ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುತ್ತಾರಾ ಎನ್ನುವ ಪ್ರಶ್ನೆಗೆ ಕೆ.ಎಲ್.ರಾಹುಲ್ ಗರಂ

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಷ್ಯಾಕಪ್‌ನ ಸೂಪರ್ 4 ಹಂತದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ, 71 ನೇ ಅಂತರಾಷ್ಟ್ರೀಯ ಶತಕದ ನಿರೀಕ್ಷೆಯನ್ನು ಕೊನೆಗೊಳಿಸಿದರು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ಸ್ಟ್ಯಾಂಡ್-ಇನ್ ನಾಯಕ ಕೆಎಲ್ ರಾಹುಲ್ ಜೊತೆಗೆ ಬ್ಯಾಟಿಂಗ್ ಆರಂಭಿಸಿ ಕೊಹ್ಲಿ ಇನ್ನಿಂಗ್ಸ್‌ ಕೊನೆಯವರೆಗೂ ಆಡಿದರು.

ಕೆ ಎಲ್‌ ರಾಹುಲ್ ಮತ್ತು ಕೊಹ್ಲಿ 119 ರನ್‌ಗಳ ಆರಂಭಿಕ ಜೊತೆಯಾಟ ಆಡಿದರು. ರಾಹುಲ್ 41 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್ 5 ವಿಕೆಟ್ ಪಡೆಯುವ ಮೂಲಕ ಭಾರತ ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸಿತು.

Asia cup 2022 :ಕೊಹ್ಲಿ ರನ್ ಗಳಿಸಿದ್ದು ನಮಗೆ ದೊಡ್ಡ ಬೋನಸ್ | *Cricket | OneIndia Kannada

IND vs AFG: ಅನುಷ್ಕಾ ಕಬ್ಬಿಣ ಮಹಿಳೆ, ಕೊಹ್ಲಿ ಉಕ್ಕಿನ ಮನುಷ್ಯ; ಹೀಗಂದಿದ್ಯಾಕೆ ಪಾಕ್ ಕ್ರಿಕೆಟಿಗ?IND vs AFG: ಅನುಷ್ಕಾ ಕಬ್ಬಿಣ ಮಹಿಳೆ, ಕೊಹ್ಲಿ ಉಕ್ಕಿನ ಮನುಷ್ಯ; ಹೀಗಂದಿದ್ಯಾಕೆ ಪಾಕ್ ಕ್ರಿಕೆಟಿಗ?

ಪಂದ್ಯದ ನಂತರ, ಕೆಎಲ್ ರಾಹುಲ್ ಅವರನ್ನು ಪತ್ರಕರ್ತರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಕೆ.ಎಲ್‌ ರಾಹುಲ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟರ್ ಆಗಿ ಅಫ್ಘಾನಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ, ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಯನ್ನು ಆರಂಭಿಕ ಆಟಗಾರನಾಗಿ ನೋಡಬಹುದೇ ಎಂದು ಪತ್ರಕರ್ತರೊಬ್ಬರು ಕೇಳಿದರು.

ಮೈದಾನದಿಂದ ಹೊರಗೆ ಕುಳಿತುಕೊಳ್ಳಬೇಕೆ ಎಂದ ರಾಹುಲ್

ಮೈದಾನದಿಂದ ಹೊರಗೆ ಕುಳಿತುಕೊಳ್ಳಬೇಕೆ ಎಂದ ರಾಹುಲ್

ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಕೆ.ಎಲ್‌. ರಾಹುಲ್‌, "ಹಾಗಾದರೆ ನಾನು ಮೈದಾನದಿಂದ ಹೊರಗೆ ಕುಳಿತುಕೊಳ್ಳಬೇಕೆ" ಎಂದು ಹೇಳಿದ್ದಾರೆ. ತಮ್ಮ ಮಾತು ಮುಂದುವರೆಸಿದ ಅವರು ವಿರಾಟ್ ಕೊಹ್ಲಿ ತಮ್ಮ ಆಟದ ಲಯವನ್ನು ಕಂಡುಕೊಳ್ಳುವುದು ಮುಖ್ಯವಾಗಿತ್ತು, ಮೂರನೇ ಕ್ರಮಾಂಕದಲ್ಲೂ ಅವರು ಉತ್ತಮವಾಗಿ ರನ್ ಗಳಿಸಬಹುದು ಎಂದು ಸಮರ್ಥನೆ ನೀಡಿದ್ದಾರೆ.

"ಇಂದು ವಿರಾಟ್ ಆರಂಭಿಕ ಬ್ಯಾಟರ್ ಆಗಿ ತಮ್ಮ ಪಾತ್ರವನ್ನು ಅವರು ಸುಂದರವಾಗಿ ನಿರ್ವಹಿಸಿದ್ದಾರೆ. ಮುಂದಿನ ಸರಣಿಯಲ್ಲಿ ಅವರ ಪಾತ್ರ ವಿಭಿನ್ನವಾಗಿರುತ್ತದೆ" ಎಂದು ಕೆಎಲ್ ರಾಹುಲ್ ಹೇಳಿದರು.

