FIFA World cup 2022: ಇಂದು ಫುಟ್ಬಾಲ್ ವಿಶ್ವಕಪ್‌ಗೆ ವಿದ್ಯುಕ್ತ ಚಾಲನೆ, ಪಂದ್ಯದ ಸಮಯ, ನೇರಪ್ರಸಾರ, ಸ್ಕ್ವಾಡ್ ಮಾಹಿತಿ

ಅಂತೂ ಇಂತೂ ಆ ಸಮಯ ಬಂದೇ ಬಿಟ್ಟಿತು. ಕ್ರೀಡಾಲೋಕದ ಬಹುದೊಡ್ಡ ಹಬ್ಬ ಫಿಫಾ ವಿಶ್ವಕಪ್ 2022ಗೆ ಕ್ಷಣಗಣನೆ ಶುರುವಾಗಿದ್ದು, ಸೂಪರ್ ಸಂಡೇಯಂದು ವಿದ್ಯುಕ್ತ ಚಾಲನೆ ಸಿಗಲಿದೆ. ಇಂದು ಆರಂಭಗೊಳ್ಳಲಿರುವ (ನವೆಂಬರ್ 20) ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಆರಂಭಗೊಳ್ಳಲಿದೆ.
ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಕತಾರ್‌ನಲ್ಲಿ ನಡೆಯುತ್ತಿದ್ದು, ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಮೊದಲ ಫುಟ್ಬಾಲ್ ವಿಶ್ವಕಪ್ ಇದಾಗಿದೆ. ಇನ್ನು ಏಷ್ಯಾದಲ್ಲಿ 2002ರ ಬಳಿಕ ನಡೆಯುತ್ತಿರುವ ಎರಡನೇ ವಿಶ್ವಕಪ್ ಇದಾಗಿದೆ. ಇದಕ್ಕೂ ಮುನ್ನ 2002ರ ಆವೃತ್ತಿಯು ದಕ್ಷಿಣ ಆಫ್ರಿಕಾ ಮತ್ತು ಜಪಾನ್ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ಆಯೋಜಿಸಲಾಗಿತ್ತು.
ಪಂದ್ಯದ ಆರಂಭಕ್ಕೂ ಮುನ್ನ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಲ್ ಖೋರ್‌ನಲ್ಲಿರುವ ಅಲ್ ಬೇತ್ ಸ್ಟೇಡಿಯಂ ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗಿದೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಸ್ಪರ್ಧೆ ನಡೆಸಲಿವೆ. ಇದರಲ್ಲಿ ಬ್ರೆಜಿಲ್, ಪೋರ್ಚುಗಲ್, ಸ್ಪೇನ್, ಫ್ರಾನ್ಸ್, ಜರ್ಮನಿ, ಅರ್ಜೆಂಟೈನಾದಂತಹ ಬಲಿಷ್ಟ ತಂಡಗಳನ್ನು ಕಾಣಬಹುದಾಗಿದ್ದು, ಮೊದಲ ಪಂದ್ಯದಲ್ಲಿ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗುತ್ತಿದೆ. ಉಭಯ ರಾಷ್ಟ್ರಗಳ ಸ್ಕ್ವಾಡ್ ಜೊತೆಗೆ ಪಂದ್ಯವನ್ನು ಹೇಗೆ ವೀಕ್ಷಿಸಬಹುದು ಎಂಬ ಮಾಹಿತಿ ಈ ಕೆಳಗಿದೆ.

ಫಿಫಾ ವಿಶ್ವಕಪ್ ನೇರ ಪ್ರಸಾರ ವೀಕ್ಷಿಸುವುದು ಹೇಗೆ?
ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18ನ ಸ್ಪೋರ್ಟ್ಸ್18 ಮತ್ತು ಸ್ಪೋರ್ಟ್ಸ್18 HD ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಈ ಚಾನೆಲ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ವರದಿಗಳ ಪ್ರಕಾರ ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರವನ್ನು voot ನಲ್ಲಿ ವೀಕ್ಷಿಸಬಹುದಾಗಿದೆ.
ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಕತಾರ್ ಮತ್ತು ಈಕ್ವೆಡಾರ್ ಸ್ಕ್ವಾಡ್ ಈ ಕೆಳಗಿದೆ.
ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ನೀವು ತಿಳಿದುಕೊಂಡಿರಬೇಕಾದ ಪ್ರಮುಖ ಮಾಹಿತಿಗಳು

ಕತಾರ್ ಫುಟ್ಬಾಲ್ ಸ್ಕ್ವಾಡ್
ಗೋಲ್‌ಕೀಪರ್ಸ್: ಸಾದ್ ಅಲ್-ಶೀಬ್, ಮೆಶಾಲ್ ಬರ್ಶಮ್, ಯೂಸೆಫ್ ಹಸನ್
ಡಿಫೆಂಡರ್ಸ್: ಪೆಡ್ರೊ ಮಿಗುಯೆಲ್, ಮುಸಾಬ್ ಖಿದಿರ್, ತಾರೆಕ್ ಸಲ್ಮಾನ್, ಬಸ್ಸಾಮ್ ಅಲ್-ರಾವಿ, ಬೌಲೆಮ್ ಖೌಖಿ, ಅಬ್ದೆಲ್ಕರೀಮ್ ಹಸನ್, ಹೊಮಾಮ್ ಅಹ್ಮದ್, ಜಸ್ಸೆಮ್ ಗೇಬರ್
ಮಿಡ್‌ಫೀಲ್ಡರ್‌ರ್ಸ್: ಅಲಿ ಅಸದ್, ಅಸಿಮ್ ಮಡಾಬೊ, ಮೊಹಮ್ಮದ್ ವಾದ್, ಸೇಲಂ ಅಲ್-ಹಜ್ರಿ, ಮೌಸ್ತಫಾ ತಾರೆಕ್, ಕರೀಮ್ ಬೌಡಿಯಾಫ್, ಅಬ್ದೆಲಾಜಿಜ್ ಹಾತಿಮ್, ಇಸ್ಮಾಯಿಲ್ ಮೊಹಮದ್
ಫಾರ್ವರ್ಡ್ಸ್: ನೈಫ್ ಅಲ್-ಹದ್ರಮಿ, ಅಹ್ಮದ್ ಅಲಾಲ್ದಿನ್, ಹಸನ್ ಅಲ್-ಹೇದೋಸ್, ಖಾಲಿದ್ ಮುನೀರ್, ಅಕ್ರಮ್ ಅಫೀಫ್, ಅಲ್ಮೋಜ್ ಅಲಿ, ಮೊಹಮ್ಮದ್ ಮುಂತಾರಿ
ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ವರ್ಷಕ್ಕೆ ಎಷ್ಟು ಆದಾಯ? ವಿಶ್ವಕಪ್‌ನಿಂದ ಎಷ್ಟು ಲಾಭ?

