ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ, ಮುಂದಿನ ಪಂದ್ಯಗಳತ್ತ ಗಮನ ಹರಿಸು: ಅರ್ಷ್‌ದೀಪ್‌ಗೆ ಮೊಹಮ್ಮದ್ ಶಮಿ ಸಲಹೆ

ಏಷ್ಯಾ ಕಪ್ 2022ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ಯಾಚ್ ಕೈ ಬಿಟ್ಟು ಸಾಕಷ್ಟು ಟೀಕೆಗೆ ಒಳಗಾಗಿರುವ ಬೌಲರ್ ಅರ್ಷ್‌ದೀಪ್ ಸಿಂಗ್ ಬೆಂಬಲಕ್ಕೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಿಂತಿದ್ದಾರೆ. ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಕಳೆದ ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಷ್‌ದೀಪ್ ಕ್ಯಾಚ್ ಕೈ ಚೆಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.
ಪಾಕಿಸ್ತಾನ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ರವಿ ಬಿಷ್ಣೊಯಿ ಮೂರನೇ ಎಸೆತವನ್ನ ವೈಡ್ ಎಸೆತದ ಬಳಿಕ ಮತ್ತೊಂದು ಎಸೆತವನ್ನ ಹಾಕಿ ಆಸಿಫ್ ಅಲಿ ಔಟ್ ಮಾಡಲು ಪ್ರಯತ್ನಿಸಿದ್ರು. ಆದ್ರೆ ಈ ಓವರ್‌ನಲ್ಲಿ ಸುಲಭ ಕ್ಯಾಚ್ ಅನ್ನು ಅರ್ಷ್‌ದೀಪ್ ಕೈ ಚೆಲ್ಲುವ ಮೂಲಕ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಬ್ಬರಾದರು. ಪಾಕಿಸ್ತಾನ ಭಾರತದ 182ರನ್ ಟಾರ್ಗೆಟ್ ಬೆನ್ನತ್ತಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.

ಕ್ಯಾಚ್ ಕೈ ಚೆಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾದ ಅರ್ಷ್‌ದೀಪ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕ್ರೂಶಿಯಲ್ ಹಂತದಲ್ಲಿ ಅರ್ಷ್‌ದೀಪ್ ಕ್ಯಾಚ್ ಕೈ ಚೆಲ್ಲುವ ಮೂಲಕ ಟೀಂ ಇಂಡಿಯಾ ಹಿನ್ನಡೆಗೆ ಕಾರಣರಾದ್ರು. ಹೀಗಾಗಿಯೇ ಈತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾದರು. ಅಸಿಫ್ ಅಲಿ ಕ್ಯಾಚ್ ಚೆಲ್ಲಿದ ಬಳಿಕ 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಸಿಫ್ ಭಾರತದಿಂದ ಗೆಲುವನ್ನ ಕಸಿದುಕೊಂಡರು.
ವಿರಾಟ್ ಕೊಹ್ಲಿ ತನ್ನೊಂದಿಗೆ ಸಂಪರ್ಕವಿಲ್ಲದ ಭಾರತದ ಆಟಗಾರರ ಹೆಸರು ಹೇಳಲಿ: ಸುನಿಲ್ ಗವಾಸ್ಕರ್

19ನೇ ಓವರ್‌ನಲ್ಲಿ 19 ರನ್ ಹರಿದುಬಂತು
ಜೀವದಾನ ಪಡೆದ ಆಸಿಫ್ ಅಲಿ ಭುವನೇಶ್ವರ್ ಕುಮಾರ್‌ರ 19ನೇ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಸಹಿತ 19 ರನ್ ಸಿಡಿಸುವ ಮೂಲಕ ಪಾಕಿಸ್ತಾನ ತಂಡವನ್ನ ಗೆಲುವಿನ ದಡದ ಸಮೀಪಕ್ಕೆ ತಂದರು. ಅಂತಿಮ ಓವರ್‌ನಲ್ಲಿ ಅರ್ಷ್‌ದೀಪ್ 7 ರನ್‌ಗಳ ಡಿಫೆಂಡ್ ಮಾಡಿಕೊಳ್ಳಲು ಸಾಕಷ್ಟು ಉತ್ತಮ ಬೌಲಿಂಗ್ ಪ್ರದರ್ಶಿಸಿದಾದ್ರೂ ಸಹ, ಆತ ಕ್ಯಾಚ್ ಕೈಚೆಲ್ಲಿದ್ದನ್ನ ಮರೆಯಲಿಲ್ಲ. ಪಾಕಿಸ್ತಾನ ಕೇವಲ ಒಂದು ಎಸೆತ ಬಾಕಿ ಇರುವಂತೆ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.
Asia Cup 2022: ಪಾಕಿಸ್ತಾನ ವಿರುದ್ಧದ ಸೋಲಿಗೆ ಇದೇ ಕಾರಣ ಎಂದ ವೀರೇಂದ್ರ ಸೆಹ್ವಾಗ್

ಹೆಚ್ಚು ಅನುಭವವಿಲ್ಲದಿದ್ರೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅರ್ಷ್‌ದೀಪ್
ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಯುಜವೇಂದ್ರ ಚಹಾರ್ ಬೌಲಿಂಗ್‌ನಲ್ಲಿ ಸಖತ್ತಾಗಿ ರನ್ ಕಲೆಹಾಕಿದ ಪಾಕಿಸ್ತಾನಿ ಬ್ಯಾಟರ್ಸ್, 23 ವರ್ಷದ ಯುವ ಬೌಲರ್ ಎದುರು ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ.
ಅಂತಹ ಅನುಭವಿ ಬೌಲರ್‌ಗಳ ಎದುರು ಅರ್ಷ್‌ದೀಪ್ ನಿಜಕ್ಕೂ ಉತ್ತಮವಾಗೇ ಬೌಲಿಂಗ್ ಪ್ರದರ್ಶಿಸಿದ್ದಾರೆ. ಏಕೆಂದರೆ ಭುವಿ , ಹಾರ್ದಿಕ್ ಮತ್ತು ಚಹಾಲ್ 40ಕ್ಕೂ ಹೆಚ್ಚು ರನ್ ನೀಡಿದ್ದರು. ಆದ್ರೆ ಅರ್ಷ್‌ದೀಪ್ 3.5 ಓವರ್‌ಗಳಲ್ಲಿ 27ರನ್ ನೀಡಿ ತಾನೇ ಕ್ಯಾಚ್ ಬಿಟ್ಟಿದ್ದ 16ರನ್ ಗಳಿಸಿ ಆಡುತ್ತಿದ್ದ ಆಸಿಫ್ ಅಲಿ ವಿಕೆಟ್ ಪಡೆದರು.

ಅರ್ಷ್‌ದೀಪ್ ಸಿಂಗ್ ಬೆಂಬಲಿಸಿದ ಮೊಹಮ್ಮದ್ ಶಮಿ
ಕ್ಯಾಚ್ ಕೈ ಚೆಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಅರ್ಷ್‌ದೀಪ್‌ಗೆ ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿ ಬೆಂಬಲಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡ ಶಮಿ ಯುವ ಬೌಲರ್ ವಿರುದ್ಧ ಟೀಕೆಯನ್ನ ವಿರೋಧಿಸಿದ್ದಾರೆ.
ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಶಮಿ '' ಚಿಂತಿಸಬೇಡ ಅರ್ಷ್‌ದೀಪ್ ಸಿಂಗ್, ನಾವೆಲ್ಲಾ ನಿನ್ನ ಜೊತೆಯಲ್ಲಿ ಇದ್ದೇವೆ, ಮುಂದಿನ ಪಂದ್ಯಗಳತ್ತ ನಿನ್ನ ಗಮನಹರಿಸುವ, ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ'' ಎಂದು ಶಮಿ ಬರೆದಿದ್ದಾರೆ.
ಅರ್ಷ್‌ದೀಪ್ ಸಿಂಗ್ ಆ ಕ್ಯಾಚ್ ಅನ್ನು ಕೈ ಚೆಲ್ಲದಿದ್ದರೆ ಭಾರತ ಗೆಲ್ಲುವ ಅವಕಾಶವಿತ್ತು. ಏಕೆಂದರೆ ಪಾಕಿಸ್ತಾನಿ ಬ್ಯಾಟರ್ ಆಸಿಫ್ ಅಲಿ 8 ಎಸೆತಗಳಲ್ಲಿ 16 ರನ್ ಸಿಡಿಸಿದ್ರು. ಅಂತಿಮ ಓವರ್‌ನಲ್ಲಿ ಕೇವಲ ಏಳು ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ರೂ ಸಹ, ಸಾಧ್ಯವಾಗಲಿಲ್ಲ. ಇನ್ನೊಂದು ಎಸೆತ ಬಾಕಿ ಇರುವಂತೆಯೇ ಪಾಕ್ ಗೆಲುವಿನ ಗುರಿ ಮುಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications