ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಐಪಿಎಲ್ ಸಂಭಾವನೆ: 2008ರಿಂದ 2022ರವರೆಗಿನ ಹಣದ ಸಂಪೂರ್ಣ ಪಟ್ಟಿ; ಲಕ್ಷಗಳಿಂದ ಕೋಟಿ!

Virat Kohli IPL salary: Complete list of Virat Kohlis IPL salary from 2008 to 2022

ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಓರ್ವರು. ಸದ್ಯ ತನ್ನ ಮಹೋನ್ನತ ಸಾಧನೆಗಳಿಂದಾಗಿ ಕಿಂಗ್ ಆಫ್ ಕ್ರಿಕೆಟ್ ಎಂದೇ ಖ್ಯಾತಿಯನ್ನು ಪಡೆದಿರುವ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಬ್ಯಾಟಿಂಗ್ ವಿಚಾರದಲ್ಲಿಯೂ ಸಹ ಕಿಂಗ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿಹೆಚ್ಚು ರನ್ ಹಾಗೂ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ ಉದ್ಘಾಟನಾ ಐಪಿಎಲ್ ಆವೃತ್ತಿಯಿಂದ ಇಂದಿನವರೆಗೂ ಸಹ ಕೇವಲ ಒಂದೇ ಫ್ರಾಂಚೈಸಿ ಪರ ಆಡುತ್ತಿರುವ ಏಕೈಕ ಆಟಗಾರ ಎಂಬ ಬಲು ವಿಶಿಷ್ಟ ಆಟಗಾರ ಎನಿಸಿಕೊಂಡಿದ್ದಾರೆ.

ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!

ಹೌದು, 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ರಾಹುಲ್ ದ್ರಾವಿಡ್ ಪರ ಕಣಕ್ಕಿಳಿದಿದ್ದ ಅಂದಿನ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ತಂಡದ ನಾಯಕನಾಗಿ ಹಲವು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇತರೆ ತಂಡ ಸೇರದೇ ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಆಡಿರುವ ವಿರಾಟ್ ಕೊಹ್ಲಿ ತಾನು ಇತರೆ ತಂಡದ ಪರ ಆಡುವುದಿಲ್ಲ, ಎಷ್ಟು ವರ್ಷ ಐಪಿಎಲ್ ಆಡುತ್ತೇನೋ ಅಷ್ಟು ವರ್ಷಗಳಲ್ಲಿಯೂ ಆರ್‌ಸಿಬಿಯೇ ನಾನು ಪ್ರತಿನಿಧಿಸುವ ತಂಡವಾಗಿರುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಭಾರತ vs ಜಿಂಬಾಬ್ವೆ: ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಭಾರತ ಎಷ್ಟು ಪಂದ್ಯ ಗೆದ್ದಿದೆ?ಭಾರತ vs ಜಿಂಬಾಬ್ವೆ: ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಭಾರತ ಎಷ್ಟು ಪಂದ್ಯ ಗೆದ್ದಿದೆ?

ಇನ್ನು ಬೆಂಗಳೂರು ಪರವೂ ಅಪಾರವಾದ ಗೌರವ ಹೊಂದಿರುವ ವಿರಾಟ್ ಕೊಹ್ಲಿ ಎಂದರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರಿಗೂ ಸಹ ವಿರಾಟ್ ಕೊಹ್ಲಿ ಎಂದರೆ ತಂಡದಲ್ಲಿರಲೇಬೇಕಾದ ಆಟಗಾರನಾಗಿಬಿಟ್ಟಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಸಂಭಾವನೆ ಎಷ್ಟೇ ಹೆಚ್ಚಾದರೂ ಸಹ ಬಿಡದ ಆರ್‌ಸಿಬಿ ಫ್ರಾಂಚೈಸಿ ಪ್ರತೀ ಬಾರಿಯೂ ಇತರೆ ಫ್ರಾಂಚೈಸಿಗಳಿಗೆ ಬಿಟ್ಟು ಕೊಡದೇ ತಂಡದಲ್ಲಿಯೇ ಉಳಿಸಿಕೊಂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಉದ್ಘಾಟನ್ ಐಪಿಎಲ್ ಆವೃತ್ತಿಯಿಂದ ಇಲ್ಲಿಯವರೆಗೂ ಯಾವ ಆವೃತ್ತಿಗಳಲ್ಲಿ ಎಷ್ಟು ಸಂಭಾವನೆಯನ್ನು ನೀಡಿದೆ ಎಂಬುದರ ಕುರಿತಾದ ಸಂಪೂರ್ಣ ಪಟ್ಟಿ ಇಲ್ಲಿದೆ.

2008ರಿಂದ 2022ರವರೆಗಿನ ಸಂಭಾವನೆಯ ಸಂಪೂರ್ಣ ಪಟ್ಟಿ

2008ರಿಂದ 2022ರವರೆಗಿನ ಸಂಭಾವನೆಯ ಸಂಪೂರ್ಣ ಪಟ್ಟಿ

2008 - 12 ಲಕ್ಷ

2009 - 12 ಲಕ್ಷ

2010 - 12 ಲಕ್ಷ

2011 - 8 ಕೋಟಿ 28 ಲಕ್ಷ

2011 - 8 ಕೋಟಿ 28 ಲಕ್ಷ

2012 - 8 ಕೋಟಿ 28 ಲಕ್ಷ

2013 - 8 ಕೋಟಿ 28 ಲಕ್ಷ

2014 - 12 ಕೋಟಿ 50 ಲಕ್ಷ

2015 - 12 ಕೋಟಿ 50 ಲಕ್ಷ

2016 - 12 ಕೋಟಿ 50 ಲಕ್ಷ

2017 - 12 ಕೋಟಿ 50 ಲಕ್ಷ

2018 - 17 ಕೋಟಿ

2019 - 17 ಕೋಟಿ (ರಿಟೇನ್)

2020 - 17 ಕೋಟಿ ( ರಿಟೇನ್ )

2021 - 17 ಕೋಟಿ ( ರಿಟೇನ್ )

2022 - 15 ಕೋಟಿ ( ರಿಟೇನ್ )

ಕೊಹ್ಲಿ ಐಪಿಎಲ್ ಅಂಕಿಅಂಶ

ಕೊಹ್ಲಿ ಐಪಿಎಲ್ ಅಂಕಿಅಂಶ

ಒಟ್ಟಾರೆ 216 ಐಪಿಎಲ್ ಪಂದ್ಯಗಳನ್ನಾಡಿ 208 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 6411 ರನ್ ಕಲೆಹಾಕಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರನೋರ್ವ ಗಳಿಸಿರುವ ಅತಿಹೆಚ್ಚು ರನ್ ಆಗಿದ್ದಾರೆ. ಒಟ್ಟು 5 ಐಪಿಎಲ್ ಶತಕಗಳನ್ನು ಬಾರಿಸಿರುವ ಕೊಹ್ಲಿ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ 113 ರನ್ ಕಲೆಹಾಕಿದ್ದಾರೆ.

ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಮುರಿಯಲಸಾಧ್ಯ

ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಮುರಿಯಲಸಾಧ್ಯ

ಇನ್ನು 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿದ್ದ ವಿರಾಟ್ ಕೊಹ್ಲಿ 973 ರನ್ ಕಲೆಹಾಕಿದ್ದರು ಹಾಗೂ 4 ಶತಕಗಳನ್ನು ಬಾರಿಸಿದ್ದರು. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಕಲೆಹಾಕಿದ್ದ ರನ್ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಬಾರಿಸಿರುವ ಅತಿಹೆಚ್ಚು ರನ್ ಎಂಬ ದಾಖಲೆಯಾಗಿದ್ದು, ಇದು ಮುರಿಯಲು ಅಸಾಧ್ಯ ಎನಿಸಿಕೊಂಡಿದೆ.

Story first published: Tuesday, August 16, 2022, 21:03 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X