ಕೊಹ್ಲಿ ಜಾಗದಲ್ಲಿ ಬೇರೆ ಯಾರೇ ಇದ್ರೂ, ಶತಕ ಸಿಡಿಸದೇ 3 ವರ್ಷ ತಂಡದಲ್ಲಿ ಉಳಿಯುತ್ತಿರಲಿಲ್ಲ: ಗೌತಮ್‌ ಗಂಭೀರ್

ಕೊಹ್ಲಿ ರನ್ ಗಳಿಸುವುದು ತಂಡಕ್ಕೆ ದೊಡ್ಡ ಬೋನಸ್

ಕೊಹ್ಲಿ ರನ್ ಗಳಿಸುವುದು ತಂಡಕ್ಕೆ ದೊಡ್ಡ ಬೋನಸ್

"ನಿಸ್ಸಂಶಯವಾಗಿ, ವಿರಾಟ್ ರನ್ ಗಳಿಸುವುದು ತಂಡಕ್ಕೆ ದೊಡ್ಡ ಬೋನಸ್ ಆಗಿದೆ, ಅವರು ಅಫ್ಘಾನಿಸ್ತಾನದ ವಿರುದ್ಧ ಆಡಿದ ರೀತಿ, ಅವರು ಹೇಗೆ ಬ್ಯಾಟಿಂಗ್ ಮಾಡಿದರು ಎಂಬುದರ ಬಗ್ಗೆ ಸ್ವತಃ ಕೊಹ್ಲಿ ತುಂಬಾ ಸಂತೋಷಪಟ್ಟಿದ್ದಾರೆಂದು ನನಗೆ ತಿಳಿದಿದೆ. ಅವರು ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ ಮತ್ತು ಇಂದಿನ ಪಂದ್ಯದಲ್ಲಿ ಅದು ಸುಂದರವಾಗಿ ಕೆಲಸ ಮಾಡಿದೆ. ಒಂದು ತಂಡ, ಪ್ರತಿ ಆಟಗಾರನು ಕ್ರೀಸ್‌ನಲ್ಲಿ ಸಮಯ ಕಳೆಯುವುದು ಮುಖ್ಯ," ಎಂದು ರಾಹುಲ್ ಹೇಳಿದರು.

ಈ ಶತಕ ಅವರಿಗೆ ಇನ್ನಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ, ಅವರು ನಿಸ್ಸಂಶಯವಾಗಿ ಇದೇ ಲಯವನ್ನು ಮುಂದುವರೆಸುತ್ತಾರೆ. ಅವರ ಆಟ ತಂಡಕ್ಕೆ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ಶತಕ ಎಲ್ಲರಿಗೂ ಖಷಿ ನೀಡಿದೆ

ವಿರಾಟ್ ಕೊಹ್ಲಿ ಶತಕ ಎಲ್ಲರಿಗೂ ಖಷಿ ನೀಡಿದೆ

ನೀವು 2-3 ಇನ್ನಿಂಗ್ಸ್ ಆಡಿದರೆ ನಿಮಗೆ ಆತ್ಮವಿಶ್ವಾಸ ಸಿಗುತ್ತದೆ, ಅವರು ಆ ರೀತಿ ಆಡುತ್ತಾರೆ ಎಂಬುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ನಿಮಗೆಲ್ಲರಿಗೂ ವಿರಾಟ್ ಕೊಹ್ಲಿ ಆಟದ ಬಗ್ಗೆ ತಿಳಿದಿದೆ ಎಂದರು.

ವಿರಾಟ್ ಕೊಹ್ಲಿ ಆಟವನ್ನು ತುಂಬಾ ವರ್ಷಗಳಿಂದ ನೋಡುತ್ತಿದ್ದೀರಿ, ಅವರು ಆರಂಭಿಕ ಆಟಗಾರನಾಗಿ ಆಡಿದರೆ ಮಾತ್ರ ಶತಕಗಳನ್ನು ಗಳಿಸುತ್ತಾರೆ ಎಂದು ಅಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು ಅವರು ಶತಕಗಳನ್ನು ಗಳಿಸಬಹುದು. ಇದು ತಂಡದಲ್ಲಿ ಯಾವ ಆಟಗಾರ ಯಾವ ಪಾತ್ರವನ್ನು ನಿಭಾಯಿಸಬೇಕು ಎನ್ನುವುದರ ಕುರಿತಾಗಿದೆ ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ.

ಶತಕ ಗಳಿಸದಿದ್ದರೂ ಕೊಹ್ಲಿ ಕೊಡುಗೆ ಅಪಾರ

ಶತಕ ಗಳಿಸದಿದ್ದರೂ ಕೊಹ್ಲಿ ಕೊಡುಗೆ ಅಪಾರ

ನಿಸ್ಸಂಶಯವಾಗಿ, ವಿರಾಟ್ ಅವರ ಸಂಭ್ರಮಾಚರಣೆ ಹೆಚ್ಚು ಸಮಾಧಾನ ತಂದಿದೆ. ಕಳೆದ 2-3 ವರ್ಷಗಳಲ್ಲಿ ಅವರ ಮನಸ್ಥಿತಿ, ವರ್ತನೆ ಮತ್ತು ಕೆಲಸದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಅವರು ಆಟಕ್ಕೆ ತಯಾರಿ ಮಾಡುವ ರೀತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಎಂದು ಕೆಎಲ್‌ ರಾಹುಲ್ ಹೇಳಿದ್ದಾರೆ.

ಎಲ್ಲರಿಗೂ ಶತಕ ಗಳಿಸುವ ಆಸೆ ಇರುತ್ತದೆ. ಮತ್ತು ನಾವು ಕೂಡ ಸಂಖ್ಯೆಗಳ ಗೀಳನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ, ಆ ಮೂರು ಅಂಕೆಗಳ ಗೀಳು ಮತ್ತು ಯಾರಾದರೂ ಶತಕಗಳನ್ನು ಗಳಿಸಿದರೆ, ಅವನು ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ನಾವು ಭಾವಿಸುತ್ತೇವೆ. ಶತಕ ಗಳಿಸದಿದ್ದರೂ ಕಳೆದ 2-3 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಕೊಡುಗೆಗಳು ಅಸಾಧಾರಣವಾಗಿವೆ ಎಂದು ಹೇಳಿದರು.

Story first published: Friday, September 9, 2022, 17:13 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X