For Quick Alerts
ALLOW NOTIFICATIONS  
For Daily Alerts
 

ಮುಂಬೈ ತೊರೆಯಲು ರೆಡಿಯಾದ ಮತ್ತೊಬ್ಬ ಪ್ಲೇಯರ್: NOCಗಾಗಿ ಕಾಯುತ್ತಿರುವ ಸಿದ್ದೇಶ್ ಲಾಡ್‌

Siddhesh Lad

ಅರ್ಜುನ್ ತೆಂಡೂಲ್ಕರ್ ಬಳಿಕ ಮುಂಬೈ ತಂಡವನ್ನು ತೊರೆಯಲು ಅನುಭವಿ ಆಟಗಾರ ಸಿದ್ದೇಶ್ ಲಾಡ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಈಗಾಗಲೇ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆದಿದ್ದು ಗೋವಾ ಪರ ಆಡಲಿದ್ದಾರೆ.

ಇದ್ರ ಬೆನ್ನಲ್ಲೇ ಸಿದ್ದೇಶ್ ಲಾಡ್ ಕೂಡ ಗೋವಾದತ್ತ ಮುಖ ಮಾಡಿದ್ದು, ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ನಿಂದ ಎನ್‌ಒಸಿ ಪತ್ರಕ್ಕೆ ಕಾಯುತ್ತಿದ್ದಾರೆ.

ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಲ್ಯಾಂಕಶೈರ್ ಪರ ಕೌಂಟಿ ಕ್ರಿಕೆಟ್ ಆಡುತ್ತಿರುವ ಸಿದ್ದೇಶ್ ಲಾಡ್, ಭಾರತದಲ್ಲಿ ದೇಶೀಯ ಕ್ರಿಕೆಟ್ ಆಡಲು ಮೂರು ಕ್ರಿಕೆಟ್ ಅಸೋಸಿಯೇಷನ್ ಜೊತೆಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಗೋವಾ, ಉತ್ತರಾಖಂಡ ಮತ್ತು ತ್ರಿಪುರಾದಲ್ಲಿ ಒಂದು ರಾಜ್ಯದ ಪರ ಸಿದ್ದೇಶ್‌ ಮುಂದಿನ ದಿನಗಳಲ್ಲಿ ದೇಶೀಯ ಕ್ರಿಕೆಟ್ ಸರಣಿಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಕೆಲವೇ ದಿನಗಳಲ್ಲಿ ತಂಡದ ಅಂತಿಮ ಆಯ್ಕೆಯಾಗಲಿದೆ

ಕೆಲವೇ ದಿನಗಳಲ್ಲಿ ತಂಡದ ಅಂತಿಮ ಆಯ್ಕೆಯಾಗಲಿದೆ

ಸಿದ್ದೇಶ್ ಲಾಡ್ ಸದ್ಯ ಯಾವ ತಂಡದ ಪರ ಆಡುವುದು ಎಂದು ಯೋಚಿಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಅವರು ಗೋವಾ ಅಥವಾ ಉತ್ತರಾಖಂಡ ತಂಡದ ನಾಯಕರಾಗಿ ಕಣಕ್ಕಿಳಿಯಬಹುದು ಎಂದು ಅವರ ಆಪ್ತ ವಲಯವು ತಿಳಿಸಿದೆ.

''ಮುಂಬೈ ಪರ ಆಡುವುದು ಯಾವಾಗಲೂ ಅದ್ಭುತವಾಗಿದೆ. ಇದುವರೆಗೂ 153 ಪಂದ್ಯಗಳಲ್ಲಿ ಮುಂಬೈ ತಂಡವನ್ನ ಪ್ರತಿನಿಧಿಸಿದ್ದ ಗೌರವವಿದ್ದು, ಒಂದು ದಶಕದ ಕಾಲ ಆಡಿದ್ದೇನೆ. ನನ್ನ ಈ ಜರ್ನಿಯಲ್ಲಿ ಸಹಕರಿಸಿದ ಎಂಸಿಎ, ಮುಂಬೈ ಸಹಾಯಕ ಸಿಬ್ಬಂದಿ, ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ಸೀಸನ್‌ನಲ್ಲಿ ಹೊಸ ಆವಿಷ್ಕಾರಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದು ಲಾಡ್ ಇಂಗ್ಲೆಂಡ್‌ನಿಂದ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏಷ್ಯಾ ಕಪ್‌ 2022: ತಂಡವನ್ನ ಘೋಷಿಸಿದ ಅಫ್ಘಾನಿಸ್ತಾನ, ಮೊಹಮ್ಮದ್‌ ನಬಿಗೆ ನಾಯಕತ್ವ ಪಟ್ಟ

