ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಈತ ಭಾರತದ ಟಾಪ್ ಸ್ಕೋರರ್ ಆಗಬಹುದು: ಆಕಾಶ್ ಚೋಪ್ರಾ

KL Rahul

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಬೇಕೆಂದು ಪ್ರತಿ ತಂಡಗಳು ಉತ್ತಮ ತಯಾರಿ ನಡೆಸಿವೆ. ಈಗಾಗಲೇ ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡಗಳು ಆಸ್ಟ್ರೇಲಿಯಾದಲ್ಲಿದ್ದು, ಆಂಗ್ಲರು ಟಿ20 ಸರಣಿಯಲ್ಲಿ ಭಾಗಿಯಾಗಿದ್ರೆ, ಟೀಂ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ತೊಡಗಿಕೊಂಡಿದೆ.

ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾರತ ಮೊದಲ ಪಂದ್ಯ ಜಯಿಸಿದ್ರೆ, ವೆಸ್ಟ್ರನ್‌ ಆಸ್ಟ್ರೇಲಿಯಾ ಎರಡನೇ ಪಂದ್ಯ ಗೆದ್ದಿತು. ಹೀಗಾಗಿ ಭಾರತ ಮಿಶ್ರ ಫಲಿತಾಂಶವನ್ನ ಕಂಡಿದೆ. ಇನ್ನುಳಿದಂತೆ ಎರಡು ಅಭ್ಯಾಸ ಪಂದ್ಯಗಳನ್ನ ಭಾರತ ಆಡಲಿದ್ದು ಅಂತಿಮ ಪ್ಲೇಯಿಂಗ್ ಇಲೆವೆನ್‌ ಆಯ್ಕೆ ಮಾಡಬೇಕಿದೆ.

ಅಕ್ಟೋಬರ್ 23ರಂದು ಭಾರತದ ಮೊದಲ ಪಂದ್ಯ

ಅಕ್ಟೋಬರ್ 23ರಂದು ಭಾರತದ ಮೊದಲ ಪಂದ್ಯ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ ಮುಖಭಂಗಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ. ಪಾಕಿಸ್ತಾನ ತಂಡವು ಟಾಪ್ ಆರ್ಡರ್ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ಮಧ್ಯಮ ಕ್ರಮಾಂಕ ಅಷ್ಟೊಂದು ಬಲಿಷ್ಟವಾಗಿಲ್ಲ.

ಮತ್ತೊಂದೆಡೆ ಟೀಂ ಇಂಡಿಯಾಗೆ ಡೆತ್‌ ಓವರ್‌ ಬೌಲಿಂಗ್‌ನದ್ದೇ ಸಮಸ್ಯೆ ಎದ್ದು ಕಾಡುತ್ತಿದೆ. ಭುವನೇಶ್ವರ್ ಕುಮಾರ್ ನಂತಹ ಅನುಭವಿ ವೇಗಿಗಳೇ ದುಬಾರಿಯಾಗಿದ್ದಾರೆ.

ರಾಹುಲ್ ಭಾರತದ ಟಾಪ್ ಸ್ಕೋರರ್ ಆಗಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ

ರಾಹುಲ್ ಭಾರತದ ಟಾಪ್ ಸ್ಕೋರರ್ ಆಗಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ

ಭಾರತದ ಮಾಜಿ ಆಟಗಾರ ಆಕಾಶ್‌ ಚೋಪ್ರಾ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಯಾರು ಟಾಪ್ ಸ್ಕೋರರ್ ಆಗಬಹುದು ಎಂದು ಅಂದಾಜಿಸಿದ್ದಾರೆ. ಟೀಂ ಇಂಡಿಯಾ ಓಪನರ್ ಹಾಗೂ ಉಪನಾಯಕ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ಪಿಚ್‌ಗಳಿಗೆ ಸರಿಸಾಟಿಯಾದ ಬ್ಯಾಟರ್ ಆಗಿದ್ದು, ಈತನ ಗರಿಷ್ಠ ಸ್ಕೋರರ್‌ ಆಗಬಹುದು ಎಂದಿದ್ದಾರೆ.

"ಕೆಎಲ್‌ ರಾಹುಲ್ 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಬಹುದು. ಅವರಿಗೆ ಎಲ್ಲಾ 20 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವಿದೆ ಮತ್ತು ಕೊನೆಯವರೆಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಈ ಪಿಚ್‌ಗಳು ಅವರಿಗೆ ಹೆಚ್ಚು ಹೊಂದಿಕೆಯಾಗುತ್ತವೆ'' ಎಂದು ಚೋಪ್ರಾ ಹೇಳಿದರು.

ಭಾರತಕ್ಕೆ ಮತ್ತೆ ಪಾಕ್‌ನ ಆ ವೇಗಿಯ ಆತಂಕ: ಗಂಭೀರ್ ನೀಡಿದ್ರು ಉಪಯುಕ್ತ ಸಲಹೆ

ಏಷ್ಯಾಕಪ್‌ನಲ್ಲಿ ಟಾಪ್ ಆರ್ಡರ್ ವೈಫಲ್ಯ, ಪಾಕ್ ವಿರುದ್ಧ ಸೋಲು

ಏಷ್ಯಾಕಪ್‌ನಲ್ಲಿ ಟಾಪ್ ಆರ್ಡರ್ ವೈಫಲ್ಯ, ಪಾಕ್ ವಿರುದ್ಧ ಸೋಲು

ಇನ್ನು ಇತ್ತೀಚಿನ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಮತ್ತದೇ ವೈಫಲ್ಯ ಅನುಭವಿಸಿತು. ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತವು ಫೈನಲ್ ಮುಖವನ್ನೂ ನೋಡಲು ಮನೆಗೆ ಬಂದಿತು. ಅದ್ರಲ್ಲೂ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡದ ವಿರುದ್ಧ ಸೋಲು ಭಾರೀ ಹಿನ್ನಡೆಯಾಗಿದೆ.

ಆದ್ರೆ ಕೆ.ಎಲ್ ರಾಹುಲ್ ಮತ್ತೆ ಉತ್ತಮ ಟಚ್‌ನಲ್ಲಿದ್ದು, ರೋಹಿತ್ ಶರ್ಮಾ ಕೂಡ ಅಬ್ಬರಿಸಿದ್ರೆ ಎದುರಾಳಿಗೆ ಕಷ್ಟವಾವುದು ಖಚಿತ.

ಪ್ರಸ್ತುತ ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿರುವ ಈ ನಾಲ್ವರು ಮುಂದಿನ ಚುಟುಕು ವಿಶ್ವಕಪ್‌ ಆಡೋದೆ ಅನುಮಾನ!

ಅರ್ಷ್‌ದೀಪ್ ಆಸಿಸ್ ಪಿಚ್‌ಗಳಲ್ಲಿ ಮಿಂಚಬಹುದು!

ಅರ್ಷ್‌ದೀಪ್ ಆಸಿಸ್ ಪಿಚ್‌ಗಳಲ್ಲಿ ಮಿಂಚಬಹುದು!

ಟೀಂ ಇಂಡಿಯಾ ಬೌಲಿಂಗ್ ಕುರಿತು ಮಾತನಾಡಿದ ಆಕಾಶ್ ಚೋಪ್ರಾ ಜಸ್ಪ್ರೀತ್ ಬುಮ್ರಾ ಇಲ್ಲದ ಭಾರತ ತಂಡದಲ್ಲಿ ಅರ್ಷ್‌ದೀಪ್ ಸಿಂಗ್ ಕೀ ಬೌಲರ್ ಆಗುತ್ತಾರೆ ಎಂದಿದ್ದಾರೆ. ಆಸಿಸ್ ಪಿಚ್‌ಗಳಲ್ಲಿ ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ರನ್‌ಗಳನ್ನ ನಿಯಂತ್ರಿಸುವಲ್ಲಿ ಅರ್ಷ್‌ದೀಪ್ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಅಂದಾಜಿಸಿದ್ದಾರೆ.

"ಅದು ಅರ್ಷದೀಪ್ ಸಿಂಗ್ ಎಂದು ನಾನು ನಂಬುತ್ತೇನೆ. ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುತ್ತಾರೆ ಮತ್ತು ಡೆತ್ ಓವರ್‌ಗಳಲ್ಲಿಯೂ ಸಹ. ಮಧ್ಯಮ ಓವರ್‌ಗಳಲ್ಲಿ ಅವರಿಗೆ ಚೆಂಡನ್ನು ನೀಡುವ ಸಾಧ್ಯತೆಯೂ ಇದೆ. ಅವರು ಆಸ್ಟ್ರೇಲಿಯಾದ ಪಿಚ್‌ಗಳು ಮತ್ತು ದೊಡ್ಡ ಮೈದಾನಗಳನ್ನು ಇಷ್ಟಪಡುತ್ತಾರೆ, "ಎಂದು ಅವರು ಹೇಳಿದರು.

ವಿಶ್ವದ ಬೆಸ್ಟ್ ತಂಡಗಳಲ್ಲಿ ಮುಂದಿರುವ ಟೀಂ ಇಂಡಿಯಾ ಆಳವಾದ ಬ್ಯಾಟಿಂಗ್ ಲೈನಪ್ ಹೊಂದಿದ್ದು, ಈ ಬಾರಿಯ ವಿಶ್ವಕಪ್ ಗೆಲುವಿನ ಫೇವರಿಟ್‌ಗಳಲ್ಲಿ ಒಂದಾಗಿದೆ.

Story first published: Friday, October 14, 2022, 16:12 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X