ಮಹಿಳಾ ಐಪಿಎಲ್‌ಗೆ ವೇದಿಕೆ ಸಜ್ಜು: ಮಾರ್ಚ್‌ 2023ಕ್ಕೆ ಟಿ20 ಟೂರ್ನಮೆಂಟ್, 5 ತಂಡಗಳು ಭಾಗಿ

ಮಹಿಳಾ ಐಪಿಎಲ್‌ಗೆ ವೇದಿಕೆ ಸಜ್ಜಾಗಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಮಹಿಳಾ ಟಿ20 ಲೀಗ್ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸಿದೆ. ಜನಪ್ರಿಯ ವೆಬ್‌ಸೈಟ್ ಕ್ರಿಕ್ ಬಜ್ ಪ್ರಕಾರ, ಲೀಗ್‌ನ ಕಾರ್ಯವಿಧಾನಗಳು ಮತ್ತು ಸ್ಥಳಗಳನ್ನು ಅಂತಿಮಗೊಳಿಸುವತ್ತ ಬಿಸಿಸಿಐ ಗಮನಹರಿಸಿದ್ದು, ಮಹಿಳಾ ಐಪಿಎಲ್‌ನಲ್ಲಿ ಐದು ತಂಡಗಳು ಭಾಗವಹಿಸಲಿದೆ.

ಮಹಿಳಾ ಐಪಿಎಲ್ ಚೊಚ್ಚಲ ಸೀಸನ್‌ನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದ ಮೂಲಕ ಎರಡನೇ ಫೈನಲಿಸ್ಟ್ ಅನ್ನು ನಿರ್ಧರಿಸುತ್ತವೆ. ಪ್ರತಿ ಫ್ರಾಂಚೈಸಿ ತನ್ನ ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರಬಾರದು. ಮಹಿಳಾ ಐಪಿಎಲ್ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ದೇಶೀಯ ಮತ್ತು ವಿದೇಶಿ ಆಟಗಾರರು ಸಮಬಲ ಇರಬೇಕು

ದೇಶೀಯ ಮತ್ತು ವಿದೇಶಿ ಆಟಗಾರರು ಸಮಬಲ ಇರಬೇಕು

''ತಂಡದಲ್ಲಿ ದೇಶಿ ಹಾಗೂ ವಿದೇಶಿ ಕ್ರಿಕೆಟಿಗರ ಸಮಬಲ ಇರಬೇಕು. ಐದು ತಂಡಗಳೊಂದಿಗೆ ಮಹಿಳೆಯರನ್ನು ಸಂಘಟಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಪ್ರತಿ ತಂಡವು 18 ಆಟಗಾರರನ್ನು ಹೊಂದಿರಬೇಕು. ಅದರಲ್ಲಿ ಆರಕ್ಕಿಂತ ಹೆಚ್ಚು ವಿದೇಶಿ ಕ್ರಿಕೆಟಿಗರು ಇರಬಾರದು. ಅಲ್ಲದೆ, ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರಬಾರದು. ಅವರಲ್ಲಿ ನಾಲ್ವರು ಐಸಿಸಿ ಸದಸ್ಯತ್ವದ ದೇಶಗಳಿಗೆ ಸೇರಿದವರು, ಇನ್ನೊಬ್ಬರು ಸಹಾಯಕ ಸದಸ್ಯರಾಗಿರಬಹುದು.'' ಎಂದು ಅಧಿಕಾರಿ ಹೇಳಿದರು.

T20 World Cup: ಈ ಐದು ತಂಡಗಳ ವಿರುದ್ಧ ವಿಶ್ವಕಪ್‌ನಲ್ಲಿ ಇದುವರೆಗೂ ಟೀಂ ಇಂಡಿಯಾ ಸೋಲು ಕಂಡಿಲ್ಲ

ಬಿಗ್‌ ಬ್ಯಾಷ್‌ನಲ್ಲಿ ಕೇವಲ ಮೂವರು ವಿದೇಶಿ ಕ್ರಿಕೆಟಿಗರಿಗೆ ಅವಕಾಶ

ಬಿಗ್‌ ಬ್ಯಾಷ್‌ನಲ್ಲಿ ಕೇವಲ ಮೂವರು ವಿದೇಶಿ ಕ್ರಿಕೆಟಿಗರಿಗೆ ಅವಕಾಶ

ಬಿಗ್ ಬ್ಯಾಷ್ ಮತ್ತು ದಿ ಹಂಡ್ರೆಡ್ ಟೂರ್ನಿಗಳಲ್ಲಿ ಕೇವಲ ಮೂವರು ವಿದೇಶಿ ಕ್ರಿಕೆಟಿಗರಿಗೆ ಮಾತ್ರ ಅವಕಾಶ ನೀಡಿರುವುದು ಗಮನಾರ್ಹ. ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 9-26ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ಮೊದಲ ಆವೃತ್ತಿಯಲ್ಲಿ 10 ಪಂದ್ಯಗಳನ್ನು ಒಂದು ಸ್ಥಳದಲ್ಲಿ ಮತ್ತು ಉಳಿದ 10 ಪಂದ್ಯಗಳನ್ನು ಮತ್ತೊಂದು ಸ್ಥಳದಲ್ಲಿ ನಡೆಸಲು ಉದ್ದೇಶಿಸಿದೆ. ಫ್ರಾಂಚೈಸಿಗಳ ಮಾರಾಟ ಮತ್ತು ಟೆಂಡರ್ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದೆ.

ಟಿ20 ವಿಶ್ವಕಪ್‌ನಲ್ಲಿ ಈತ ಭಾರತದ ಟಾಪ್ ಸ್ಕೋರರ್ ಆಗಬಹುದು: ಆಕಾಶ್ ಚೋಪ್ರಾ

ಮಹಿಳಾ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿರುವ RR, KKR

ಮಹಿಳಾ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿರುವ RR, KKR

IPL ಮಹಿಳಾ ಫ್ರಾಂಚೈಸಿಗಳನ್ನು ಸಮಯ ಬಂದಾಗ ತಂಡಗಳ ಹರಾಜು ಪ್ರಕ್ರಿಯೆಯನ್ನೂ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈಗಾಗಲೇ ಪುರುಷರ ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಬಹಿರಂಗವಾಗಿಯೇ ಮಹಿಳಾ ಐಪಿಎಲ್ ತಂಡ ಖರೀದಿಗೆ ಆಸಕ್ತಿ ವಹಿಸಿರುವುದಾಗಿ ತಿಳಿಸಿವೆ. ಹೀಗಾಗಿ ಮಹಿಳಾ ಐಪಿಎಲ್ ಲೀಗ್ ಎಂಬ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ.

For Quick Alerts
ALLOW NOTIFICATIONS
For Daily Alerts
Story first published: Friday, October 14, 2022, 16:33 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X