ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಪಂದ್ಯ ಸೋತರೂ ಗೆದ್ದಂತೆಯೇ: ರೋಚಕ ಕಾದಾಟದಲ್ಲಿ ಸೋಲಿನ ಬಳಿಕ ವಿಂಡಿಸ್ ನಾಯಕನ ಪ್ರತಿಕ್ರಿಯೆ

Ind vs WI: West Indies skipper Nicholas Pooran reaction after 1st match defeat against India

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. 309 ರನ್‌ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ಕೇವಲ 3 ರನ್‌ಗಳ ಅಂತರದಿಂದ ಸೋಲು ಅನುಭವಿಸುವ ಮೂಲಕ ಸೋಲು ಅನುಭವಿಸಿದೆ. ಈ ಸೋಲಿನ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಮಾತನಾಡಿದ್ದು ಸೋಲಿನ ನಿರಾಸೆಯಲ್ಲಿರುವ ತಂಡದ ಆಟಗಾರರಿಗೆ ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ.

ಮೊದಲಿಗೆ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ಶಿಖರ್ ಧವನ್ ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಭರ್ಜರಿ ಬ್ಯಾಟಿಂಗ್‌ನ ಕಾರಣದಿಂದಾಗಿ ಬೃಹತ್ ಮೊತ್ತವನ್ನು ಗಳಿಸಲು ಸಾಧ್ಯವಾಯಿತು. ಅಂತಿಮ ಹಂತದಲ್ಲಿ ವೆಸ್ಟ್ ಇಂಡೀಸ್ ತಂಡದ ಬೌಲಿಂಗ್ ವಿಭಾಗ ಕೂಡ ಯಶಸ್ಸು ಗಳಿಸಲು ಸಾಧ್ಯವಾಗಿದ್ದು ಭಾರತದ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್‌ನಲ್ಲಿ ಮಿಂಚಿದ ವಿಂಡೀಸ್ ಅಂತಿಮ ಹಂತದಲ್ಲಿ ಎಡವುವ ಮೂಲಕ ಸೋಲು ಅನುಭವಿಸಿದೆ.

Ind vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆInd vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆ

ಗೆದ್ದ ಭಾವನೆ ಉಂಟಾಗುತ್ತಿದೆ

ಗೆದ್ದ ಭಾವನೆ ಉಂಟಾಗುತ್ತಿದೆ

ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್, "ಈ ಪಂದ್ಯವನ್ನು ಗೆದ್ದಂತೆಯೇ ಭಾವನೆ ಮೂಡುತ್ತದೆ. ರೋಚಕವಾದ ಸೆಣೆಸಾಟ ಇದು. ಎಲ್ಲರು ಕೂಡ ಐವತ್ತು ಓವರ್‌ಗಳ ಕಾಲ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಈಗ ಎಲ್ಲರೂ ನಾವು ಸಮರ್ಥವಾಗಿ ಐವತ್ತು ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಬಲ್ಲೆವು ಎಂಬುದನ್ನು ನೋಡಿದ್ದಾರೆ. ಇಲ್ಲಿಂದ ನಾವು ಮತ್ತಷ್ಟು ಶಕ್ತಿ ಹೆಚ್ಚಿಸಿಕೊಳ್ಳುತ್ತಾ ಸಾಗಯವ ವಿಶ್ವಾವಿದೆ" ಎಂದಿದ್ದಾರೆ ನಿಕೋಲಸ್ ಪೂರನ್.

ಮುಂದಿನ ಪಂದ್ಯಗಳ ಮೇಲೆ ಗಮನ

ಮುಂದಿನ ಪಂದ್ಯಗಳ ಮೇಲೆ ಗಮನ

"ಈಗ ಈ ಸರಣಿಯ ಉಳಿದ ಪಂದ್ಯಗಳ ಮೇಲೆ ಗಮನಹರಿಸಬೇಕಿದೆ. ಇದು ಉತ್ತಮವಾದ ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಅವರನ್ನು ನಿಯಂತ್ರಿಸಲು ನಮ್ಮ ಬೌಲರ್‌ಗಳು ಉತ್ತಮವಾಗಿ ದಾಳಿ ನಡೆಸಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೂ ಸೋಲನ್ನು ಒಪ್ಪಿಕೊಳ್ಳುತ್ತೇವೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಸಕಾರಾತ್ಮಕ ಸಂಗತಿಗಳ ಕಡೆಗೆ ನಮ್ಮ ಗಮನವಿರಲಿ" ಎಂದಿದ್ದಾರೆ ವೆಸ್ಟ್ ಇಂಡಿಸ್ ತಂಡದ ನಾಯಕ ನಿಕೋಲಸ್ ಪೂರನ್.

ಮಿಂಚಿದ ದಾಂಡಿಗರು

ಮಿಂಚಿದ ದಾಂಡಿಗರು

ಭಾರತದ ಪರವಾಗಿ ನಾತಕ ಶಿಖರ್ ಧವನ್ ಅದ್ಭುತ ಬ್ಯಾಟಿಂಗ್ ನಡೆಸಿ 97 ರನ್‌ಗಳಿಸಿ ಕೇವಲ ಮೂರು ರನ್‌ಗಳ ಅಂತರದಿಂದ ಶತಕವಂಚಿತವಾಗಿದ್ದಾರೆ. ಇನ್ನು ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಕೂಡ ಅರ್ಧ ಶತಕ ಸಿಡಿಸಿ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದ ಪರವಾಗಿ ಆರಂಭಿಕ ಆಟಗಾರ ಕೈಲ್ ಮೇಯರ್ಸ್ 75 ರನ್‌ಗಳಿಸಿ ಮಿಂಚಿದರೆ ಬ್ರಾಂಡನ್ ಕಿಂಗ್ 54 ಹಾಗೂ ಬ್ರೂಕ್ಸ್ 46 ರನ್‌ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಅಕೀಲ್ ಹುಸೇನ್ ಹಾಗೂ ರೊಮಾರಿಓ ಶೆಫರ್ಡ್ ದೊಟ್ಟ ಹೋರಾಟ ಗಮನ ಸೆಳೆದಿದೆ.

Shubman Gill ಆಟ ನೋಡಿ ಟೀಮ್ ಇಂಡಿಯಾ ಅಭಿಮಾನಿಗಳು ಏನ್ ಹೇಳ್ತಾರೆ | *Cricket | OneIndia Kannada
ಆಡುವ ಬಳಗ

ಆಡುವ ಬಳಗ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬೆಂಚ್: ಕೀಸಿ ಕಾರ್ಟಿ, ಕೀಮೋ ಪಾಲ್

ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ,
ಬೆಂಚ್: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್

Story first published: Saturday, July 23, 2022, 10:06 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X