For Quick Alerts
ALLOW NOTIFICATIONS  
For Daily Alerts
 

ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಸಲುವಾಗಿ IPL ಆಫರ್ ತಿರಸ್ಕರಿಸಿದ 5 ಪ್ಲೇಯರ್ಸ್‌

IPL

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಆಸೆ ವಿಶ್ವದ ಯಾವುದೇ ಕ್ರಿಕೆಟ್ ಆಡುವ ರಾಷ್ಟ್ರದ ಪ್ಲೇಯರ್‌ಗಳಿಗಿರೋದು ಸಹಜ. ಏಕೆಂದರೆ ಐಪಿಎಲ್ ವಿಶ್ವ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಫ್ರಾಂಚೈಸಿ ಕ್ರಿಕೆಟ್ ಆಗಿದೆ. ಹೀಗಾಗಿಯೇ ಐಪಿಎಲ್ ನಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಆಸೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಅನೇಕ ಯುವ ಕ್ರಿಕೆಟಿಗರು ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾರೆ. ಟೀಂ ಇಂಡಿಯಾಗೂ ಕೂಡ ಐಪಿಎಲ್‌ನಿಂದ ಶೈನ್ ಆಗಿ ಬಂದ ಕ್ರಿಕೆಟಿಗರು ಇದ್ದಾರೆ. ಇದರಿಂದಲೇ ಐಪಿಎಲ್‌ನಲ್ಲಿ ಅವಕಾಶಕ್ಕಾಗಿ ಸಾಕಷ್ಟು ಜನರು ಕಾಯುತ್ತಿದ್ದಾರೆ. ಆದರೆ ಕೆಲವು ಆಟಗಾರರು ಇಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದರೂ ಒಪ್ಪಂದಗಳನ್ನು ತಿರಸ್ಕರಿಸಿದ್ದಾರೆ. ಆ ಐದು ಮಂದಿ ಆಟಗಾರರನ್ನು ಈ ಕೆಳಗೆ ತಿಳಿಯಿರಿ.

ಬಾಂಗ್ಲಾದ ಟಸ್ಕಿನ್ ಅಹ್ಮದ್

ಬಾಂಗ್ಲಾದ ಟಸ್ಕಿನ್ ಅಹ್ಮದ್

ಟಸ್ಕಿನ್ ಅಹ್ಮದ್ ಬಾಂಗ್ಲಾದೇಶದ ಸೂಪರ್ ಸ್ಟಾರ್ ಬೌಲರ್. ಟಿ20 ನಲ್ಲಿ ಉತ್ತಮ ದಾಖಲೆ ಹೊಂದಿರುವ ಆಟಗಾರನು ಒಂದಕ್ಕಿಂತ ಹೆಚ್ಚು ಬಾರಿ ಐಪಿಎಲ್‌ ಒಪ್ಪಂದವನ್ನು ನಿರಾಕರಿಸಿದ್ದಾರೆ. ಆದರೆ ಪ್ರತಿ ಬಾರಿಯೂ ಬದಲಿ ಪಾತ್ರವನ್ನು ನಿರ್ವಹಿಸಲು ಟಸ್ಕ್‌ಗೆ ಕರೆ ನೀಡಲಾಯಿತು. 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಕ್ ವುಡ್ ಬದಲಿಗೆ ಟಸ್ಕಿನ್ ಅಹ್ಮದ್ ಅನ್ನು ಕರೆಯಲಾಯಿತು ಆದರೆ ಅವರು ಒಪ್ಪಂದವನ್ನು ತಿರಸ್ಕರಿಸಿದರು. ಒಮ್ಮೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ NOC ನಿರಾಕರಿಸಿದ ನಂತರ ಅವರು ಟೂರ್ನಿಯಿಂದ ತಪ್ಪಿಸಿಕೊಂಡರು.

ಜೇಮ್ಸ್‌ ಆ್ಯಂಡರ್ಸನ್

ಜೇಮ್ಸ್‌ ಆ್ಯಂಡರ್ಸನ್

ಇಂಗ್ಲೆಂಡ್ ನ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಹಲವು ಬಾರಿ ಐಪಿಎಲ್ ನಿಂದ ಹೊರಗುಳಿದಿದ್ದರು. ಸ್ವಿಂಗ್ ಪೇಸರ್ ಆಗಿ, ಅವರು 2010 ರಲ್ಲಿ ಬಹು ಫ್ರಾಂಚೈಸಿಗಳಿಂದ ಒಪ್ಪಂದದ ಆಫರ್ ಪಡೆದರು. ಆದರೆ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಸೀಮಿತ ಓವರ್‌ಗಳಲ್ಲಿ ಕೆಲಸದ ಹೊರೆ ಕಡಿಮೆ ಮಾಡಲು ಆಂಡರ್ಸನ್ ಟೆಸ್ಟ್‌ಗಳ ಮೇಲೆ ಹೆಚ್ಚು ಗಮನ ಹರಿಸಲು ಬಯಸಿದ್ದರು. ಆದ್ದರಿಂದ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಸಮಯ ಕಳೆಯಲು ಆಂಡರ್ಸನ್ ಬಯಸಲಿಲ್ಲ. ಈ ಹಿಂದೆ ಇಂಗ್ಲೆಂಡ್‌ನೊಂದಿಗೆ ಸೀಮಿತ ಓವರ್‌ಗಳನ್ನು ಆಡಿದ್ದ , ಆಂಡರ್ಸನ್ ಸದ್ಯ ಟೆಸ್ಟ್ ತಂಡದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ENG vs NZ 2nd Test: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್‌, ಸಂಭಾವ್ಯ ಪ್ಲೇಯಿಂಗ್ 11

ಸ್ಟುವರ್ಟ್ ಬ್ರಾಡ್‌

ಸ್ಟುವರ್ಟ್ ಬ್ರಾಡ್‌

ಮತ್ತೊಬ್ಬ ಸ್ಟಾರ್ ಇಂಗ್ಲೆಂಡ್ ನ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್. ಬ್ರಾಡ್‌ಗಾಗಿ ಅನೇಕ ತಂಡಗಳು ಆಫರ್ ನೀಡಿದರು ಸಹ ಅವರು ಐಪಿಎಲ್ ಒಪ್ಪಂದವನ್ನು ತಲುಪಲು ಬಯಸಲಿಲ್ಲ. ಬ್ರಾಡ್ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ನಿರ್ಧಾರ ಕೈಗೊಂಡರು. ಇಂಗ್ಲೆಂಡ್ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿರುವ ಬ್ರಾಡ್ ಎರಡು ಬಾರಿ ಆಶಸ್ ಟೆಸ್ಟ್ ಸರಣಿಯಲ್ಲಿ ಆಡಲು ಐಪಿಎಲ್ ಒಪ್ಪಂದವನ್ನು ನಿರಾಕರಿಸಿದ್ದಾರೆ. ಬ್ರಾಡ್ ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿದ್ದಾರೆ.

Ind vs SA: ಹಾರ್ದಿಕ್ ಪಾಂಡ್ಯ ನಾಯಕತ್ವದ ಕುರಿತು ಕೋಚ್ ರಾಹುಲ್ ದ್ರಾವಿಡ್ ಅಚ್ಚರಿ ಹೇಳಿಕೆ!

ಕುಸಾಲ್ ಪೆರೆರಾ

ಕುಸಾಲ್ ಪೆರೆರಾ

ಕುಸಾಲ್ ಪೆರೇರಾ ಶ್ರೀಲಂಕಾದ ಸ್ಟಾರ್ ಓಪನರ್. 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪೆರೇರಾ ಅವರನ್ನು ಸಹಿ ಮಾಡಲು ಪ್ರಯತ್ನಿಸಿತು. ಆದ್ರೆ ಪೆರೆರಾ ಅವರು ಅದನ್ನು ತಿರಸ್ಕರಿಸಿದರು. ಎಡಗೈ ಓಪನರ್ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಎಡಗೈ ಓಪನರ್ ಕುಶಾಲ್ ಪೆರೇರಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯಿತಾದ್ರೂ ಸಹ ಕುಶಾಲ್ ಆಡಲು ರೆಡಿ ಇರಲಿಲ್ಲ ಹೀಗಾಗಿ, ಐಪಿಎಲ್‌ನಲ್ಲಿ ಆಡಿಲ್ಲ.

India vs South Africa 1st T20: ಸೌತ್ ಆಫ್ರಿಕಾ ಭಾರತ ತಂಡವನ್ನ ಬಗ್ಗು ಬಡಿದಿದ್ದು ಹೀಗೆ! | *Cricket
ರವಿ ಬೊಪಾರ

ರವಿ ಬೊಪಾರ

ಇಂಗ್ಲೆಂಡ್‌ನ ಮಾಜಿ ಸ್ಟಾರ್ ಆಲ್‌ರೌಂಡರ್ ರವಿ ಬೋಪಾರ ಐಪಿಎಲ್‌ನಲ್ಲಿ ಆಡಿದ್ದಾರೆ. ಆದರೆ ಅವರು ಒಂದಕ್ಕಿಂತ ಹೆಚ್ಚು ಬಾರಿ ಐಪಿಎಲ್ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೋಪಾರಾ ಅವರನ್ನು ಕರೆತರಲು ಪ್ರಯತ್ನಿಸಿದ್ದರೂ, ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಬೋಪಾರಾ ಅತಿ ಹೆಚ್ಚು ಫ್ರಾಂಚೈಸಿ ಕ್ರಿಕೆಟ್‌ನ ದಾಖಲೆಯನ್ನು ಹೊಂದಿದ್ದಾರೆ. ಈಗಲೂ ಹಲವು ಟೂರ್ನಿಗಳಲ್ಲಿ ಟಿ20 ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.

Story first published: Friday, June 10, 2022, 9:43 [IST]
Other articles published on Jun 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+