Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಷ್ಯಾಕಪ್ 2022: ಥಾಯ್ಲೆಂಡ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ

India women vs Thailand women

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ರ 19ನೇ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಟಾಸ್ ಗೆದ್ದಿರುವ ಭಾರತದ ವನಿತೆಯರು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳೆಯರ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತಕ್ಕೆ ಇದು ಕೇವಲ ಔಪಚಾರಿಕ ಪಂದ್ಯವಾಗಿ ಮಾರ್ಪಟ್ಟಿದೆ. ಇನ್ನು ಪಾಕಿಸ್ತಾನ ವನಿತೆಯರಿಗೆ ಶಾಕ್ ನೀಡಿದ್ದ ಥಾಯ್ಲೆಂಡ್ ವನಿತೆಯರನ್ನ ಹಗುರವಾಗಿ ಪರಿಗಣಿಸದಿರಲು ತೀರ್ಮಾನಿಸಿದೆ.

ಸ್ಮೃತಿ ಮಂದಾನ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಭಾರತ

ಸ್ಮೃತಿ ಮಂದಾನ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಭಾರತ

ಕಳೆದ ಪಂದ್ಯದಲ್ಲಿ ಅನಾರೋಗ್ಯದಿಂದಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಡಿರಲಿಲ್ಲ. ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಕೌರ್ ಫಿಟ್‌ ಇಲ್ಲದ ಕಾರಣ ಸ್ಮತಿ ಮಂದಾನ ನೇತೃತ್ವದಲ್ಲಿ ತಂಡ ಮುನ್ನಡೆಯುತ್ತಿದೆ. ಇದು ಮಂದಾನಗೆ 100ನೇ ಟಿ20 ಪಂದ್ಯವಾಗಿರುವುದು ವಿಶೇಷ.

ಭಾರತ ಮಹಿಳಾ ತಂಡದಲ್ಲಿ ರೇಣುಕಾ ಬದಲು ಮೇಘನಾ ಸಿಂಗ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗಿದೆ. ಥಾಯ್ಲೆಂಡ್ ತಂಡದಲ್ಲೂ ಒಂದು ಬದಲಾವಣೆಯಾಗಿದ್ದು, ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಅನ್ನು ಈ ಕೆಳಗೆ ಕಾಣಬಹುದಾಗಿದೆ.

IND vs WAXI 1st T20: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ, ಪ್ಲೇಯಿಂಗ್ 11

ಟೀಂ ಇಂಡಿಯಾ ವನಿತೆಯರ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ವನಿತೆಯರ ಪ್ಲೇಯಿಂಗ್ ಇಲೆವೆನ್

ಶಫಾಲಿ ವರ್ಮಾ, ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಕಿರಣ್ ನವಗಿರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ಸ್ನೇಹ ರಾಣಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ಬೆಂಚ್: ರೇಣುಕಾ ಸಿಂಗ್, ಹರ್ಮನ್‌ಪ್ರೀತ್ ಕೌರ್, ರಾಧಾ ಯಾದವ್, ದಯಾಳನ್ ಹೇಮಲತಾ

ಸಚಿನ್ ಮತ್ತು ದ್ರಾವಿಡ್‌ ದಾಖಲೆಯನ್ನ ಬ್ರೇಕ್ ಮಾಡಿದ ಶ್ರೇಯಸ್-ಕಿಶನ್ ಜೋಡಿ

ಥಾಯ್ಲೆಂಡ್ ವನಿತೆಯರ ಪ್ಲೇಯಿಂಗ್ ಇಲೆವೆನ್

ಥಾಯ್ಲೆಂಡ್ ವನಿತೆಯರ ಪ್ಲೇಯಿಂಗ್ ಇಲೆವೆನ್

ನನ್ನಪಟ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಮೊಲ್ ಚೈವಾಯ್ (ನಾಯಕಿ), ಸೊರ್ನರಿನ್ ಟಿಪ್ಪೊಚ್, ಚನಿಡಾ ಸುತ್ತಿರುಯಾಂಗ್, ರೊಸೆನನ್ ಕಾನೊಹ್, ಫನ್ನಿತಾ ಮಾಯಾ, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಮ್

ಬೆಂಚ್: ಬಂತೀದ ಲೀಫತ್ತನ, ಸುಲೀಪೋರ್ನ್ ಲಾವೋಮಿ, ಸುವಾನನ್ ಖಿಯಾಟೊ, ಅಫಿಸರ ಸುವಾಂಚೋನ್ರತಿ, ಸುನಿದಾ ಚತುರೋಗ್ರತ್ತಾನ

Story first published: Monday, October 10, 2022, 14:41 [IST]
Other articles published on Oct 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+