
ಅಬ್ಬರಿಸಿದ ಭುವನೇಶ್ವರ್ ಕುಮಾರ್, ಅಫ್ಘಾನಿಸ್ತಾನ ಟಾಪ್ ಆರ್ಡರ್ ತತ್ತರ
ಭಾರತದ ಬೃಹತ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತು. ಓಪನರ್‌ಗಳಾದ ಹಜರತುಲ್ಲಾ ಝಜೈ ಮತ್ತು ರಹಮನುಲ್ಲಾ ಗುರ್ಬಾಜ್ ಶೂನ್ಯಕ್ಕೆ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಕುಸಿತಕ್ಕೆ ದಾರಿ ಮಾಡಿಕೊಟ್ಟರು.
ಇದ್ರ ಬೆನ್ನಲ್ಲೇ ಪಂದ್ಯದ ಮೂರನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ಮೂರನೇ ವಿಕೆಟ್ ಉರುಳಿತು. ಅದೇ ಓವರ್‌ನಲ್ಲಿಯೇ ಅಫ್ಘಾನಿಸ್ತಾನದ ನಾಲ್ಕನೇ ವಿಕೆಟ್ ಸಹ ಬಿತ್ತು. ಮೂರು ಓವರ್ ಮುಕ್ತಾಯಕ್ಕೆ ಕೇವಲ 9ರನ್‌ಗೆ 4 ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ ಎಲ್ಲಿಯೂ ಚೇತರಿಕೆ ಕಾಣಲಿಲ್ಲ.
ಒಂದೆಡೆ ವಿಕೆಟ್ ಉರುಳಿದರೂ ಕೊನೆಯವರೆಗೆ ಅಜೇಯರಾಗಿ ಉಳಿದ ಇಬ್ರಾಹಿಂ ಜರ್ದಾನ್ ಅಜೇಯ 64ರನ್‌ಗಳಿಸಿ ತಂಡ ಆಲೌಟ್ ಆಗದಂತೆ ಮರ್ಯಾದೆ ಉಳಿಸಿದರು. ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿತು. ಭಾರತ 101ರನ್‌ಗ ಬೃಹತ್ ಗೆಲುವು ಸಾಧಿಸಿತು.
ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಅರ್ಷ್‌ದೀಪ್, ಆರ್. ಅಶ್ವಿನ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದರು.
1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್

ವಿರಾಟ್ ಕೊಹ್ಲಿ ಮಿಂಚಿನ ಶತಕ, 212ರನ್ ದಾಖಲಿಸಿದ ಟೀಂ ಇಂಡಿಯಾ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆಯಿತು. ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಮುಟ್ಟಿಸಿದ್ರು.
ಮೊಹಮ್ಮದ್ ನಬಿ ಬೌಲಿಂಗ್‌ನಲ್ಲಿ 34 ರನ್‌ಗಳಿಸಿದ್ದಾಗ ವಿರಾಟ್ ಕೊಹ್ಲಿಯ ಕ್ಯಾಚ್ ಡ್ರಾಪ್ ಆಗಿದ್ದು ಅಫ್ಘಾನ್ ಪರ ದೊಡ್ಡ ಪ್ರಮಾದವಾಯಿತು. ಇದ್ರಿಂದಾಗಿ ವಿಶ್ವ ಕ್ರಿಕೆಟ್ ವಿರಾಟ್‌ರ ಚೊಚ್ಚಲ ಟಿ20 ಶತಕವನ್ನ ಕಣ್ತುಂಬಿಕೊಳ್ಳುವಂತಾಯಿತು.
ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಕೊಹ್ಲಿ-ರಾಹುಲ್ ಭರ್ಜರಿ ಆರಂಭ ನೀಡಿದ್ದಲ್ಲದೆ ಅರ್ಧಶತಕ ದಾಖಲಿಸಿದ್ರು. ರಾಹುಲ್ 17ನೇ ಫಿಫ್ಟಿ ದಾಖಲಿಸಿ 62ರನ್ ದಾಖಲಾದ ಮೇಲೆ ವಿಕೆಟ್ ಒಪ್ಪಿಸಿದ್ರು. ಸೂರ್ಯಕುಮಾರ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ನಂತರದ ಎಸೆತದಲ್ಲಿ ಔಟಾದ್ರು. ಆದ್ರೆ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲೇ ನಿಂತು ಭಾರತಕ್ಕೆ ಬೃಹತ್ ಸ್ಕೋರ್ ತಂದಿತ್ತರು.
ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಮೂರಂಕಿ ಗಡಿ ಮುಟ್ಟಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಕೊಹ್ಲಿ ಶತಕದಿಂದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ರಿಷಭ್ ಪಂತ್ 16 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದರು.
ಆಸಿಸ್ ವಿರುದ್ಧ ನ್ಯೂಜಿಲೆಂಡ್‌ಗೆ ಹೀನಾಯ ಸೋಲು: ಏಕದಿನ ಕ್ರಿಕೆಟ್‌ನಲ್ಲಿ ನಂ. 1 ಪಟ್ಟಕ್ಕೇರಿದ ಇಂಗ್ಲೆಂಡ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್:
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ
ಬೆಂಚ್: ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಉಸ್ಮಾನ್ ಘನಿ, ನವೀನ್-ಉಲ್-ಹಕ್, ನೂರ್ ಅಹ್ಮದ್
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್:
ಕೆಎಲ್ ರಾಹುಲ್(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್
ಬೆಂಚ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಯುಜವೇಂದ್ರ ಚಹಾಲ್, ರವಿ ಬಿಷ್ಣೋಯಿ


Click it and Unblock the Notifications












