Ind vs WI 3rd T20: ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು, ಸರಣಿಯಲ್ಲಿ 2-1ರಿಂದ ಮುನ್ನಡೆ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ 165ರನ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಯಶಸ್ವಿಯಾಗಿ ಗುರಿ ಮುಟ್ಟಿದ್ದಲ್ಲದೆ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸೂರ್ಯಕುಮಾರ್ ಯಾದವ್ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಭಾರತ ಒಂದು ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿದೆ. ಜೊತೆಗೆ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ರೋಹಿತ್ ಟೀಂ ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನಿಸಿತು. ಐದು ವಿಕೆಟ್ ನಷ್ಟಕ್ಕೆ 164ರನ್ ಕಲೆಹಾಕಿದ ವಿಂಡೀಸ್ ಭಾರತಕ್ಕೆ 165ರನ್ ಗುರಿ ನೀಡಿತ್ತು. ಈ ಗುರಿಯನ್ನ ಭಾರತ ಸುಲಭವಾಗಿ ಬೆನ್ನತ್ತಿದೆ.

ಸೂರ್ಯಕುಮಾರ್ ಸ್ಫೋಟಕ ಆಟ
ರೋಹಿತ್ ಶರ್ಮಾ ಜೊತೆಗೆ ಪ್ರಯೋಗಾಯತ್ಮಕವಾಗಿ ಈ ಸರಣಿಯಲ್ಲಿ ಓಪನರ್ ಆಗಿ ಮತ್ತೊಮ್ಮೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿದ್ದಾರೆ. ರೋಹಿತ್ ಶರ್ಮಾ 11ರನ್‌ಗಳಿಸಿ ರಿಟೈರ್ಡ್ ಹರ್ಟ್ ಆದ ಬಳಿಕ ಎದುರಾಳಿ ಬೌಲರ್‌ಗಳನ್ನ ಚಾರ್ಜ್ ಮಾಡಿದ ಸೂರ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಓಪನರ್ ಆಗಿ ಮೊದಲ ಅರ್ಧಶತಕ ದಾಖಲಿಸಿದ ಸೂರ್ಯ 146ರ ಸ್ಟ್ರೈಕ್‌ರೇಟ್‌ನಲ್ಲಿ 50 ಎಸೆತಗಳಲ್ಲಿ 73ರನ್ ಸಿಡಿಸಿದರು. ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸೂರ್ಯ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಅಮೋಘ ಸಿಕ್ಸರ್ ಒಳಗೊಂಡಿದ್ದವು.
ಒಂದೆಡೆ ವಿಕೆಟ್ ಉರುಳಿದರೂ ತನ್ನ ಕ್ಲಾಸ್ ಆಟವಾಡಿದ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಆಟವಾಡಿದರು.

ಟೀಂ ಇಂಡಿಯಾಗೆ ಏಳು ವಿಕೆಟ್‌ಗಳ ಜಯ
ಒಂದೆಡೆ ಸೂರ್ಯಕುಮಾರ್ ಬೊಂಬಾಟ್ ಆಟದ ಜೊತೆಗೆ ಇತರೆ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ 27 ಎಸೆತಗಳಲ್ಲಿ 22ರನ್ ಕಲೆಹಾಕಿ ಔಟಾದರು. ಹಾರ್ದಿಕ್ ಪಾಂಡ್ಯ 4ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಆದ್ರೆ ಸೂರ್ಯನ ಅಬ್ಬರದ ಜೊತೆಗೆ ರಿಷಭ್ ಪಂತ್ ಭರ್ಜರಿ ಫಾರ್ಮ್ ಮುಂದುವರಿದು 26 ಎಸೆತಗಳಲ್ಲಿ ಅಜೇಯ 33ರನ್ ಕಲೆಹಾಕಿದರು.
ರಿಷಭ್ ಪಂತ್ ಬೌಂಡರಿ ಸಿಡಿಸುವ ಮೂಲಕ ಕೊನೆಯಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೀಪಕ್ ಹೂಡ ಒಂದು ಬೌಂಡರಿ ಸಮೇತ 10ರನ್ ಕಲೆಹಾಕಿದರು. ಭಾರತ 19 ಓವರ್‌ಗಳಲ್ಲಿಯೇ ಮೂರು ವಿಕೆಟ್ ನಷ್ಟಕ್ಕೆ 165ರನ್ ಕಲೆಹಾಕಿ ಗೆಲುವಿನ ದಡ ತಲುಪಿತು. ಜೊತೆಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಕಾಮನ್‌ವೆಲ್ತ್ ಗೇಮ್ಸ್ 2022: ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ತಂಡ

ಕೈಲ್ ಮೇಯರ್ಸ್ ಬೊಂಬಾಟ್ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಪರ ಓಪನರ್ ಆಗಿ ಕಣಕ್ಕಿಳಿದಿದ್ದ ಕೈಲ್ ಮೇಯರ್ಸ್ ಉತ್ತಮ ಜೊತೆಯಾಟದ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಸಹ ಪ್ರದರ್ಶಿಸಿದ್ರು. 50 ಎಸೆತಗಳಲ್ಲಿ 73 ರನ್ ಸಿಡಿಸಿದ ಮೇಯರ್ಸ್ ಇನ್ನಿಂಗ್ಸ್‌ನಲ್ಲಿ 8 ಸೊಗಸಾದ ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಬ್ರಾಂಡನ್ ಕಿಂಗ್ 20ರನ್‌ಗಳಿಸಿ ಔಟಾದ ಬಳಿಕ ಕೈಲ್ ಮೇಯರ್ಸ್ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಸಾಥ್ ನೀಡಲು ವಿಫಲಗೊಂಡ್ರು. ನಿಕೋಲಸ್ ಪೂರನ್ 22, ರೋವ್ಮನ್ ಪೊವೆಲ್ 23, ಶಿಮ್ರೋನ್ ಹೆಟ್ಮೆಯರ್ 12 ಎಸೆತಗಳಲ್ಲಿ 20ರನ್ ಸಿಡಿಸಿ ಔಟಾದ್ರು. ಪರಿಣಾಮ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.
ಏಷ್ಯಾ ಕಪ್ 2022: ತಂಡಗಳ ವೇಳಾಪಟ್ಟಿ, ಸಮಯ, ಸ್ಥಳದ ಮಾಹಿತಿ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್
ಬೆಂಚ್: ರವಿ ಬಿಷ್ಣೋಯ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಓಡಿಯನ್ ಸ್ಮಿತ್, ಕೀಮೋ ಪಾಲ್, ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications