ಮಹಿಳಾ ಏಷ್ಯಾಕಪ್ ಫೈನಲ್: ಭಾರತದ ದಾಳಿಗೆ ಶ್ರೀಲಂಕಾ ತತ್ತರ, ಗಳಿಸಿದ್ದು 65 ರನ್, ಭಾರತಕ್ಕೆ ಗುರಿ 66 ರನ್!

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ರ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ದಾಳಿಗೆ ಶ್ರೀಲಂಕಾ ಮಹಿಳೆಯರು ತತ್ತರಿಸಿ ಹೋಗಿದ್ದು, ನಿಗದಿತ 20 ಓವರ್‌ಗಳಲ್ಲಿ 65 ರನ್‌ಗಳಿಸಲಷ್ಟೇ ಶಕ್ತಗೊಂಡಿದೆ. ಈ ಮೂಲಕ ಭಾರತ ವನಿತೆಯರಿಗೆ 66ರನ್‌ಗಳ ಸುಲಭ ಗುರಿಯನ್ನ ನೀಡಿದ್ದಾರೆ.
ಸಿಲ್ಹೆಟ್‌ನ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಫೇವರಿಟ್ ಆಗಿ ಕಣಕ್ಕಿಳಿದ ಭಾರತ ಮಹಿಳಾ ತಂಡವು ಎದುರಾಳಿಯನ್ನ ಅತ್ಯಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಮೂಲಕ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಲಂಕನ್ನರು 27ರನ್‌ಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದ್ದರು. ಎಲ್ಲಿಯೂ ಚೇತರಿಕೆಯನ್ನೇ ಕಾಣದ ಲಂಕಾ ಮಹಿಳೆಯರು ಭಾರೀ ಮುಖಭಂಗ ಎದುರಿಸಿದ್ರು.

ಆರಂಭಿಕರಿಬ್ಬರೂ ರನೌಟ್, 4ನೇ ಓವರ್‌ನಲ್ಲಿ 3 ವಿಕೆಟ್!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿದ್ದ ಶ್ರೀಲಂಕಾ ಏಷ್ಯಾಕಪ್ ಫೈನಲ್‌ನಲ್ಲಿ ಹಿಂದೆದೂ ಕಾಣದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಿಬ್ಬರೂ ರನೌಟ್ ಆಗುವ ಮೂಲಕ ಪರಸ್ಪರರ ನಡುವೆ ಸರಿಯಾದ ಸಂವಹನವೇ ಇಲ್ಲವೆಂಬಂತೆ ಶ್ರೀಲಂಕಾ ವನಿತೆಯರು ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಅದ್ರಲ್ಲೂ ಪಂದ್ಯದ ಮೂರನೇ ಓವರ್‌ನಲ್ಲಿ ನಾಯಕಿ ಚಾಮರಿ ಅಟ್ಟಪಟ್ಟು ರನೌಟ್ ಆಗುವ ಮೂಲಕ ಶ್ರೀಲಂಕಾದ ಕುಸಿತಕ್ಕೆ ನಾಂದಿ ಆಯಿತು. ರೇಣುಕಾ ಸಿಂಗ್ ಎರಡನೇ ಓವರ್ ಬೌಲಿಂಗ್‌ನಲ್ಲಿ ಮೊದಲಿಗೆ ಮಾಧವಿ ರಿಚಾ ಘೋಷ್ ಕ್ಯಾಚ್ ನೀಡಿ 1ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ನಂತರದ ಎಸೆತದಲ್ಲೇ ಅನುಷ್ಕ ಸಂಜೀವಿನಿ ರನೌಟ್ ಆದ್ರು. ಇದ್ರ ಬೆನ್ನಲ್ಲೇ ಹಸಿನಿ ಪೆರಾರ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರು.
ಟಿ20 ವಿಶ್ವಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ಪ್ಲೇಯಿಂಗ್ 11 ಈಗಾಗಲೇ ಆಯ್ಕೆ ಆಗಿದೆ: ರೋಹಿತ್ ಶರ್ಮಾ
ಚೇತರಿಸಿಕೊಳ್ಳದ ಲಂಕಾ, 65ರನ್‌ಗೆ ಸೀಮಿತ
ಇನ್ನು 9ರನ್‌ಗೆ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಮತ್ತೆಲ್ಲೂ ಚೇತರಿಕೆಯನ್ನೇ ಕಾಣಲಿಲ್ಲ. ಸತತ ವಿಕೆಟ್ ಪತನದಿಂದಾಗಿ ಒಂದರ ಹಿಂದೆ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಕವಿಶಾ ದಿಲ್ಹಾರಿ 1, ನೀಲಾಕ್ಷಿ ಡಿ ಸಿಲ್ವಾ 6, ಮಲ್ಶಾ ಶೆಹಾನಿ 0, ಓಷದಿ ರಣಸಿಂಘೆ 13, ಸುಗಂದಿಕಾ ಕುಮಾರಿ 6ರನ್‌ಗೆ ವಿಕೆಟ್ ಕಳೆದುಕೊಂಡರು.
27ರನ್‌ಗೆ 7 ವಿಕೆಟ್ ಕಳೆದುಕೊಂಡ ಶ್ರೀಲಂಕಾ ವನಿತೆಯರು ಅಂತಿಮವಾಗಿ ಕೊನೆಯ ಓವರ್‌ನಲ್ಲಿ 11ರನ್ ಕಲೆಹಾಕಿದೆ 9 ವಿಕೆಟ್ ನಷ್ಟಕ್ಕೆ 65ರನ್ ಕಲೆಹಾಕಿದರು.
ಭಾರತದ ಪರ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹಾ ರಾಣಾ ತಲಾ 2 ವಿಕೆಟ್ ಪಡೆದರು.
ಪಾಕ್ ಅಲ್ಲ, ಆಸೀಸ್ ಅಲ್ಲ: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ತೊಂದರೆ ನೀಡುವ ತಂಡ ಇದೇ: ಗೌತಮ್ ಗಂಭೀರ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತದ ವನಿತೆಯರ ಪ್ಲೇಯಿಂಗ್ ಇಲೆವೆನ್
ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಶ್ರೀಲಂಕಾ ವನಿತೆಯರ ಪ್ಲೇಯಿಂಗ್ ಇಲೆವೆನ್
ಚಾಮರಿ ಅತಪತ್ತು(ನಾಯಕಿ), ಅನುಷ್ಕಾ ಸಂಜೀವನಿ(ವಿಕೆಟ್ ಕೀಪರ್), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಶೆಹಾನಿ, ಓಷದಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications