ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ನೀವು ತಿಳಿದುಕೊಂಡಿರಬೇಕಾದ ಪ್ರಮುಖ ಮಾಹಿತಿಗಳು

Qatar 2022: Participating teams to the biggest stars all the things you need to know about the FIFA World Cup

ವಿಶ್ವದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎನಿಸಿಕೊಂಡಿರುವ ಫುಟ್ಬಾಲ್‌ನ ಅತಿ ದೊಡ್ಡ ಕ್ರೀಡಾಕೂಟ ಫಿಫಾ ವಿಶ್ವಕಪ್ ಭಾನುವಾರದಿಂದ ಆರಂಭವಾಗಲಿದೆ. ಈ ಬಾರಿಯ ಫಿಫಾ ವಿಶ್ವಕಪ್ ಕತಾರ್‌ನಲ್ಲಿ ಆಯೋಜನೆಯಾಗಲಿದ್ದು ಕ್ರಿಕೆಟ್ ಪ್ರೇಮಿಗಳು ಈ ಪ್ರತಿಷ್ಠಿತ ಟೂರ್ನಿಗಾಗಿ ಎದುರು ನೋಡುತ್ತಿದ್ದಾರೆ.

ಲಿಯೋನೆಲ್ ಮೆಸ್ಸಿ, ಕ್ರಿಶ್ಚಿಯಾನೋ ರಿನಾಲ್ಡೋ ಅವರಂತಾ ದಿಗ್ಗಜ ಆಟಗಾರರಿಗೆ ಬಹುತೇಕ ಇದು ಅಂತಿಮ ವಿಶ್ವಕಪ್ ಟೂರ್ನಿಯಾಗಿದ್ದು ಈ ಆಟಗಾರರ ಕೋಟ್ಯಂತರ ಅಭಿಮಾನಿಗಳಿಗೆ ಇದು ವಿಶೇಷ ಕ್ಷಣವಾಗಿರಲಿದೆ. 32 ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

IND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆIND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆ

ಯಾವಾಗ ಆರಂಭವಾಗಲಿದೆ ಫಿಫಾ ವಿಶ್ವಕಪ್
ಕತಾರ್ ವಿಶ್ವಕಪ್‌ಗೆ ನವೆಂಬರ್ 20ರಂದು ಅಲ್ ಬೇಟ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಆತಿಥೇಯ ಕತಾರ್ ಹಾಗೂ ಈಕ್ವೆಡಾರ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇನ್ನು ಡಿಸೆಂಬರ್ 18 ರಂದು ಟೂರ್ನಮೆಂಟ್ ಅಂತ್ಯವಾಗಲಿದ್ದು ಲುಸೇಲ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು ಒಟ್ಟು 29 ದಿನಗಳ ಕಾಲ ಈ ಟೂರ್ನಿ ನಡೆಯಲಿದೆ.

2022ರ ಫಿಫಾ ವಿಶ್ವಕಪ್‌ನ ಸ್ಟೇಡಿಯಂಗಳು
2022ರ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳು ಕತಾರ್‌ನಲ್ಲಿ ನಿರ್ಮಿಸಿರುವ ಎಂಟು ವಿಭಿನ್ನ ಕ್ರೀಡಾಂಗಣಗಳಲ್ಲಿ ಆಯೋಜನೆಯಾಗಲಿದೆ. ಅವುಗಳೆಂದರೆ ಲುಸೈಲ್ ಐಕಾನಿಕ್ ಸ್ಟೇಡಿಯಂ, ಅಲ್ ಬೈಟ್ ಸ್ಟೇಡಿಯಂ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ, ಸ್ಟೇಡಿಯಂ 974, ಅಲ್ ಥುಮಾಮಾ ಸ್ಟೇಡಿಯಂ, ಎಜುಕೇಶನ್ ಸಿಟಿ ಸ್ಟೇಡಿಯಂ ಮತ್ತು ಅಲ್ ವಕ್ರಾಹ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್.