2015-16ರ ರಣಜಿ ಚಾಂಪಿಯನ್ ತಂಡದಲ್ಲಿದ್ದ ಲಾಡ್

2015-16ರ ರಣಜಿ ಚಾಂಪಿಯನ್ ತಂಡದಲ್ಲಿದ್ದ ಲಾಡ್

30 ವರ್ಷದ ಸಿದ್ದೇಶ್ ಲಾಡ್‌ 2015-16ರ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ತಂಡದ ಸದಸ್ಯರಾಗಿದ್ದ ಹೆಮ್ಮೆಯಿದೆ. ಮುಂಬೈ ತಂಡದಲ್ಲಿ 'ಕ್ರೈಸಿಸ್ ಮ್ಯಾನ್' ಎಂದೇ ಖ್ಯಾತಿಯಾಗಿದ್ದ ಸಿದ್ದೇಶ್‌ ಲಾಡ್ ತಂಡದ ಪರ ಕಷ್ಟದ ಸನ್ನಿವೇಶದಲ್ಲಿ ಸತತವಾಗಿ ಉತ್ತಮ ಇನ್ನಿಂಗ್ಸ್‌ ಆಡುವ ಮೂಲಕ ನೆರವಾಗುತ್ತಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅವರ ಕಳಪೆ ಫಾರ್ಮ್ ತಂಡದಿಂದ ಹೊರಗುಳಿಯುವಂತೆ ಮಾಡಿತು.

ಇದಕ್ಕೂ ಮೊದಲು ಕಳೆದ ನವೆಂಬರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ಪರ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ನಾಯಕ ಅಜಿಂಕ್ಯ ರಹಾನೆ 286ರನ್‌ಗಳನ್ನ ಹೊರತುಪಡಿಸಿ ಸಿದ್ದೇಶ್‌ 112ರನ್ ಕಲೆಹಾಕಿದ್ದರು. ಆದ್ರೆ ಮುಂಬೈ ಲೀಗ್‌ ಹಂತದಲ್ಲಿಯೇ ಹೊರಬಿದ್ದಿತು.

ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಏಕೈಕ ಪಂದ್ಯವನ್ನಾಡಿದ ಈ ಪ್ಲೇಯರ್ ಕೇವಲ 16ರನ್‌ಗಳಿಸಿ ಔಟಾದರು.

ಕೊಹ್ಲಿ ಐಪಿಎಲ್ ಸಂಭಾವನೆ: 2008ರಿಂದ 2022ರವರೆಗಿನ ಹಣದ ಸಂಪೂರ್ಣ ಪಟ್ಟಿ; ಲಕ್ಷಗಳಿಂದ ಕೋಟಿ!

ಸಿದ್ದೇಶ್ ಲಾಡ್‌ ದೇಶೀಯ ರೆಕಾರ್ಡ್

ಸಿದ್ದೇಶ್ ಲಾಡ್‌ ದೇಶೀಯ ರೆಕಾರ್ಡ್

61 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸಿದ್ದೇಶ್ ಲಾಡ್ 40.58ರ ಸರಾಸರಿಯಲ್ಲಿ 4,058 ರನ್ ಕಲೆಹಾಕಿದ್ದಾರೆ. 8 ಶತಕ ಮತ್ತು 26 ಅರ್ಧಶತಕ ದಾಖಲಿಸಿರುವ ಸಿದ್ದೇಶ್ 150ರನ್ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಇನ್ನು ತನ್ನ ಪಾರ್ಟ್‌ ಟೈಂ ಸ್ಪಿನ್ ಬೌಲಿಂಗ್ ಮೂಲಕ ಐದು ವಿಕೆಟ್ ಸಹ ಪಡೆದಿದ್ದಾರೆ.

39 ಲಿಸ್ಟ್ ಎ ಪಂದ್ಯಗಳನ್ನ ಆಡಿರುವ ಸಿದ್ದೇಶ್, 42.22ರ ಸರಾಸರಿಯಲ್ಲಿ 1140 ರನ್ ಕಲೆಹಾಕಿದ್ದಾರೆ. 4 ಶತಕ ಹಾಗೂ 3 ಅರ್ಧಶತಕ ದಾಖಲಿಸಿರುವ ಸಿದ್ದೇಶ್ 9 ವಿಕೆಟ್ ಸಹ ಪಡೆದಿದ್ದಾರೆ.

ಇನ್ನು 53 ಟಿ20 ಪಂದ್ಯಗಳಲ್ಲಿ 24.05ರ ಸರಾಸರಿಯಲ್ಲಿ 842 ರನ್ ಕಲೆಹಾಕಿದ್ದು, 3 ಅರ್ಧಶತಕ ದಾಖಲಿಸುವುದರ ಜೊತೆಗೆ 22 ವಿಕೆಟ್‌ಗಳನ್ನ ಕಬಳಿಸಿರುವುದು ವಿಶೇಷ. ಇದರಲ್ಲಿ 13ರನ್ ನೀಡಿ 5 ವಿಕೆಟ್‌ ಪಡೆದಿರುವುದು ಕೆರಿಯರ್ ಬೆಸ್ಟ್ ಆಗಿದೆ.

2013 ನವೆಂಬರ್ ತಿಂಗಳಿನಲ್ಲಿ ಪಂಜಾಬ್ ವಿರುದ್ಧ ಚೊಚ್ಚಲ ಪ್ರಥಮ ದರ್ಜೆ ಪಂದ್ಯವನ್ನಾಡಿದ ಲಾಡ್ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡ ಬಳಿಕ ಮುಂಬೈ ತಂಡವನ್ನ ತೊರೆಯಲು ಬಯಸಿದ್ದಾರೆ.

LLC 2022: ಲೆಜೆಂಡ್ಸ್ ಲೀಗ್ ಸೀಸನ್ 2, ಕವರ್‌ ಡ್ರೈವ್‌ ಹೊಡೆಯಲು ಕಾಯುತ್ತಿದ್ದೇನೆ ಎಂದ ಗಂಗೂಲಿ

ಮುಂಬೈ ತೊರೆದು ಗೋವಾ ಸೇರಿದ ಅರ್ಜುನ್ ತೆಂಡೂಲ್ಕರ್

ಮುಂಬೈ ತೊರೆದು ಗೋವಾ ಸೇರಿದ ಅರ್ಜುನ್ ತೆಂಡೂಲ್ಕರ್

ಅವಕಾಶಗಳ ಕೊರತೆ ಹಿನ್ನಲೆಯಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈಗಾಗಲೇ ಗೋವಾ ಪರ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮುಂಬೈ ತಂಡದಲ್ಲಿ ತೀವ್ರ ಸ್ಪರ್ಧೆ ಹಿನ್ನಲೆಯಲ್ಲಿ ಅರ್ಜುನ್‌ಗೆ ಅವಕಾಶಗಳು ದೊರೆಯುತ್ತಿರಲಿಲ್ಲ. ಹೀಗಾಗಿ ಆತ ಗೋವಾ ಕ್ರಿಕೆಟ್‌ ತಂಡವನ್ನು ಈಗಾಗಲೇ ಸೇರಿಕೊಂಡಿದ್ದಾರೆ.

ಭಾನುವಾರ ತನ್ನ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅಭ್ಯಾಸದ ವೀಡಿಯೋವನ್ನ ಪೋಸ್ಟ್ ಮಾಡಿರುವ ಅರ್ಜುನ್ ತೆಂಡೂಲ್ಕರ್ ಗೋವಾ ಕ್ರಿಕೆಟ್‌ ಅಸೋಸಿಯೇಷನ್‌ನ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಮುಂಬರುವ ದೇಶೀಯ ಕ್ರಿಕೆಟ್ ಟೂರ್ನಮೆಂಟ್‌ ಆಡಲು ಅರ್ಜುನ್‌ ಈಗಿನಿಂದಲೇ ತಯಾರಿ ನಡೆಸಿದ್ದು, ರಣಜಿ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶಕ್ಕಾಗಿ ಇನ್ನೂ ಎದುರು ನೋಡುತ್ತಿದ್ದಾರೆ.

ಇದುವರೆಗೆ ಅರ್ಜುನ್ ಮುಂಬೈ ಪರ 2020/21ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಎರಡು ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ.

Story first published: Tuesday, August 16, 2022, 21:17 [IST]
Other articles published on Aug 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+