
ಧೋನಿ ಸೇರಿ ನಾಲ್ವರು ಆಟಗಾರರು ರೀಟೈನ್
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ವರು ಆಟಗಾರರನ್ನ ಈ ಮೊದಲು ರೀಟೈನ್ ಮಾಡಿಕೊಂಡಿದೆ. ಎಲ್ಲರಿಗೂ ತುಂಬಾ ಆಶ್ಚರ್ಯ ಮೂಡಿಸಿರುವ ಆಯ್ಕೆಯಾಗಿ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ತಲ ಮಹೇಂದ್ರ ಸಿಂಗ್ ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿದ್ದು, 12 ಕೋಟಿ ರೂಪಾಯಿಗೆ ಧೋನಿ ರೀಟೈನ್ ಆಗಿದ್ದಾರೆ. ಸಿಎಸ್‌ಕೆ ಮೂರು ಮತ್ತು ನಾಲ್ಕನೇ ಆಟಗಾರರ ರೀಟೈನ್ ಆಗಿ ಮೋಯಿನ್ ಅಲಿ ಹಾಗೂ ರುತುರಾಜ್ ಗಾಯಕ್ವಾಡ್‌ರನ್ನ ಆಯ್ಕೆ ಮಾಡಿಕೊಂಡಿದೆ. ಮೋಯಿನ್ ಅಲಿಯನ್ನ 8 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಳ್ಳಲಾಗಿದ್ದು, ರುತುರಾಜ್ ಗಾಯಕ್ವಾಡ್‌ರನ್ನ ಸಿಎಸ್‌ಕೆ 6 ಕೋಟಿ ರೂಪಾಯಿಗೆ ರೀಟೈನ್ ಮಾಡಿದೆ.

ದೀಪಕ್ ಚಹಾರ್ ಬರೋಬ್ಬರಿ 14 ಕೋಟಿಗೆ ರೂಪಾಯಿಗೆ ಹರಾಜು
ಐಪಿಎಲ್ ಆಟಗಾರರ ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿದ ಸೂಪರ್ ಕಿಂಗ್ಸ್ ಬಲಗೈ ವೇಗದ ಬೌಲರ್‌ನ ಸೇವೆಯನ್ನು ಮರಳಿ ಪಡೆಯಲು ಬರೋಬ್ಬರಿ 14 ಕೋಟಿ ರೂ. ಖರ್ಚು ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಕಠಿಣ ಪೈಪೋಟಿ ನಡುವೆಯೂ ಸಿಎಸ್‌ಕೆ ಗರಿಷ್ಠ ಬಿಡ್ ಕೂಗುವಲ್ಲಿ ಯಶಸ್ವಿಯಾಯಿತು.
2011ರಲ್ಲಿ ಮೊದಲ ಬಾರಿ ಐಪಿಎಲ್ ಆಟಗಾರರ ಹಾರಜಿನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್‌ಗೆ ಆಗ 20 ಲಕ್ಷ ರೂ. ಮೂಲ ಬೆಲೆ ಸಿಕ್ಕಿತ್ತು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದಾಗ ಕೇವಲ 80 ಲಕ್ಷ ರೂ. ಬೆಲೆ ಗಿಟ್ಟಿಸಿಕೊಂಡಿದ್ದರು. ಆದ್ರೆ ಈ ಸೀಸನ್‌ನಲ್ಲಿ ಜಾಕ್‌ಪಾಟ್ ಹೊಡೆದ ದೀಪಕ್ ಬರೋಬ್ಬರಿ 14 ಕೋಟಿ ರೂ. ತನ್ನ ಅಕೌಂಟ್‌ಗೆ ಸೇರಿಸಿದ್ದಾರೆ.
ಬಲಿಷ್ಠ ತಂಡವನ್ನ ಕಟ್ಟಿದ ಲಕ್ನೋ ಸೂಪರ್ ಜಾಯಿಂಟ್ಸ್: ಮಾಸ್ಟರ್ ಮೈಂಡ್ ಗೌತವ್ ಗಂಭೀರ್ ಪ್ಲ್ಯಾನ್ ಸಕ್ಸಸ್

ಸಿಎಸ್‌ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು ಮತ್ತು ಹಣ
ರಾಬಿನ್ ಉತ್ತಪ್ಪ: 2 ಕೋಟಿ ರೂಪಾಯಿ
ಡ್ವೇನ್ ಬ್ರಾವೋ : 4.4 ಕೋಟಿ ರೂಪಾಯಿ
ಅಂಬಾಟಿ ರಾಯುಡು : 6.75 ಕೋಟಿ ರೂಪಾಯಿ
ದೀಪಕ್ ಚಹಾರ್ : 14 ಕೋಟಿ ರೂಪಾಯಿ
ಶಿವಂ ದುಬೆ : 4 ಕೋಟಿ ರೂಪಾಯಿ
ತುಷಾರ್ ದೇಶಪಾಂಡೆ : 20 ಲಕ್ಷ ರೂಪಾಯಿ
ಕ್ರಿಸ್ ಜೋರ್ಡಾನ್ : 3.6 ಕೋಟಿ ರೂಪಾಯಿ
ಮಹೇಶ ತೀಕ್ಸಾನ : 7 ಕೋಟಿ ರೂಪಾಯಿ
ರಾಜವರ್ಧನ್ ಹಂಗಾರ್ಗೇಕರ್ : 1.5 ಕೋಟಿ ರೂಪಾಯಿ
ಸಿಮ್ರಜಿತ್ ಸಿಂಗ್ : 20 ಲಕ್ಷ ರೂಪಾಯಿ
ಡೇವೋನ್ ಕಾನ್ವೇ : 1 ಕೋಟಿ ರೂಪಾಯಿ
ಡ್ವೇನ್ ಪ್ರೆಟೋರಿಯಸ್ : 50 ಲಕ್ಷ ರೂಪಾಯಿ
ಮಿಚೆಲ್ ಸ್ಯಾಂಟ್ನರ್ : 1.9 ಕೋಟಿ ರೂಪಾಯಿ
ಆ್ಯಡಮ್ ಮಿಲ್ನೆ : 1.9 ಕೋಟಿ ರೂಪಾಯಿ
ಶುಭಾಂಶು ಸೇನಾಪತಿ : 20 ಲಕ್ಷ ರೂಪಾಯಿ
ಮುಕೇಶ್ ಚೌಧರಿ : 20 ಲಕ್ಷ ರೂಪಾಯಿ
ಪ್ರಶಾಂತ್ ಸೋಲಂಕಿ : 1.2 ಕೋಟಿ ರೂಪಾಯಿ
ಭಗತ್ ವರ್ಮಾ: 20 ಲಕ್ಷ ರೂಪಾಯಿ
ಹರಿ ನಿಶಾಂತ್ : 20 ಲಕ್ಷ ರೂಪಾಯಿ
ಎನ್ ಜಗದೀಶನ್ : 20 ಲಕ್ಷ ರೂಪಾಯಿ
ಕೆಎಂ ಆಸಿಫ್ : 20 ಲಕ್ಷ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್ ಕುರಿತು ಇನ್ನಷ್ಟು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: ತಂಡವನ್ನ ಸೆಲೆಕ್ಟ್ ಮಾಡಿದ ಬಳಿಕ ಚೆನ್ನೈ ತಂಡವನ್ನು ಕ್ಲಿಕ್ ಮಾಡಿದರೆ ನಿಮಗೆ ಸಂಪೂರ್ಣ ಆಟಗಾರರ ಪಟ್ಟಿ ಜೊತೆಗೆ ಅವರಿಗೆ ದೊರೆತ ಮೊತ್ತವನ್ನ ಕಾಣಬಹುದು.
https://kannada.mykhel.com/ipl-auction-2022/#team


Click it and Unblock the Notifications