ಕತಾರ್ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ತಂಡಗಳು
2022ರ ಫಿಫಾ ವಿಶ್ವಕಪ್‌ನಲ್ಲಿ 32 ದೇಶಗಳು ಸ್ಪರ್ಧಿಸುತ್ತಿವೆ. ಅವುಗಳೆಂದರೆ ಆತಿಥೆಯ ತಂಡ ಕತಾರ್, ಅರ್ಜೆಂಟೀನಾ, ಬ್ರೆಜಿಲ್, ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್, ಬೆಲ್ಜಿಯಂ, ಪೋರ್ಚುಗಲ್, ಜರ್ಮನಿ, ನೆದರ್ಲ್ಯಾಂಡ್ಸ್, ಉರುಗ್ವೆ, ಕ್ರೊವೇಶಿಯಾ, ಡೆನ್ಮಾರ್ಕ್, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಸೆನೆಗಲ್ , ವೇಲ್ಸ್, ಪೋಲೆಂಡ್, ಆಸ್ಟ್ರೇಲಿಯಾ, ಜಪಾನ್, ಮೊರಾಕ್ಕೊ, ಸ್ವಿಜರ್ಲ್ಯಾಂಡ್, ಘಾನಾ, ಕೊರಿಯಾ ರಿಪಬ್ಲಿಕ್, ಕ್ಯಾಮರೂನ್, ಸೆರ್ಬಿಯಾ, ಕೆನಡಾ, ಕೋಸ್ಟರಿಕಾ, ಟ್ಯುನೀಶಿಯಾ, ಸೌದಿ ಅರೇಬಿಯಾ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಈಕ್ವೆಡಾರ್.

ಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿ

ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ದಿಗ್ಗಜ ಆಟಗಾರರು
ಕತಾರ್ ವಿಶ್ವಕಪ್‌ನಲ್ಲಿ ಅನೇಕ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಕೆಲ ದಿಗ್ಗಜ ಆಟಗಾರರು ಯಾರೆಂದರೆ, ಅರ್ಜೆಂಟಿನಾದ ದಿಗ್ಗಜ ಲಿಯೋನೆಲ್ ಮೆಸ್ಸಿ, ಪೋರ್ಚುಗಲ್‌ನ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ, ಬ್ರೆಜಿಲ್‌ನ ನೇಮಾರ್, ಫ್ರಾನ್ಸ್‌ನ ಯುವ ತಾರೆ ಕಿಲಿಯನ್ ಎಮ್‌ಬಪ್ಪೆ ಹಾಗೂ ಬೆಲ್ಜಿಯಂನ ಕೆವಿಯನ್ ಡಿ ಬ್ರುಯ್ನೆ.

ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡಗಳು ಹಾಗೂ ಡಾರ್ಕ್ ಹಾರ್ಸ್‌ಗಳು
ಬ್ರೆಜಿಲ್ ಅರ್ಜೆಂಟಿನಾ ಹಾಗೂ ಫ್ರಾನ್ಸ್ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಟ್ರೋಪಿ ಗೆಲ್ಲುವ ಮೂರು ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದೆ. ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ಪ್ರಸ್ತಿತ ನಂಬರ್ 1 ತಂಡ ಎನಿಸಿಕೊಂಡಿದೆ. ಅಲ್ಲದೆ ಸಾಕಷ್ಟು ಸ್ಟಾರ್ ಆಟಗಾರರು ಈ ತಂಡದಲ್ಲಿದ್ದಾರೆ.

1978 ಹಾಗೂ 1986ರಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಅರ್ಜೆಂಟಿನಾ ತಂಡ ಈ ಬಾರಿ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಅದರಲ್ಲೂ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಟ್ರೋಫಿ ಗೆಲ್ಲುವ ಕನಸಿಗಾಗಿ ಇಡೀ ತಂಡ ಒಗ್ಗಟ್ಟಾಗಿ ಕಾದಾಡುವ ಹುರುಪಿನಲ್ಲಿದೆ.

ಹಾಲಿ ಚಾಂಪಿಯನ್ ಫ್ರಾನ್ಸ್ ಸಾಕಷ್ಟು ಉತ್ಸಾಹದ ತಂಡವಾಗಿದ್ದು ಈ ಬಾರಿ ಗೆದ್ದು ಚಾಂಪಿಯನ್ ಪಟ್ಟವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಇನ್ನು ಬೆಲ್ಜಿಯಂ, ಸ್ಪೇನ್, ಜರ್ಮನಿ, ಇಂಗ್ಲೆಂಡ್ ಮತ್ತು ಪೋರ್ಚುಗಲ್ ತಂಡಗಳು ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಸ್ಪರ್ಧೆಯಲ್ಲಿ ಡಾರ್ಕ್ ಹಾರ್ಸ್‌ಗಳಾಗಿ ಗುರುತಿಸಿಕೊಂಡಿದೆ.

Story first published: Saturday, November 19, 2022, 21:51 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X