ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

first woman umpire of indian cricket vrinda rathi

ಮುಂಬೈ, ಅಕ್ಟೋಬರ್ 22: ನವಿ ಮುಂಬೈನ ವೃಂದಾ ರತಿ ಭಾರತದ ಮೊದಲ ಮಹಿಳಾ ಅಂಪೈರ್‌ಗಳಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

29 ವರ್ಷದ ವೃಂದಾ ರತಿ ಬಿಸಿಸಿಐನ ಎರಡನೆಯ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ! ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ!

ಗಿಡ್ಡ ಕೂದಲಿನ, ಈಕೆಯನ್ನು ಅನೇಕರು ಥಟ್ಟನೆ ನೋಡಿದಾಗ 'ಸರ್' ಎಂದೇ ಕರೆಯುತ್ತಾರೆ. ಬಳಿಕ ತಪ್ಪಾಗಿ ಕರೆದಿದ್ದು ಗೊತ್ತಾಗಿ ಕ್ಷಮೆ ಕೋರುತ್ತಾರೆ!

2013ರ ಮಹಿಳಾ ವಿಶ್ವಕಪ್‌ನಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದ್ದ ವೃಂದಾ, ನ್ಯೂಜಿಲೆಂಡ್‌ನ ಮಹಿಳಾ ಅಂಪೈರ್ ಕತಿ ಕ್ರಾಸ್ ಅವರ ಪ್ರಭಾವಕ್ಕೆ ಒಳಗಾದವರು. ಅವರಿಂದ ಅಂಪೈರಿಂಗ್ ಕಾರ್ಯದ ಅನೇಕ ವಿಚಾರಗಳನ್ನು ಕಲಿತರು.

ಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆ ಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆ

ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ 2013ರಿಂದ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವೃಂದಾ, ಮಹಿಳಾ ಕ್ರಿಕೆಟ್ ಪಂದ್ಯಗಳು ಮತ್ತು ಕಿರಿಯರ ಕ್ರಿಕೆಟ್ ಪಂದ್ಯಗಳ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ವೃಂದಾ ಅವರ ಜತೆ ಚೆನ್ನೈನ ಎನ್. ಜನನಿ ಕೂಡ ಬಿಸಿಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಮಹಿಳಾ ಯುಗದ ಆರಂಭ ಎಂದು ಕ್ರಿಕೆಟ್ ಪ್ರೇಮಿಗಳು ಸ್ವಾಗತಿಸಿದ್ದಾರೆ.

ಪುರುಷರಿಗೆ ಸೀಮಿತವಲ್ಲ

ಅಂಪೈರಿಂಗ್ ಇನ್ನು ಮುಂದೆ ಪುರುಷರಿಗಷ್ಟೇ ಆಗಿ ಉಳಿದಿಲ್ಲ. ವೃಂದಾ ರತಿ ಭಾರತದ ಮೊದಲ ಮಹಿಳಾ ರಾಷ್ಟ್ರೀಯ ಅಂಪೈರ್ ಆಗಲಿದ್ದಾರೆ. ಮಹಿಳಾ ಸಬಲೀಕರಣ ಆಗುತ್ತಿದೆ ಎಂದು ನೌಶೀನ್ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಲಿಂಗತ್ವ ಮುಖ್ಯವಲ್ಲ

ಮೈದಾನದ ಮಧ್ಯಭಾಗದಲ್ಲಿರುವ ನೀವು ಪ್ರಮುಖ ಕಾರ್ಯನಿರ್ವಹಿಸುತ್ತಿದ್ದೀರಿ ಎಂಬುದನ್ನು ಎಲ್ಲರೂ ತಿಳಿದಿರುವಾಗ ನಿಮ್ಮ ಲಿಂಗ ಮುಖ್ಯವಾಗುವುದಿಲ್ಲ ಎಂದು ರಾಜಸ್ಥಾನ ರಾಯಲ್ಸ್ ಐಪಿಎಲ್ ತಂಡ ವೃಂದಾ ಅವರ ಸಾಧನೆಯನ್ನು ಶ್ಲಾಘಿಸಿದೆ.

ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್

ಮೊದಲ ಮಹಿಳೆ

ಮುಂಬೈ ಅಂಪೈರಿಂಗ್‌ಗೆ ಇದು ವಿಶೇಷ ಸಂದರ್ಭ. ಬಿಸಿಸಿಐನ ಪ್ಯಾನೆಲ್ ಅಂಪೈರಿಂಗ್‌ಗೆ ಐವರು ಮುಂಬೈ ಅಂಪೈರ್‌ಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲಿ ಬಿಸಿಸಿಐ ಇತಿಹಾಸದಲ್ಲಿಯೇ ಮೊದಲ ಮಹಿಳಾ ಅಂಪೈರ್ ಎನಿಸಿಕೊಳ್ಳುವ ವೃಂದಾ ರತಿ ಕೂಡ ಸೇರಿದ್ದಾರೆ ಎಂದು ಗಣೇಶ್ ಅಯ್ಯರ್ ಹತ್ತು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು.

ಸುಡುವ ಬಿಸಿಲ ಅಡಿ

ಸುಡುವ ಬಿಸಿಲ ಅಡಿ

ಸುಡುವ ಬಿಸಿಲಿನ ಅಡಿ ಗಂಟೆಗಟ್ಟಲೆ ಏಕಾಗ್ರತೆಯಿಂದ ಕಾರ್ಯನಿರ್ವಹಿಸಲು ಸಾಕಷ್ಟು ಕೌಶಲ ಬೇಕು ಎನ್ನುತ್ತಾರೆ ವೃಂದಾ. ಇದು ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಬೇಡುತ್ತದೆ. ದೇಹಭಾಷೆಯ ಜತೆಗೆ ಸಂವಹನ ಮತ್ತು ಆಂತರಿಕ ಸ್ಥಿರತೆಯ ಕೌಶಲ ಮುಖ್ಯ. ವ್ಯಕ್ತಿ ಸರಳನಾಗಿದ್ದಷ್ಟೂ ಆತನ ಅಂಪೈರಿಂಗ್‌ ಗುಣಮಟ್ಟ ಉನ್ನತವಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯ.

Story first published: Monday, October 22, 2018, 18:27 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X