For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2018: ದಾಖಲೆಗಳನ್ನು ಬರೆದ ರೋಹಿತ್-ಧವನ್ ಜೋಡಿ

ದುಬೈ, ಸೆಪ್ಟೆಂಬರ್ 24: ಭಾರತ ಮತ್ತು ಪಾಕ್ ನಡುವೆ ಭಾನುವಾರ ನಡೆದ ಏಷ್ಯಾ ಕಪ್ ಟೂರ್ನಿಯ ಪಂದ್ಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಯಿತು.

ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತ, ಬ್ಯಾಟಿಂಗ್‌ನಲ್ಲಿ ಪಾಕ್ ಬೌಲರ್‌ಗಳನ್ನು ಚೆಂಡಾಡಿತು.

ಮೊದಲ ವಿಕೆಟ್‌ಗೆ ಆರಂಭಿಕರಾದ ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮಾ ನೀಡಿದ ಜತೆಯಾಟ ಭಾರತದ ಪರ ಹಲವು ದಾಖಲೆಗಳನ್ನು ಬರೆಯಿತು. ವೈಯಕ್ತಿಕವಾಗಿ ರೋಹಿತ್ ಶರ್ಮಾ ಅನೇಕ ಮಜಲುಗಳನ್ನು ದಾಟಿರುವುದು ಈ ಪಂದ್ಯದ ವಿಶೇಷ.

ರೋಹಿತ್ ಶರ್ಮಾ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ 301ನೇ ಇನ್ನಿಂಗ್ಸ್‌ನಲ್ಲಿ 301ನೇ ಸಿಕ್ಸರ್ ಬಾರಿಸಿದರು.

ಈ ಪಂದ್ಯದ ಕೆಲವು ಅಂಕಿ ಅಂಶಗಳು ಇಲ್ಲಿವೆ.

ರೋಹಿತ್ ಶರ್ಮಾ 7000 ರನ್

ರೋಹಿತ್ ಶರ್ಮಾ 7000 ರನ್

ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 7000 ರನ್ ಗಳಿಸಿದ ದಾಖಲೆ ಮಾಡಿದರು. ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ

150 ಹಶೀಮ್ ಆಮ್ಲಾ
161 ವಿರಾಟ್ ಕೊಹ್ಲಿ
166 ಎಬಿ ಡಿ ವಿಲಿಯರ್ಸ್
174 ಸೌರವ್ ಗಂಗೂಲಿ
181 ರೋಹಿತ್ ಶರ್ಮಾ
183 ಬ್ರಿಯಾನ್ ಲಾರಾ

ಇತಿಹಾಸ : ಧೋನಿ ರುಂಡ ಹಿಡಿದ ಬಾಂಗ್ಲಾ ಹುಲಿಗಳು ಇಲಿಗಳಾಗಿದ್ದು!

15ನೇ ಏಕದಿನ ಶತಕ

15ನೇ ಏಕದಿನ ಶತಕ

ಶಿಖರ್ ಧವನ್ ತಮ್ಮ 15ನೇ ಏಕದಿನ ಶತಕವನ್ನು ಬಾರಿಸಿದರು. ಕಡಿಮೆ ಪಂದ್ಯಗಳಲ್ಲಿ 15 ಶತಕ ಬಾರಿಸಿದ ಆಟಗಾರರ ಪಟ್ಟಿ ಹೀಗಿದೆ.

86 ಹಶೀಮ್ ಆಮ್ಲಾ
106 ವಿರಾಟ್ ಕೊಹ್ಲಿ
108 ಶಿಖರ್ ಧವನ್
143 ಸಯೀದ್ ಅನ್ವರ್
144 ಸೌರವ್ ಗಂಗೂಲಿ
147 ಕ್ರಿಸ್ ಗೇಲ್/ಎಬಿ ಡಿವಿಲಿಯರ್ಸ್

ಪಾಕಿಸ್ತಾನಕ್ಕೆ ಹೀಗಾ ಬಾರಿಸೋದು?: ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಫ್ಯಾನ್ಸ್‌ ಸಂಭ್ರಮ

100+ ಆರಂಭಿಕ ಜತೆಯಾಟ

100+ ಆರಂಭಿಕ ಜತೆಯಾಟ

ಒಟ್ಟಾರೆಯಾಗಿ ಆರಂಭಿಕ ಆಟಗಾರರು ಶತಕದ ಜತೆಯಾಟ ನೀಡಿದ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನಕ್ಕೆ ಧವನ್ ಮತ್ತು ಶರ್ಮಾ ಜೋಡಿ ಏರಿದೆ. ಟಾಪ್ ಐದರ ಪಟ್ಟಿಯಲ್ಲಿ ಮೂರು ಜೋಡಿಗಳು ಭಾರತದವರೇ ಆಗಿರುವುದು ವಿಶೇಷ.

21 ಸಚಿನ್ ತೆಂಡೂಲ್ಕರ್- ಸೌರವ್ ಗಂಗೂಲಿ
16 ಆಡಂ ಗಿಲ್‌ಕ್ರಿಸ್ಟ್- ಮ್ಯಾಥ್ಯೂ ಹೇಡನ್
15 ಜಿ. ಗ್ರೀನಿಡ್ಜ್- ಡೆಸ್ಮಂಡ್ ಹೇಯ್ನ್ಸ್
13 ರೋಹಿತ್ ಶರ್ಮಾ- ಶಿಖರ್ ಧವನ್
12 ಸಚಿನ್ ತೆಂಡೂಲ್ಕರ್- ವೀರೇಂದ್ರ ಸೆಹ್ವಾಗ್

ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ

ಮೊದಲ ವಿಕೆಟ್ ಜತೆಯಾಟ

ಮೊದಲ ವಿಕೆಟ್ ಜತೆಯಾಟ

ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ ದೊರೆತ ನಾಲ್ಕನೇ ಗರಿಷ್ಠ ಜತೆಯಾಟ ಇದು.

258 ಸೌರವ್ ಗಂಗೂಲಿ- ತೆಂಡೂಲ್ಕರ್
252 ಸೌರವ್ ಗಂಗೂಲಿ- ತೆಂಡೂಲ್ಕರ್
231 ಶಿಖರ್ ಧವನ್-ಅಜಿಂಕ್ಯ ರಹಾನೆ
210 ಶಿಖರ್ ಧವನ್- ರೋಹಿತ್ ಶರ್ಮಾ
201* ಗೌತಮ್ ಗಂಭೀರ್- ವೀರೇಂದ್ರ ಸೆಹ್ವಾಗ್

ಪ್ರತಿ ಸರಣಿಯಲ್ಲಿಯೂ ಶತಕ

ಪ್ರತಿ ಸರಣಿಯಲ್ಲಿಯೂ ಶತಕ

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ನಡೆದ ಪ್ರತಿ ಏಕದಿನ ಸರಣಿಯಲ್ಲಿಯೂ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ.

123* vs ಬಾಂಗ್ಲಾದೇಶ, ಎಡ್ಜ್ ಬಾಸ್ಟನ್
124* vs ಶ್ರೀಲಂಕಾ, ಪಳ್ಳಿಕಲ್; ಶ್ರೀಲಂಕಾ, ಆರ್‌ಪಿಎಸ್
125 vs ಆಸ್ಟ್ರೇಲಿಯಾ, ನಾಗಪುರ
147 vs ನ್ಯೂಜಿಲೆಂಡ್, ಕಾನ್ಪುರ್
208* vs ಶ್ರೀಲಂಕಾ, ಮೊಹಾಲಿ
115 vs ದಕ್ಷಿಣ ಆಫ್ರಿಕಾ, ಪೋರ್ಟ್ ಎಲಿಜಬೆತ್
137* vs ಇಂಗ್ಲೆಂಡ್, ಟ್ರೆಂಟ್ ಬ್ರಿಡ್ಜ್
111* vs ಪಾಕಿಸ್ತಾನ, ದುಬೈ

ಕನಿಷ್ಠ ಅರ್ಧಶತಕ

ಕನಿಷ್ಠ ಅರ್ಧಶತಕ

2018ರಲ್ಲಿ ಆಡಿದ 13 ಏಕದಿನ ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಭಾರತದ ಮೊದಲ ಮೂವರು ಆಟಗಾರರು ಕನಿಷ್ಠ ಅರ್ಧಶತಕ ಗಳಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಮೊದಲ ಮೂವರು ಆಟಗಾರರು ಅರ್ಧ ಶತಕ ಗಳಿಸಲು ವಿಫಲರಾಗಿದ್ದಾರೆ.

ಹಿಟ್‌ಮ್ಯಾನ್ ಸಿಕ್ಸರ್ ಸಂಭ್ರಮ

ಹಿಟ್‌ಮ್ಯಾನ್ ಸಿಕ್ಸರ್ ಸಂಭ್ರಮ

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲಿ ಸೇರಿ 300 ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ವೇಗವಾಗಿ ಮಾಡಿದ ಎರಡನೆಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರೋಹಿತ್ ತಮ್ಮ 301ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಾಕಿಸ್ತಾನದ ಶಾಹಿದ್ ಅಫ್ರಿದಿ 276 ಪಂದ್ಯಗಳಲ್ಲಿಯೇ ಈ ಸಾಧನೆ ಮಾಡಿದ್ದಾರೆ. 43 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 29 ಸಿಕ್ಸರ್‌ಗಳು, 181 ಏಕದಿನ ಇನ್ನಿಂಗ್ಸ್‌ಗಳಲ್ಲಿ 189 ಮತ್ತು 33 ಟಿ20 ಇನ್ನಿಂಗ್ಸ್‌ಗಳಲ್ಲಿ 89 ಸಿಕ್ಸರ್‌ಗಳನ್ನು ಶರ್ಮಾ ಸಿಡಿಸಿದ್ದಾರೆ.

ಒಟ್ಟಾರೆ ಸಿಕ್ಸರ್‌ಗಳ ಪಟ್ಟಿಯಲ್ಲಿ ರೋಹಿತ್ ಏಳನೇ ಸ್ಥಾನದಲ್ಲಿದ್ದಾರೆ. ಅಫ್ರಿದಿ (508 ಇನ್ನಿಂಗ್ಸ್‌ಗಳಲ್ಲಿ 476 ಸಿಕ್ಸರ್), ಕ್ರಿಸ್ ಗೇಲ್ (513 ಇನ್ನಿಂಗ್ಸ್‌ಗಳಲ್ಲಿ 476), ಬ್ರೆಂಡನ್ ಮೆಕಲಂ (474 ಇನ್ನಿಂಗ್ಸ್‌ಗಳಲ್ಲಿ 398), ಸನತ್ ಜಯಸೂರ್ಯ (651 ಇನ್ನಿಂಗ್ಸ್‌ಗಳಲ್ಲಿ 352), ಎಂ.ಎಸ್. ಧೋನಿ (500 ಇನ್ನಿಂಗ್ಸ್‌ಗಳಲ್ಲಿ 342) ಮತ್ತು ಎಬಿ ಡಿವಿಲಿಯರ್ಸ್ (484 ಇನ್ನಿಂಗ್ಸ್‌ಗಳಲ್ಲಿ 328) ಈ ಪಟ್ಟಿಯಲ್ಲಿದ್ದಾರೆ.

Story first published: Monday, September 24, 2018, 15:52 [IST]
Other articles published on Sep 24, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+