Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿನ್ನ ಮಾತ್ರ ಅಲ್ಲ.. ನೀರಜ್ ಚೋಪ್ರ ಗುರಿಯೇ ಬೇರೆ: ಐತಿಹಾಸಿಕ ಸಾಧನೆ ಮಾಡಿದರೂ ಚಾಂಪಿಯನ್‌ಗೆ ಇಲ್ಲ ಸಮಾಧಾನ!!

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರವಾಗಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಮತ್ತೊಮ್ಮೆ ಬೀಗುವಂತೆ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದ ನೀರಜ್ ಚೋಪ್ರ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇದೀಗ ಈ ವರ್ಷ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರ ಸಾಧನೆಗೆ ಕೋಟ್ಯಂತರ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ನೀರಜ್ ಚೋಪ್ರ ಮಾಡಿರುವ ಈ ಐತಿಹಾಸಿಕ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಆದರೆ ಈ ಐತಿಹಾಸಿಕ ಸಾಧನೆಯಿಂದಾಗಿ ಸ್ವತಃ ನೀರಜ್ ಚೋಪ್ರ ಸಂತಸಗೊಂಡಿದ್ದಾರಾದರೂ ಅವರು ಸಂಪೂರ್ಣವಾಗಿ ತೃಪ್ತವಾಗಿಲ್ಲ. ಅದಕ್ಕೆ ಪದಕ ಗೆದ್ದ ಬಳಿಕ ಭಾರತದ ಯುವ ಕ್ರೀಡಾಪಟು ಆಡಿರುವ ಮಾತುಗಳೇ ಸಾಕ್ಷಿ.

Neeraj Chopra Reveals His Aim for 90-Meter Mark After World Athletics Championship Victory

WAC ಚಿನ್ನದ ಪದಕ ನನ್ನ ಕನಸು

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದ ಬಳಿಕ ನೀರಜ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. "ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಲೇಬೇಕೆಂದು ನಾನು ಬಯಸಿದ್ದೆ. ನಾನು ಮತ್ತಷ್ಟು ದೂರಕ್ಕೆ ಎಸೆಯಲು ಬಯಸಿದ್ದೆ. ರಾಷ್ಟ್ರೀಯ ತಂಡಕ್ಕೆ ಇದು ಅದ್ಭುತವಾದ ಸಾಧನೆ. ಆದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಕನಸಾಗಿತ್ತು" ಎಂದಿದ್ದಾರೆ ನೀರಜ್ ಚೋಪ್ರ.

"ಇದು ಭಾರತಕ್ಕೆ ಉತ್ತಮವಾದ ಚಾಂಪಿಯನ್‌ಶಿಪ್ ಆಗಿದೆ. ನನ್ನ ದೇಶಕ್ಕೆ ಮತ್ತೊಂದು ಚಾಂಪಿಯನ್ ಪಟ್ಟ ತಂದುಕೊಂಡಲು ಸಾಧ್ಯವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಇಲ್ಲಿ ನನ್ನ ಅತ್ಯುತ್ತಮ ಸಾಧನೆ ಮಾಡಿದೆ ಎನಿಸುತ್ತಿಲ್ಲ. ಇಂದು ನಾನು ಇನ್ನೂ ದೂರಕ್ಕೆ ಎಸೆಯುವುದನ್ನು ಬಯಸಿದ್ದೆ" ಎಂದಿದ್ದಾರೆ ನೀರಜ್ ಚೋಪ್ರ.

90 ಮೀ. ಗುರಿ ತಲುಪಲು ಸಾಧ್ಯವಾಗದ ಬೇಸರ!

ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೂ 90 ಮೀಟರ್‌ ದೂರಕ್ಕೆ ಎಸೆದು ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನೀರಜ್ ಚೋಪ್ರ ಅವರಲ್ಲಿದೆ. ಇದನ್ನು ಸ್ವತಃ ಚೋಪ್ರ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ತಾನು ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಎಲ್ಲವೂ ನಡೆಯಲಿಲ್ಲ ಎನ್ನುವುದನ್ನು ನೀರಜ್ ಹೇಳಿಕೊಂಡಿದ್ದಾರೆ.

"ನಾನು ಇಂದು 90ಮೀ. ಗೂ ಅಧಿಕ ದೂರಕ್ಕೆ ಎಸೆಯಲು ಬಯಸಿದ್ದೆ. ಆದರೆ ಅದಕ್ಕಾಗಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳಬೇಕಾಗಿತ್ತು. ಆದರೆ ಇಂದು ಸಂಜೆ ಎಲ್ಲವನ್ನೂ ಸೂಕ್ತವಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಹುಶಃ ಮುಂದಿನ ಬಾರಿ ಅದನ್ನು ಸಾಧಿಸುತ್ತೇನೆ" ಎಂದು ನೀರಜ್ ಚೋಪ್ರ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಫೈನಲ್‌ ಸ್ಪರ್ಧೆಯ ತಮ್ಮ ಮೊದಲ ಪ್ರಯತ್ನ ಫೌಲ್ ಮಾಡಿದ ಚೋಪ್ರಾ ನಂತರ ಎರಡನೇ ಸುತ್ತಿನಲ್ಲಿ 88.17ಮೀ ದೂರಕ್ಕೆ ಎಸೆದಿದ್ದರು. ಬಳಿಕ 86.32ಮೀ, 84.64ಮೀ, 87.73ಮೀ ಮತ್ತು 83.98ಮೀ ಎಸೆತಗಳನ್ನು ದಾಖಲಿಸಿದರು. ಈ ಸಂದರ್ಭದಲ್ಲಿ ನೀರಜ್ ಚೋಪ್ರ ಅವರು ಎರಡನೇ ಪ್ರಯತ್ನದಲ್ಲಿ ಎಸೆದ 88.17 ಮೀಟರ್ ದೂರವನ್ನು ಹಿಂದಿಕ್ಕಲು ಉಳಿದ ಎಸೆತಗಾರರಿಂದ ಸಾಧ್ಯವಾಗಲಿಲ್ಲ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇನ್ನು ಕಳೆದ ವರ್ಷ ನೀರಜ್ ಚೋಪ್ರ ಸ್ಟಾಕ್‌ಹೋಮ್ ಡೈಮಂಡ್ ಲೀಗ್ 2022 ಟೂರ್ನಿಯಲ್ಲಿ 89.94 ಮೀ ದೂರಕ್ಕೆ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದರು. ಅಲ್ಲದೆ 90 ಮೀಟರ್‌ಗೆ ಹತ್ತಿರವಾಗಿದ್ದರು. ಹೀಗಾಗಿ ನೀರಜ್ ಚೋಪ್ರ ಅವರ 90. ಮೀಟರ್ ದೂರಕ್ಕೆ ಎಸೆಯುವ ಕನಸು ನನಸಾಗಿಯೇ ಉಳಿದುಕೊಂಡಿದೆ. ಆದರೆ ಅದನ್ನು ಸಾಧಿಸಿಯೇ ತೀರುವ ಆತ್ಮವಿಶ್ವಾಸವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Story first published: Monday, August 28, 2023, 13:49 [IST]
Other articles published on Aug 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+