ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಮರು ಪ್ರಶ್ನೆಯೇ ಇಲ್ಲ: ವಿಶ್ವನಾಥ್ ಆನಂದ್

ಭಾರತದ ಲೆಜೆಂಡರಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ಚೆಸ್ ಒಲಿಂಪಿಯಾಡ್ ರಷ್ಯಾದಿಂದ ಚೆನ್ನೈಗೆ ಸ್ಥಳಾಂತರಗೊಂಡ ನಂತರವೂ, ಒಲಿಂಪಿಯಾಡ್‌ನಲ್ಲಿ ಆಡದಿರುವ ನಿರ್ಧಾರವನ್ನು ಮರುಪರಿಶೀಲಿಸುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ನಡೆಯಬೇಕಿದ್ದ 44ನೇ ಚೆಸ್ ಒಲಿಂಪಿಯಾಡ್, ಚೆಸ್ ತವರು ಭಾರತದ ಚೆನ್ನೈಗೆ ಸ್ಥಳಾಂತರಿಸಿದರೂ ಸಹ ಪಂದ್ಯಾವಳಿಯಲ್ಲಿ ಆಡದಿರುವ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತದ ದಿಗ್ಗಜ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಸ್ಪಷ್ಟಪಡಿಸಿದ್ದಾರೆ.
ಜುಲೈ 28 ರಿಂದ ಆಗಸ್ಟ್ 10 ರವರೆಗೆ ಮಹಾಬಲಿಪುರಂನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್‌ಗೆ ಭಾರತ ತಂಡದ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿರುವುದು ಸಂತಸ ತಂದಿದೆ ಎಂದರು. ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದು ಗೊತ್ತೇ ಇದೆ. ಮತ್ತು ಪ್ರಸ್ತುತ ಚೆಸ್ ಒಲಿಂಪಿಯಾಡ್‌ಗೆ, ಅವರು ಮಾರ್ಗದರ್ಶಕರಾಗಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.

ಚೆಸ್ ಒಲಿಂಪಿಯಾಡ್‌ನಲ್ಲಿ ಆಡುವ ಬಗ್ಗೆ ಯೋಚಿಸಿಲ್ಲ
'ಇಲ್ಲ.. ನಾನು ಮತ್ತೆ ಚೆಸ್ ಒಲಿಂಪಿಯಾಡ್ ಆಡುವ ಬಗ್ಗೆ ಯೋಚಿಸುತ್ತಿಲ್ಲ. ಇದು ಭಾರತದಲ್ಲಿ ಅಥವಾ ಬೇರೆಲ್ಲಿಯಾದರೂ ನಡೆಯಲಿ, ನಾನು ಅದನ್ನು ಆಡಲು ಬಯಸುವುದಿಲ್ಲ. ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ' ಎಂದು 52 ವರ್ಷದ ವಿಶ್ವನಾಥ್ ಆನಂದ್ ಪಿಟಿಐಗೆ ತಿಳಿಸಿದರು.
ಆನಂದ್ ಅವರು ಆಡಲು ಇಷ್ಟಪಡದಿರುವುದಕ್ಕೆ ಸಮಂಜಸವಾದ ಕಾರಣಗಳನ್ನು ಸಹ ನೀಡಿದರು. "ನಾನು ವಿಶ್ವ ಚಾಂಪಿಯನ್‌ಶಿಪ್ ಸೈಕಲ್‌ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿಲ್ಲ. ಆದಾಗ್ಯೂ, ನನ್ನ ಮನಸ್ಸನ್ನು ಬದಲಾಯಿಸಲು ನಾನು ಬಯಸುವುದಿಲ್ಲ'' ಎಂದು ಆನಂದ್ ಹೇಳಿದ್ದಾರೆ.
ಭಾರತದಲ್ಲಿ ಈಗ ಅನೇಕ ಶ್ರೇಷ್ಠ ಯುವ ಚೆಸ್ ಆಟಗಾರರಿದ್ದಾರೆ. ಹಾಗಾದರೆ ನಾವು ಮತ್ತೆ ಏಕೆ ಆಡಬೇಕು? ಅವರು ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಮಾರ್ಗದರ್ಶನಕ್ಕಾಗಿ ನನ್ನನ್ನು ಸಂಪರ್ಕಿಸಲು ಬಯಸಿದರೆ ನಾನು ಅವರಿಗೆ ಲಭ್ಯವಾಗಲು ಪ್ರಯತ್ನಿಸುತ್ತೇನೆ. ನಾನು ಈಗಾಗಲೇ ಕೆಲವು ಭಾರತೀಯ ತಂಡದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನೀಗ ಉತ್ಸಾಹಿ ಶಿಕ್ಷಕನಾಗಲು ಬಯಸುತ್ತೇನೆ ಎನ್ನುತ್ತಾರೆ ಆನಂದ್.
ಚೆಸ್ ಒಲಿಂಪಿಯಾಡ್ 2022: ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ

ಭಾರತ ಎಲ್ಲಾ ವಿಭಾಗದಲ್ಲಿ ಸ್ಪರ್ಧಿಸಲಿದೆ
ಒಲಿಂಪಿಯಾಡ್‌ನಲ್ಲಿ ಭಾರತದ ಮೂರು ತಂಡಗಳು ಮುಕ್ತ ವಿಭಾಗದಲ್ಲಿ ಮತ್ತು ಮೂರು ತಂಡಗಳು ಮಹಿಳೆಯರ ವಿಭಾಗದಲ್ಲಿ ಭಾಗವಹಿಸಲಿವೆ. ಈ ಬಾರಿ ಭಾರತದ ಹಲವು ಆಟಗಾರರು ಪಾಲ್ಗೊಳ್ಳುತ್ತಿರುವುದರಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ದೇಶದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿದ್ದರೂ ತಂಡದ ಮೇಲೆ ಒತ್ತಡ ಹೇರದಿರುವುದು ಬಹಳ ಮುಖ್ಯ ಎಂದು ಆನಂದ್ ಹೇಳಿದರು.
''ನಮ್ಮ ತಂಡದ ಆಟಗಾರರಿಗೆ ಕೂಲ್ ಆಗಿರಲು ಮತ್ತು ಒತ್ತಡವನ್ನು ಅನುಭವಿಸದಿರಲು ನೆನಪಿಸುವುದು ಮುಖ್ಯ ವಿಷಯ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿರುವುದು ಸಂತಸ ತಂದಿದೆ. ಆಟಗಾರರು ಒತ್ತಡಕ್ಕೆ ಒಳಗಾಗುವುದರಿಂದ ಯಾವುದೇ ಪ್ರಯೋಜನವಿಲ್ಲ'' ಎಂದು ಆನಂದ್ ಹೇಳಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ 2022: ಸ್ವಾತಂತ್ರ್ಯದ ನಂತರ ಭಾರತದ ಪದಕಗಳ ಬೇಟೆ; ಇಲ್ಲಿ ಪರಿಶೀಲಿಸಿ

ಚೆಸ್ ಒಲಿಂಪಿಯಾಡ್‌ನಲ್ಲಿ 188 ದೇಶದ ತಂಡಗಳು ಭಾಗಿಯಾಗಲಿದೆ
44ನೇ ಆವೃತ್ತಿಯ ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ನಲ್ಲಿ ಮುಕ್ತ ವಿಭಾಗದಲ್ಲಿ ಒಟ್ಟು 188 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 162 ತಂಡಗಳು ಕಣಕ್ಕಿಳಿದಿರುವುದು ದಾಖಲೆಯಾಗಿದೆ. ಈ ಟೂರ್ನಿಯ ಬಗ್ಗೆ ಆನಂದ್ ಮಾತನಾಡಿದ್ದು ''ಕೊನೆಗೂ ಈ ಒಲಿಂಪಿಯಾಡ್ ಶುರುವಾಗಿದೆ, ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಬಹು ದೊಡ್ಡದಾಗಿದೆ. ಇಷ್ಟು ದೊಡ್ಡ ಟೂರ್ನಿ ನಡೆಯುವುದರಿಂದ ಭಾರತದ ಮೇಲೆ ದೀರ್ಘಕಾಲ ಧನಾತ್ಮಕ ಪರಿಣಾಮ ಬೀರಲಿದೆ'' ಎಂದು ಆನಂದ್ ಹೇಳಿದ್ದಾರೆ.
ಮಾಮಲ್ಲಪುರಂನ ಪೂಂಜೇರಿ ಗ್ರಾಮದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಆರಂಭಿಕ ದಿನ ಯಾವುದೇ ಪಂದ್ಯಗಳಿಲ್ಲ. ಜುಲೈ 29ರಿಂದ ಸ್ಪರ್ಧೆಗಳು ಪ್ರಾರಂಭಗೊಳ್ಳುತ್ತದೆ ಮತ್ತು ಪಂದ್ಯಗಳು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications