Ind vs WI: ಫೀಲ್ಡಿಂಗ್ ವೇಳೆಯಲ್ಲಿ ಪುಶ್ ಅಪ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ ಶಿಖರ್ ಧವನ್

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಅಂಗಳದಲ್ಲಿ ಉತ್ತಮ ಆರಂಭ ಪಡೆದಿದ್ದು, ಮೊದಲ ಏಕದಿನ ಪಂದ್ಯದಲ್ಲಿ 3 ರನ್‌ಗಳ ಗೆಲುವನ್ನ ಪಡೆಯುವ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ನಾಯಕ ಶಿಖರ್ ಧವನ್ ಭರ್ಜರಿ ಆಟವಾಡುವ ಮೂಲಕ ತಂಡವು ಸವಾಲಿನ ಮೊತ್ತವನ್ನ ಪೇರಿಸಲು ಸಾಧ್ಯವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಶುಭಮನ್ ಗಿಲ್ ಜೊತೆಗೆ ಶತಕದ ಜೊತೆಯಾಟವಾಡಿದ ಶಿಖರ್ ಧವನ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಮೊದಲ ವಿಕೆಟ್‌ಗೆ 119ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಆತಿಥೇಯರಿಗೆ ಸಾಕಷ್ಟು ತಡೆಯೊಡ್ಡಿತು.
ಶುಭಮನ್ ಗಿಲ್ 64ರನ್‌ಗಳಿಸಿ ರನೌಟ್ ಆದ ಬಳಿಕವೂ ಶಿಖರ್ ಧವನ್ ತಮ್ಮ ಸೊಗಸಾದ ಆಟ ಮುಂದುವರಿಸಿದರು. ಎರಡನೇ ವಿಕೆಟ್‌ಗೆ ಶ್ರೇಯಸ್ ಜೊತೆಗೂಡಿ 94ರನ್‌ಗಳ ಜೊತೆವಾಡಿದ್ದ ಶಿಖರ್ ಧವನ್ ಶತಕದಂಚಿನಲ್ಲಿ ಎದುರಾಳಿ ತಂಡದ ಆಟಗಾರ ಬ್ರೂಕ್ಸ್ ಹಿಡಿದ ಕ್ಯಾಚ್‌ಗೆ ಬಲಿಯಾದರು.

97 ರನ್‌ಗೆ ಶಿಖರ್ ಧವನ್ ಔಟ್, ಮೂರು ರನ್‌ಗಳಲ್ಲಿ ಶತಕ ವಂಚಿತ
ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮೂರಂಕಿ ಗಡಿಮುಟ್ಟುವ ಮುನ್ನ ಎಡವಿದ್ರು. ಗುಡಾಕೇಶ್ ಮೋಟಿ ಬೌಲಿಂಗ್‌ನಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನತ್ತ ಚೆಂಡನ್ನ ಬಾರಿಸಿದ ಶಿಖರ್ ಧವನ್‌ಗೆ ಶಾಕ್ ಎದುರಾಯಿತು. ಸಮರಾ ಬ್ರೂಕ್ಸ್ ಹಿಡಿದ ಅದ್ಭುತ ಕ್ಯಾಚ್‌ನಿಂದ ಶಿಖರ್ ಧವನ್ ಕೇವಲ ಮೂರು ರನ್‌ಗಳ ಅಂತರದಲ್ಲಿ ವಿಂಡೀಸ್ ವಿರುದ್ಧ ಮೊದಲ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ 18ನೇ ಶತಕವನ್ನು ಮಿಸ್ ಮಾಡಿಕೊಂಡಿದ್ದಾರೆ.
99 ಎಸೆತಗಳಲ್ಲಿ 97 ರನ್‌ಗಳನ್ನ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು.
ವಿಂಡೀಸ್ ವಿರುದ್ಧ ಅರ್ಧಶತಕ: ದಾಖಲೆ ಪಟ್ಟಿ ಸೇರಿದ ಶ್ರೇಯಸ್ ಅಯ್ಯರ್

ಶ್ರೇಯರ್ ಅಯ್ಯರ್ ಅರ್ಧಶತಕ, ಉಳಿದ ಬ್ಯಾಟರ್ಸ್ ಫ್ಲಾಪ್
ಶಿಖರ್ ಧವನ್ 97ರನ್‌ಗಳಿಸಿ ಔಟಾದ ಬಳಿಕ, ಶ್ರೇಯಸ್ ಅಯ್ಯರ್ 57 ಎಸೆತಗಳಲ್ಲಿ 54ರನ್ ಕಲೆಹಾಕುವ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಸೂರ್ಯಕುಮಾರ್ ಯಾದವ್ 13, ಸಂಜು ಸ್ಯಾಮ್ಸನ್ 12, ಅಕ್ಷರ್ ಪಟೇಲ್ 21, ದೀಪಕ್ ಹೂಡಾ 27 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಪರಿಣಾಮ 350ಕ್ಕೂ ಹೆಚ್ಚು ರನ್ ಕಲೆಹಾಕುವ ರನ್‌ರೇಟ್ ಹೊಂದಿದ್ದ ಟೀಂ ಇಂಡಿಯಾ 308ಕ್ಕೆ ತೃಪ್ತಿಪಟ್ಟಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಕೈಲ್ ಮೇಯರ್ಸ್ 75, ಶಮ್ರಾ ಬ್ರೂಕ್ಸ್ 46, ಬ್ರಾಂಡನ್ ಕಿಂಗ್ 54, ನಿಕೂಲಸ್ ಪೂರನ್ 25, ಅಕೇಲ್ ಹುಸೇನ್ ಅಜೇಯ 32, ರೊಮಾರಿಯೋ ಶೆಫರ್ಡ್ 39 ರನ್ ಕಲೆಹಾಕುವ ಮೂಲಕ ಗೆಲುವಿನಂಚಿನಲ್ಲಿ ಎಡವಿದ್ರು. ವಿಂಡೀಸ್ ಕೊನೆಯ ಓವರ್‌ನಲ್ಲಿ ಮೂರು ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು.
ಈ ಪಂದ್ಯ ಸೋತರೂ ಗೆದ್ದಂತೆಯೇ: ರೋಚಕ ಕಾದಾಟದಲ್ಲಿ ಸೋಲಿನ ಬಳಿಕ ವಿಂಡಿಸ್ ನಾಯಕನ ಪ್ರತಿಕ್ರಿಯೆ
ಫೀಲ್ಡಿಂಗ್ ವೇಳೆ ಪುಶ್ ಅಪ್ ಹೊಡೆದ ಶಿಖರ್ ಧವನ್
309ರನ್ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕುತ್ತಿತ್ತು. ಈ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಫೀಲ್ಡಿಂಗ್ ವೇಳೆಯಲ್ಲಿ ಪುಶ್ ಅಪ್ ಹೊಡೆದು ಪ್ರೇಕ್ಷಕರನ್ನ ರಂಜಿಸಿದರು.
ಶಿಖರ್ ಧವನ್ ಮೈದಾನದಲ್ಲಿ ತಮ್ಮ ಕೂಲ್ ವ್ಯಕ್ತಿತ್ವದಿಂದಲೇ ಪ್ರೇಕ್ಷಕರನ್ನ ಮನರಂಜಿಸುತ್ತಾರೆ. ಆಟದ 37 ನೇ ಓವರ್‌ನಲ್ಲಿ ಅವರು ಕವರ್ಸ್‌ನಲ್ಲಿ ಚೆಂಡನ್ನು ಹಿಡಿದು ನಂತರ ಪುಶ್‌ಅಪ್‌ಗಳನ್ನು ಮಾಡಲು ಪ್ರಾರಂಭಿಸಿದರು, ಇದನ್ನ ನೋಡಿದ ಪ್ರೇಕ್ಷಕರು ರಂಜಿಸಿದರು.
ಟೀಂ ಇಂಡಿಯಾ ಕೆರಿಬಿಯನ್ ಅಂಗಳದಲ್ಲಿ ರೋಚಕ ಗೆಲುವಿನ ಮೂಲಕ ಟೂರ್ನಿ ಆರಂಭಿಸಿದೆ. ಕೊನೆಯ ಓವರ್‌ನಲ್ಲಿ 15ರನ್‌ಗಳನ್ನ ಡಿಫೆಂಡ್ ಮಾಡಿಕೊಂಡ ಮೊಹಮ್ಮದ್ ಸಿರಾಜ್ 12ರನ್ ನೀಡಿದರು. ಈ ಮೂಲಕ ಭಾರತ ಮೂರು ರನ್‌ಗಳ ಗೆಲುವಿನ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications