಿಸಿದ್ದಾರೆ.

104ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ 3584 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಗಳಿಸಿದ ಶತಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಮೊದಲ ಶತಕವಾಗಿದೆ. 61 ಎಸೆತಗಳಲ್ಲಿ 122 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರವಾಗಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ಏಷ್ಯಾಕಪ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್

ಏಷ್ಯಾಕಪ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್

ಏಷ್ಯಾಕಪ್ ಟೂರ್ನಿ ಆರಂಭದಿಂದಲೂ ಕೊಹ್ಲಿ ಉತ್ತಮ ರನ್ ಕಲೆ ಹಾಕಿದ್ದಾರೆ. ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡದರು.

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸಿದ್ದಾಗ ಕ್ಯಾಚ್‌ ಬಿಟ್ಟದ್ದರ ಸಂಪೂರ್ಣ ಲಾಭ ಪಡೆದ ವಿರಾಟ್ ಕೊಹ್ಲಿ ನಂತರ ಅಕ್ಷರಶಃ ಅಬ್ಬರಿಸಿದರು. 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ, 6 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. 200 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ, ಒಟ್ಟಾರೆಯಾಗಿ ಐದು ಪಂದ್ಯಗಳಲ್ಲಿ 92 ಸರಾಸರಿ ಮತ್ತು 147.59 ಸ್ಟ್ರೈಕ್ ರೇಟ್‌ನಲ್ಲಿ 276 ರನ್ ಗಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 9, 2022, 14:14 [IST]
Other articles published on Sep 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X