ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LLC 2022: ಲೆಜೆಂಡ್ಸ್ ಲೀಗ್ ಸೀಸನ್ 2, ಕವರ್‌ ಡ್ರೈವ್‌ ಹೊಡೆಯಲು ಕಾಯುತ್ತಿದ್ದೇನೆ ಎಂದ ಗಂಗೂಲಿ

Sourav Ganguly

ಟೀಂ ಇಂಡಿಯಾ ಮಾಜಿ ಆಟಗಾರರ ಆಟವನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ನಿಮ್ಮ ಮುಂದಿದೆ. ಹೌದು ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022ರ ಎರಡನೇ ಸೀಸನ್‌ ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ. ಟೂರ್ನಮೆಂಟ್‌ಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗಿಯಾಗಲಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು ನಾಲ್ಕು ತಂಡಗಳು 15 ಪಂದ್ಯಗಳನ್ನಾಡಲಿವೆ. ಲೆಜೆಂಡ್ ಲೀಗ್ ಎರಡನೇ ಸೀಸನ್‌ ಇಂಡಿಯಾ ಮಹಾರಾಜಸ್ ಮತ್ತು ವರ್ಲ್ಡ್‌ ಜೈಂಟ್ಸ್‌ ಮುಖಾಮುಖಿ ಮೂಲಕ ಪ್ರಾರಂಭಗೊಳ್ಳಿದೆ. ಈ ವಿಶೇಷ ಪಂದ್ಯವು ಸೆಪ್ಟೆಂಬರ್ 16, 2022ರಂದು ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಪ್ರಮುಖ ಟೂರ್ನಮೆಂಟ್ ಶುರುವಾಗಲಿದೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ಮುನ್ನಡೆಯಲಿರುವ ಇಂಡಿಯಾ ಮಹಾರಾಜಸ್

ಸೌರವ್ ಗಂಗೂಲಿ ನಾಯಕತ್ವದಲ್ಲಿ ಮುನ್ನಡೆಯಲಿರುವ ಇಂಡಿಯಾ ಮಹಾರಾಜಸ್

ವರ್ಲ್ಡ್‌ ಜೈಂಟ್ಸ್‌ ವಿರುದ್ಧ ನಡೆಯಲಿರುವ ವಿಶೇಷ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮುನ್ನಡೆಸಲಿದ್ದಾರೆ. ಎದುರಾಳಿ ವರ್ಲ್ಡ್‌ ಜೈಂಟ್ಸ್‌ ತಂಡವನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ, ವಿಶ್ವಕಪ್ ವಿಜೇತ್‌ ಇಯಾನ್ ಮಾರ್ಗನ್ ನಾಯಕತ್ವ ವಹಿಸಲಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಈ ವಿಶೇಷ ಪಂದ್ಯವನ್ನ ಆಯೋಜಿಸಲಾಗಿದೆ.

ಏಷ್ಯಾ ಕಪ್‌ 2022: ತಂಡವನ್ನ ಘೋಷಿಸಿದ ಅಫ್ಘಾನಿಸ್ತಾನ, ಮೊಹಮ್ಮದ್‌ ನಬಿಗೆ ನಾಯಕತ್ವ ಪಟ್ಟ

ಗಂಗೂಲಿ ಸಿಕ್ಸರ್ ಹೊಡೆಯುವುದನ್ನ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು

ಗಂಗೂಲಿ ಸಿಕ್ಸರ್ ಹೊಡೆಯುವುದನ್ನ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು

ಸೌರವ್ ಗಂಗೂಲಿ ಅಮೋಘ ಸಿಕ್ಸರ್ ಹಾಗೂ ಕವರ್‌ ಡ್ರೈವ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ದಾದಾ, ಈ ಹಿಂದಿನಂತೆ ಕವರ್‌ ಡ್ರೈವ್ ಹೊಡೆಯಲು ಸಾಧ್ಯವೇ ಎಂಬುದು ತಿಳಿದಿಲ್ಲ ಎಂದಿದ್ದಾರೆ.

"ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ನಾನು ಮೊದಲಿನಂತೆಯೇ ಕವರ್ ಡ್ರೈವ್ ಅನ್ನು ಆಡಬೇಕು ನಾನು ಬಯಸುತ್ತೇನೆ. ನಾನು ಬ್ಯಾಟ್ ಮತ್ತು ಬಾಲ್ ಅನ್ನು ಚೆನ್ನಾಗಿ ಕನೆಕ್ಟ್‌ ಮಾಡಬಹುದೆಂದು ನಂಬಿದ್ದೇನೆ. ನಾನು ಒಂದೇ ಒಂದು ಆಟವನ್ನು ಆಡುತ್ತೇನೆ ಮತ್ತು ಆಟವನ್ನು ಆನಂದಿಸುವೆ. ಇದು ಉತ್ತಮ ಸಂದರ್ಭಕ್ಕಾಗಿ ಆಡುತ್ತಿದ್ದು, ಅದರಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ'' ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇದೇ ವರ್ಷ ಜನವರಿಯಲ್ಲಿ ನಡೆದ ಲೆಜೆಂಡ್ಸ್ ಲೀಗ್ ಮೊದಲ ಸೀಸನ್‌ನಲ್ಲಿ ಮೂರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಓಮಾನ್‌ನ ಅಲ್ ಎಮಿರೇಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯಲ್ಲಿ ಇಂಡಿಯಾ ಮಹರಾಜಸ್, ಏಷ್ಯನ್ ಟೀಮ್ ಮತ್ತು ರೆಸ್ಟ್ ಆಫ್ ದಿ ವರ್ಲ್ಡ್‌ ತಂಡಗಳಿದ್ದವು.

ಗಾಯದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡ 4 ದುರದೃಷ್ಟವಂತ ಕ್ರಿಕೆಟರ್‌ಗಳು

ಇಂಡಿಯಾ ಮಹರಾಜಸ್ ತಂಡ

ಇಂಡಿಯಾ ಮಹರಾಜಸ್ ತಂಡ

ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, RP ಸಿಂಗ್, ಜೋಗಿಂದರ್ ಶರ್ಮಾ

ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!

ವರ್ಲ್ಡ್‌ ಜೈಂಟ್ಸ್‌

ವರ್ಲ್ಡ್‌ ಜೈಂಟ್ಸ್‌

ಇಯಾನ್ ಮಾರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ವೆಸ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಮಸಕಡ್ಜಾ, ಮಶ್ರಫ್ ಮೊರ್ತಾಜಾ, ಅಸ್ಗರ್ ಅಫ್ಘನ್, ಮಿಚೆಲ್ ಜಾನ್ಸೆನ್, ಬ್ರೆಟ್‌ ಲೀ, ಕೆವಿನ್ ಒಬ್ರಾಯನ್, ದಿನೇಶ್ ರಾಮ್ದಿನ್

Story first published: Tuesday, August 16, 2022, 20:19 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X