ಈಕ್ವೆಡಾರ್ ಫುಟ್ಬಾಲ್ ಸ್ಕ್ವಾಡ್
ಗೋಲ್‌ಕೀಪರ್ಸ್: ಮೊಯಿಸೆಸ್ ರಾಮಿರೆಜ್, ಅಲೆಕ್ಸಾಂಡರ್ ಡೊಮಿಂಗಸ್, ಹೆರ್ನಾನ್ ಗಲಿಂಡೆಜ್
ಡಿಫೆಂಡರ್ಸ್: ಪಿಯೆರೊ ಹಿನ್‌ಕಾಪಿ, ರಾಬರ್ಟ್ ಅರ್ಬೊಲೆಡಾ, ಪರ್ವಿಸ್ ಎಸ್ಟುಪಿನಾನ್, ಏಂಜೆಲೊ ಪ್ರೆಸಿಯಾಡೊ, ಜಾಕ್ಸನ್ ಪೊರೊಜೊ, ಕ್ಸೇವಿಯರ್ ಅರೇಗಾ, ಫೆಲಿಕ್ಸ್ ಟೊರೆಸ್, ಡಿಯಾಗೋ ಪಲಾಸಿಯೊಸ್, ವಿಲಿಯಂ ಪಾಚೊ
ಮಿಡ್‌ಫೀಲ್ಡರ್‌ರ್ಸ್: ಕಾರ್ಲೋಸ್ ಗ್ರೂಜೊ, ಜೋಸ್ ಸಿಫುಯೆಂಟೆಸ್, ಅಲನ್ ಫ್ರಾಂಕೊ, ಮೊಯಿಸೆಸ್ ಕೈಸೆಡೊ, ಏಂಜೆಲ್ ಮೆನಾ, ಜೆರೆಮಿ ಸರ್ಮಿಯೆಂಟೊ, ಐರ್ಟನ್ ಪ್ರಿಸಿಯಾಡೊ, ಸೆಬಾಸ್ಟಿಯನ್ ಮೆಂಡೆಜ್, ಗೊಂಜಾಲೊ ಪ್ಲಾಟಾ, ರೊಮಾರಿಯೊ ಇಬಾರಾ
ಫಾರ್ವರ್ಡ್ಸ್: ಜೋರ್ಕೆಫ್ ರಿಯಾಸ್ಕೋ, ಕೆವಿನ್ ರೊಡ್ರಿಗಸ್, ಮೈಕೆಲ್ ಎಸ್ಟ್ರಾಡಾ, ಎನ್ನರ್ ವೇಲೆನ್ಸಿಯಾ

ಫಿಫಾ ವಿಶ್ವಕಪ್‌ಗೆ 8 ಸ್ಟೇಡಿಯಂಗಳ ಆತಿಥ್ಯ
ಫಿಫಾ ವಿಶ್ವಕಪ್ 2022 ಉದ್ಘಾಟನಾ ಕಾರ್ಯಕ್ರಮದ ಜೊತೆಗೆ ಕತಾರ್ ಮತ್ತು ಈಕ್ವೆಡಾರ್‌ನ ಮೊದಲ ಪಂದ್ಯಕ್ಕೆ ಅಲ್ ಬೇತ್ ಸ್ಟೇಡಿಯಂ ಆತಿಥ್ಯ ವಹಿಸಿದ್ದು, 60,000 ವೀಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ. ಒಟ್ಟಾರೆ ವಿಶ್ವಕಪ್‌ಗೆ ಕತಾರ್‌ನ 8 ಸ್ಟೇಡಿಯಂಗಳು ಸಜ್ಜಾಗಿದ್ದು, ಅವುಗಳ ಹೆಸರು ಮತ್ತು ವೀಕ್ಷಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಈ ಕೆಳಗಿದೆ.
1) ಲುಸೇಲ್ - ಲುಸೇಲ್ ಸ್ಟೇಡಿಯಂ : 80,000 ಆಸನಗಳು
2) ಅಲ್ ಖೋರ್ - ಅಲ್ ಬೇತ್ ಸ್ಟೇಡಿಯಂ : 60,000 ಆಸನಗಳು
3) ಅಲ್ ವಕ್ರಾ - ಅಲ್ ಜನೌಬ್ ಸ್ಟೇಡಿಯಂ : 40,000 ಆಸನಗಳು
4) ಅಲ್ ರಯಾನ್ - ಅಹ್ಮದ್ ಬಿನ್ ಅಲಿ ಸ್ಟೇಡಿಯಂ : 40,000 ಆಸನಗಳು
5) ದೋಹಾ - ಖಲೀಫಾ ಇಂಟರ್‌ನ್ಯಾಷನಲ್ ಸ್ಟೇಡಿಯಂ : 40,000 ಆಸನಗಳು
6) ದೋಹಾ - ಎಜುಕೇಶನ್ ಸಿಟಿ ಸ್ಟೇಡಿಯಂ : 40,000 ಆಸನಗಳು
7) ದೋಹಾ - ಸ್ಟೇಡಿಯಂ 974 : 40,000 ಆಸನಗಳು
8) ದೋಹಾ - ಅಲ್ ತುಮಾಮಾ ಸ್ಟೇಡಿಯಂ : 40,000 ಆಸನಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications