Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಷ್ಯಾಕಪ್‌ 2022: ಬಾಂಗ್ಲಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11 ಡೀಟೈಲ್ಸ್‌

India vs Bangladesh women

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ರ 15ನೇ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ವನಿತೆಯರ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಭಾರತ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಸಿಲ್ಹೆಟ್‌ನ ಸಿಲ್ಹೆಟ್‌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡದಿಂದ ಹೊರಗುಳಿದಿದ್ದು, ಸ್ಮೃತಿ ಮಂದಾನ ನಾಯಕತ್ವದ ತಂಡವು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕುವ ಯೋಜನೆಯಲ್ಲಿದೆ. ಮೊದಲ ಮೂರು ಪಂದ್ಯಗಳನ್ನ ಗೆದ್ದ ಬಳಿಕ, ಕಳೆದ ಪಾಕಿಸ್ತಾನ ವಿರುದ್ಧ ಅನುಭವಿಸಿದ ಹೀನಾಯ ಸೋಲಿನ ಮುಖಭಂಗದಿಂದ ಹೊರಬರಲು ಭಾರತದ ವನಿತೆಯರು ಸೂಕ್ತ ಯೋಜನೆ ರೂಪಿಸಿದ್ದಾರೆ.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಭಾರತ 3 ಗೆಲುವು ಮತ್ತು 1 ಸೋಲಿನ ಮೂಲಕ ಆರು ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಪಾಕ್‌ ಅಷ್ಟೇ ಅಂಕದೊಂದಿಗೆ ಎರಡನೇ ಸ್ಥಾನ ಅಲಂಕರಿಸಿದೆ. ಇನ್ನು ಬಾಂಗ್ಲಾದೇಶ ವನಿತೆಯರು ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಮತ್ತು 1 ಸೋಲಿನೊಂದಿಗೆ 4 ಪಾಯಿಂಟ್ಸ್‌ನೊಂದಿಗೆ 4ನೇ ಸ್ಥಾನದಲ್ಲಿದ್ದು, ಶ್ರೀಲಂಕಾ 6 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಪಡೆದಿದೆ.

ಪಾಕಿಸ್ತಾನ ಎದುರು ಸೋತು ಮುಖಭಂಗ ಎದುರಿಸಿರುವ ಭಾರತದ ವನಿತೆಯರು

ಪಾಕಿಸ್ತಾನ ಎದುರು ಸೋತು ಮುಖಭಂಗ ಎದುರಿಸಿರುವ ಭಾರತದ ವನಿತೆಯರು

ಪಾಕಿಸ್ತಾನ ವನಿತೆಯರ ವಿರುದ್ಧ ಕಳೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಹೀನಾಯ ಸೋಲನ್ನ ಅನುಭವಿಸಿತು. ಸುಲಭ ಗುರಿಯನ್ನ ಬೆನ್ನಟ್ಟಲಾಗದೇ 13ರನ್‌ಗಳಿಂದ ಸೋಲನ್ನ ಅನುಭವಿಸಿದ್ದಾರೆ. 138 ರನ್ ಗುರಿ ಬೆನ್ನತ್ತಿದ ಭಾರತದ ಮಹಿಳಾ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಸ್ಮೃತಿ ಮಂಧಾನ 17, ಸಬ್ಬಿನೇನಿ ಮೇಘನಾ 15, ಜೆಮಿಮಾ ರಾಡ್ರಿಗಸ್ 2, ದಯಾಲನ್ ಹೇಮಲತಾ 20, ದೀಪ್ತಿ ಶರ್ಮಾ 16, ಹರ್ಮನ್‌ಪ್ರೀತ್ ಕೌರ್ 12, , ರಿಚಾ ಘೋಷ್ 26, ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 3, ರೇಣುಕಾ ಸಿಂಗ್ 2, ರಾಜೇಶ್ವರಿ ಗಾಯಕ್ವಾಡ್‌ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.

ಗೆಲ್ಲುವ ಪಂದ್ಯವನ್ನ ಕೈ ಚೆಲ್ಲಿದ ಭಾರತದ ವನಿತೆಯರು 19.4 ಓವರ್‌ಗಳಲ್ಲಿ 124ರನ್‌ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಏಷ್ಯಾಕಪ್‌ನಲ್ಲಿ ಭಾರತ ಮೊದಲ ಸೋಲನ್ನ ಅನುಭವಿಸಿತು. ಆದ್ರೆ ಗೆಲುವಿನ ಹಾದಿಗೆ ಮರಳಲು ಭಾರತ ಈ ಪಂದ್ಯ ಗೆಲ್ಲಲೇಬೇಕಾಗಿದ್ದು, ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಬಾಂಗ್ಲಾದೇಶ ಕೂಡ ಈ ಪಂದ್ಯ ಜಯಿಸಬೇಕಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

T20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ, ದ.ಆಫ್ರಿಕಾ ಸರಣಿಯಿಂದ ದೀಪಕ್ ಚಹಾರ್ ಔಟ್‌

ಭಾರತ ಮಹಿಳಾ ತಂಡದ ಪ್ಲೇಯಿಂಗ್ 11

ಭಾರತ ಮಹಿಳಾ ತಂಡದ ಪ್ಲೇಯಿಂಗ್ 11

ಸ್ಮೃತಿ ಮಂದಾನ (ನಾಯಕಿ), ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್‌

ಬೆಂಚ್‌: ಶಫಾಲಿ ವರ್ಮಾ, ಸ್ನೇಹ ರಾಣಾ, ಕಿರಣ್ ನವ್ಗಿರೆ, ಮೇಘನಾ ಸಿಂಗ್‌

ತ್ರಿಕೋನ ಟಿ20 ಸರಣಿ: ಪಾಕ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ ಆಯ್ಕೆ, ಪ್ಲೇಯಿಂಗ್ 11

ಬಾಂಗ್ಲಾದೇಶ ಮಹಿಳಾ ತಂಡದ ಪ್ಲೇಯಿಂಗ್ 11

ಬಾಂಗ್ಲಾದೇಶ ಮಹಿಳಾ ತಂಡದ ಪ್ಲೇಯಿಂಗ್ 11

ಮುರ್ಷಿದಾ ಖಾತುನ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ನಾಯಕಿ ಮತ್ತು ವಿಕೆಟ್ ಕೀಪರ್), ರಿತು ಮೋನಿ, ಲತಾ ಮೊಂಡಲ್, ಫಾಹಿಮಾ ಖಾತುನ್, ರುಮಾನಾ ಅಹ್ಮದ್, ನಹಿದಾ ಅಕ್ಟರ್, ಸಲ್ಮಾ ಖಾತುನ್, ಫರಿಹಾ ತ್ರಿಸ್ನಾ, ಶಂಜಿದಾ ಅಕ್ಟರ್

ಬೆಂಚ್‌: ಶಮೀಮಾ ಸುಲ್ತಾನಾ, ಶೋಹೆಲಿ ಅಖ್ತರ್, ಸೋಭಾನಾ ಮೊಸ್ತರಿ, ಜಹಾನಾರಾ ಆಲಂ

Story first published: Saturday, October 8, 2022, 13:24 [IST]
Other articles published on Oct 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+