
ವಿಜಯ್ ಶಂಕರ್ ಮದುವೆ
ಈ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಕ್ರಿಕೆಟಿಗ ಅಂದ್ರೆ ಅದು ಆಲ್‌ರೌಂಡರ್ ವಿಜಯ್ ಶಂಕರ್. ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು
ಟೀಂ ಇಂಡಿಯಾ ಆಲ್‌ರೌಂಡರ್ ವಿಜಯ್ ಶಂಕರ್ ವಿವಾಹವಾಗಿದ್ದಾರೆ.
ಚೆನ್ನೈನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಿಜಯ್ ಶಂಕರ್ ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಮದುವೆಯಾದರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ರನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ವಿವಾಹವಾದರು. 27 ಜನವರಿ 2021 ರಂದು, ವಿಜಯ್ ಶಂಕರ್ ಅವರು ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ಗಂಟು ಹಾಕುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು.
ತಮಿಳುನಾಡಿನ ಅಯ್ಯರ್ ಕುಟುಂಬದವರಾದ ವಿಜಯ್ ಶಂಕರ್ ಹಾಗೂ ವೈಶಾಲಿ ಅವರ ನಿಶ್ಚಿತಾರ್ಥ ಸಮಾರಂಭ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. 30 ವರ್ಷದ ವಿಜಯ್ ಶಂಕರ್, ಸಯ್ಯದ್ ಮುಷ್ಠಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡಿನ ಪರ ಲೀಗ್ ಹಂತದಲ್ಲಿ ಆಡಿದ್ದರು. ಕರ್ನಾಟಕ ವಿರುದ್ಧ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನ ಮುನ್ನಡೆಸಿ ಟ್ರೋಫಿ ಗೆಲ್ಲಿಸಿಕೊಟ್ಟರು.

ಜಯದೇವ್ ಉನಾದ್ಕಟ್
ಭಾರತೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಜಯದೇವ್ ಉನಾದ್ಕತ್ ಅವರು ಈ ವರ್ಷ 2 ಫೆಬ್ರವರಿ 2021 ರಂದು ತಮ್ಮ ನಿಶ್ಚಿತ ವರ ರಿನಿ ಕಾಂಟಾರಿಯಾ ಅವರೊಂದಿಗೆ ಮದುವೆಯಾದ್ರು. ಜಯದೇವ್ ಉನಾದ್ಕತ್ ಮತ್ತು ರಿನ್ನಿ ವಿವಾಹ ಮಂಗಳವಾರ (ಫೆಬ್ರವರಿ 2) ಗುಜರಾತ್‌ನ ಆನಂದ್ ಸಭಾಭವನದಲ್ಲಿ ನಡೆದಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 29ರ ಹರೆಯದ ಉನಾದ್ಕತ್, ರಿನ್ನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Flashback 2021: ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳು
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬೌಲಿಂಗ್ ಮಾಡುವಾಗ ಜಯದೇವ್ ಉನಾದ್ಕತ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಕ್ರಿಕೆಟ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಜಯದೇವ್ ಉನಾದ್ಕತ್ ಅವರು ಭಾರತ ತಂಡದಲ್ಲಿ ತಮ್ಮ ಆಯ್ಕೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ, ಆದರೂ ಅವರು ಇನ್ನೂ ತಂಡಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ.

ಜಯಂತ್ ಯಾದವ್
ಈ ಪಟ್ಟಿಯಲ್ಲಿ ಮೂರನೇ ಹೆಸರು ಜಯಂತ್ ಯಾದವ್, ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಆಡಿದ 2ನೇ ಟೆಸ್ಟ್ ಪಂದ್ಯದಲ್ಲಿ ಆಡಿದ ಈತ ಸುಮಾರು ಮೂರು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ಜಯಂತ್ ಯಾದವ್ ಅವರು ತಮ್ಮ ಗೆಳತಿ ದಿಶಾ ಚಾವ್ಲಾ ಅವರನ್ನು 16 ಫೆಬ್ರವರಿ 2021 ರಂದು ವಿವಾಹವಾದರು.
ಟ್ವಿಟರ್‌ನಲ್ಲಿ ಮದುವೆಯ ಚಿತ್ರ ಹಂಚಿಕೊಂಡಿರುವ ಜಯಂತ್ ಯಾದವ್, 'ಬೆಟರ್ ಟುಗೆದರ್' ಎಂದು ಬರೆದುಕೊಂಡಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯಾದವ್ ತನ್ನ ಗೆಳತಿಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಜಯಂತ್ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ 5 ವಿಕೆಟ್ ಕಬಳಿಸಿದ್ದರು. ಪ್ರಸ್ತುತ, ಜಯಂತ್ ಯಾದವ್ ಭಾರತ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದ ಭಾಗವಾಗಿದ್ದಾರೆ.
Year End 2021: ಈ ವರ್ಷ ಕ್ರಿಕೆಟ್ ಲೋಕದಲ್ಲಿ ಆದ ವಿವಾದಗಳೇನು?

ಜಸ್ಪ್ರೀತ್ ಬುಮ್ರಾ
ಈ ಪಟ್ಟಿಯಲ್ಲಿ ನಾಲ್ಕನೇ ಹೆಸರು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ. ಬುಮ್ರಾ ಇದೇ ವರ್ಷ 14 ಮಾರ್ಚ್ ರಂದು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಜಸ್ಪ್ರೀತ್ ಬುಮ್ರಾ ಭಾರತೀಯ ಕ್ರಿಕೆಟ್‌ನಲ್ಲಿ ಚಿರಪರಿಚಿತ ಹೆಸರು, ಅವರು ತಮ್ಮ ನಿಖರವಾದ ಬೌಲಿಂಗ್ ಮತ್ತು ಪರಿಪೂರ್ಣ ಯಾರ್ಕರ್‌ಗಾಗಿ ಅಭಿಮಾನಿಗಳಲ್ಲಿ ಪ್ರಸಿದ್ಧರಾಗಿದ್ದಾರೆ.
ಬುಮ್ರಾ ಆಗಮನದಿಂದ ಭಾರತ ಕ್ರಿಕೆಟ್ ತಂಡಕ್ಕೆ ಸೀಮಿತ ಓವರ್‌ಗಳ ಮಾದರಿಯಲ್ಲಿ ಡೆತ್ ಬೌಲಿಂಗ್ ಸಮಸ್ಯೆ ಬಗೆಹರಿದಿದೆ. ಬುಮ್ರಾ ಮತ್ತು ಸಂಜನಾ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು, ಆದರೆ ಅವರು ತಮ್ಮ ಸಂಬಂಧವನ್ನು ಖಾಸಗಿಯಾಗಿ ಇಡುವಲ್ಲಿ ಯಶಸ್ವಿಯಾದರು. ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಮ್ರಾ ಸಂಜನಾ ಮಾರ್ಚ್ 14, 2021 ರಂದು ಮದುವೆಯಾದ್ರು.

ಶಿವಂ ದುಬೆ
ಟೀಂ ಇಂಡಿಯಾದ ಆಲ್ ರೌಂಡರ್ ಶಿವಂ ದುಬೆ ತಮ್ಮ ಬಹುಕಾಲದ ಗೆಳತಿಯನ್ನು ವಿವಾಹವಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ದುಬೆ, ಗೆಳತಿ ಅಜುಂ ಖಾನ್ ರನ್ನು ವರಿಸಿದ್ದಾರೆ.
ಇವರು ಈ ವರ್ಷ ಜುಲೈ 16 ರಂದು ತಮ್ಮ ಗೆಳತಿ ಅನಮ್ ಖಾನ್ ಅವರೊಂದಿಗೆ ಮುಸ್ಲಿಂ ಸಂಪ್ರದಾಯಗಳ ಅಡಿಯಲ್ಲಿ ವಿವಾಹವಾದರು. ತಮ್ಮ ಮದುವೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಶಿವಂ ದುಬೆ, ನಾವು ಪ್ರೀತಿಗಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸಿದ್ದೇವೆ ಮತ್ತು ಈಗ ನಮ್ಮ ಪ್ರೀತಿಯ ಹೊಸ ಪ್ರಯಾಣ ಪ್ರಾರಂಭವಾಗುತ್ತಿದೆ ಎಂದು ಬರೆದಿದ್ದಾರೆ. ಶಿವಂ ದುಬೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಪ್ರಾರಂಭಿಸಿದರು. ಆದರೆ 2 ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡದ ನಂತರ, ಅವರನ್ನು RCB ತಂಡದಿಂದ ಬಿಡುಗಡೆ ಮಾಡಲಾಯಿತು, ನಂತರ ಅವರು ರಾಜಸ್ಥಾನ್ ರಾಯಲ್ಸ್‌ಗಾಗಿ ಆಡುತ್ತಿದ್ದರು.

ಶ್ರೇಯಸ್ ಗೋಪಾಲ್
ಈ ಪಟ್ಟಿಯಲ್ಲಿ ಮತ್ತೊಂದು ಹೆಸರು ಶ್ರೇಯಸ್ ಗೋಪಾಲ್ ಅವರದ್ದು, ಅವರು ತಮ್ಮ ದೀರ್ಘಕಾಲದ ಗೆಳತಿ ನಿಕಿತಾ ಶಿವ ಅವರನ್ನು 24 ನವೆಂಬರ್ 2021 ರಂದು ವಿವಾಹವಾದರು. ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ನವೆಂಬರ್ 24 ರಂದು ತಮ್ಮ ಕುಟುಂಬ ಮತ್ತು ಸ್ನೇಹಿತರ ನಡುವೆ ವಿವಾಹವಾದರು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಶ್ರೇಯಸ್, ಮದುವೆಯ ದಿನಾಂಕ ಮತ್ತು ಹೃದಯದ ಎಮೋಜಿಯನ್ನು ಶೀರ್ಷಿಕೆಯಲ್ಲಿ ಹಾಕಿದ್ದಾರೆ.

ರಾಹುಲ್ ತೆವಾಟಿಯಾ
ಈ ಪಟ್ಟಿಯಲ್ಲಿ ಕೊನೆಯ ಹೆಸರು ಎಂದರೆ ಅದು ರಾಹುಲ್ ತೆವಾಟಿಯಾ. ರಾಜಸ್ತಾನ್ ರಾಯಲ್ಸ್ ಆಲ್‌ರೌಂಡರ್ ರಾಹುಲ್ ತೆವಾಟಿಯ ಸೋಮವಾರ (ನ. 29) ರಿಧಿ ಪನ್ನುರನ್ನ ಮದುವೆಯಾಗುವ ಮೂಲಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ರಾಹುಲ್ ತೆವಾಟಿಯ ಮದುವೆಯಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್, ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಮತ್ತು ಕೆಕೆಆರ್‌ನ ನಿತೀಶ್ ರಾಣಾ ಅವರಂತಹ ಅನೇಕ ಸಹ ಕ್ರಿಕೆಟಿಗರು ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ನವವಿವಾಹಿತ ಜೋಡಿಗೆ ಕ್ರಿಕೆಟ್ ತಾರೆಯರು ಶುಭ ಹಾರೈಸಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಫೆಬ್ರವರಿ 3ರಂದು ತೆವಾಟಿಯ ಮತ್ತು ರಿಧಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲೂ ಅನೇಕ ಕ್ರಿಕೆಟಿಗಳು ಸಹ ಭಾಗವಹಿಸಿದ್ದರು. ರಾಹುಲ್ ತೆವಾಟಿಯ ಮದುವೆ ಸಮಾರಂಭದ ಚಿತ್ರಗಳು ವೈರಲ್ ಆದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದುಬಂದಿವು.
2021 ಫ್ಲ್ಯಾಶ್‌ಬ್ಯಾಕ್: ಈ ವರ್ಷ 2 ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದ ಟೀಂ ಇಂಡಿಯಾ

ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ
ತೆವಾಟಿಯ ಮದುವೆಯ ಸುದ್ದಿ ಒಂದೆಡೆಯಾದ್ರೆ, ಇದಕ್ಕೂ ಮೊದಲು ಮುಂಬೈನ ಪಾಲ್ಘರ್‌ನ ನಿವಾಸಿ , ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಸೋಮವಾರ ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್ ಅವರೊಂದಿಗೆ ತೆವಾಟಿಯ ಮದುವೆ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸೋಮವಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಸೌಲಭ್ಯದಲ್ಲಿ ಒಂದು ಸಣ್ಣ ನಿಶ್ಚಿತಾರ್ಥದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಅವರು 75 ಅತಿಥಿಗಳನ್ನು, ಅದ್ರಲ್ಲೂ ಹೆಚ್ಚಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದರು. ಕಾಂಗರೂ ನಾಡಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್ ಬಳಿಕ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.


Click it and Unblock the Notifications












