ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!

IND vs ZIM: 3 Indian players likely to fail in getting opportunity to play in the zimbabwe series

ಒಂದೆಡೆ ಟೀಮ್ ಇಂಡಿಯಾದ ಕೆಲ ಆಟಗಾರರು ಮುಂಬರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಅಭ್ಯಾಸ ನಡೆಸುವುದರಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಕೆಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡಿದ್ದು, ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇತ್ತೀಚಿಗಷ್ಟೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳೆರಡರಲ್ಲೂ ಗೆಲುವು ಕಂಡಿದ್ದ ಟೀಮ್ ಇಂಡಿಯಾದಲ್ಲಿದ್ದ ಹಲವು ಆಟಗಾರರು ಜಿಂಬಾಬ್ವೆ ಪ್ರವಾಸದಲ್ಲಿದ್ದು, ಏಷ್ಯಾಕಪ್ ಟೂರ್ನಿಯಲ್ಲಿ ಅವಕಾಶ ಲಭಿಸಿರುವ ಹಾಗೂ ಅವಕಾಶ ಸಿಗದೇ ಇರುವ ಆಟಗಾರರು ಈ ಪ್ರವಾಸದಲ್ಲಿದ್ದಾರೆ.

ಏಷ್ಯಾಕಪ್ 2022: ಟೂರ್ನಿಗೆ ಪ್ರಕಟವಾಗಿರುವ ಎಲ್ಲಾ ತಂಡಗಳ ಸಂಪೂರ್ಣ ಸ್ಕ್ವಾಡ್ ಇಲ್ಲಿದೆಏಷ್ಯಾಕಪ್ 2022: ಟೂರ್ನಿಗೆ ಪ್ರಕಟವಾಗಿರುವ ಎಲ್ಲಾ ತಂಡಗಳ ಸಂಪೂರ್ಣ ಸ್ಕ್ವಾಡ್ ಇಲ್ಲಿದೆ

ಇನ್ನು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಿ ಆಯ್ಕೆಗಾರರ ಗಮನ ಸೆಳೆದು ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಡೆಯುವ ಯತ್ನದಲ್ಲಿ ಕೆಲ ಆಟಗಾರರು ಕಣ್ಣಿಟ್ಟಿದ್ದಾರೆ. ಮೊದಲಿಗೆ ಈ ಜಿಂಬಾಬ್ವೆ ವಿರುದ್ಧಸ ಏಕದಿನ ಸರಣಿಗೆ ಪ್ರಕಟವಾಗಿದ್ದ ಭಾರತ ತಂಡಕ್ಕೆ ಶಿಖರ್ ಧವನ್ ನಾಯಕ ಎಂದು ಘೋಷಿಸಿದ್ದ ಬಿಸಿಸಿಐ ನಂತರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯದೇ ಗಾಯದ ಸಮಸ್ಯೆಯಿಂದಾಗಿ ಸಾಲು ಸಾಲು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಅವರನ್ನು ನಾಯಕ ಎಂದು ಘೋಷಣೆ ಮಾಡಿದೆ.

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಇನ್ನು ಈ ಸರಣಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್‌ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಗೆ ಒಳಗಾದ ಕಾರಣ ಸರಣಿಯಿಂದ ಹೊರಬಿದ್ದಿದ್ದು, ಇತ್ತೀಚಿಗಷ್ಟೆ ಬದಲಿ ಆಟಗಾರನಾಗಿ ಶಹಬಾಜ್ ಅಹ್ಮದ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ತಂಡದಲ್ಲಿ ಕೆಲ ಚಿಕ್ಕ ಬದಲಾವಣೆಯಾಗಿದ್ದು, ಈ ಪ್ರವಾಸಕ್ಕೆ ಆಯ್ಕೆಯಾಗಿರುವ ಆಟಗಾರರ ಪೈಕಿ ಕೆಲವರಿಗೆ ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ಲಭಿಸದೇ ತವರಿಗೆ ವಾಪಸ್ ಆಗಲಿದ್ದಾರೆ ಎನ್ನಬಹುದು. ಹೀಗೆ ಜಿಂಬಾಬ್ವೆ ಪ್ರವಾಸದ ಪಂದ್ಯಗಳಲ್ಲಿ ಒಂದೇ ಒಂದು ಅವಕಾಶವೂ ಸಿಗದೇ ತವರಿಗೆ ಹಿಂತಿರುಗುವ ಸಾಧ್ಯತೆಗಳಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

3. ರಾಹುಲ್ ತ್ರಿಪಾಠಿ

3. ರಾಹುಲ್ ತ್ರಿಪಾಠಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಮ್ಮೆ ಮಿಂಚಿದ ರಾಹುಲ್ ತ್ರಿಪಾಠಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಿತ್ತು. ಆದರೆ, ಅಂದು ಅವಕಾಶ ವಂಚಿತರಾಗಿದ್ದ ರಾಹುಲ್ ತ್ರಿಪಾಠಿ ಈ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದು, ಈ ಬಾರಿಯೂ ಸಹ ಕಣಕ್ಕಿಳಿಯುವ ಅವಕಾಶ ಅನುಮಾನ ಎನ್ನಬಹುದು. ವಿವಿಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸುವ ಸಾಮರ್ಥ್ಯವಿರುವ ರಾಹುಲ್ ತ್ರಿಪಾಠಿಗೆ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಸಂಜು ಸ್ಯಾಮ್ಸನ್ ಅಥವಾ ದೀಪಕ್ ಹೂಡಾ ತಂಡದಿಂದ ಹೊರನಡೆಯಬೇಕು ಹಾಗೂ ಅಗ್ರಕ್ರಮಾಂಕದಲ್ಲಿ ಶಿಖರ್ ಧವನ್, ಶುಬ್‌ಮನ್ ಗಿಲ್ ಹಾಗೂ ಕೆಎಲ್ ರಾಹುಲ್ ರೀತಿಯ ಆಟಗಾರರು ಇರುವುದರಿಂದ ಇವರ ನಡುವೆ ಅವಕಾಶ ಲಭಿಸುವುದು ಅನುಮಾನ ಎನ್ನಬಹುದು.

2. ರುತುರಾಜ್ ಗಾಯಕ್ವಾಡ್

2. ರುತುರಾಜ್ ಗಾಯಕ್ವಾಡ್

ಇತ್ತೀಚೆಗಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರುತುರಾಜ್ ಗಾಯಕ್ವಾಡ್ ಸದ್ಯ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದು, ಇನ್ನೂ ಸಹ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಿದೆ. ಇನ್ನು ರಾಹುಲ್ ತ್ರಿಪಾಠಿ ರೀತಿ ವಿವಿಧ ಕ್ರಮಾಂಕದಲ್ಲಿ ಕಣಕ್ಕಿಳಿಯದೇ ಕೇವಲ ಆರಂಭಿಕನಾಗಿ ಮಾತ್ರ ಕಣಕ್ಕಿಳಿಯುವ ಆಟಗಾರನಾಗಿರುವ ರುತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿಯೂ ಸಹ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾ್ರ್ಪಣೆ ಮಾಡುವುದು ಅನುಮಾನ ಎನ್ನಬಹುದು. ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಡಿರುವ ಶುಬ್‌ಮನ್ ಗಿಲ್ ಜತೆಗೆ ಶಿಖರ್ ಧವನ್, ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಇರುವುದರಿಂದ ರುತುರಾಜ್ ಗಾಯಕ್ವಾಡ್‌ಗೆ ಅವಕಾಶ ಲಭಿಸುವುದು ಅನುಮಾನವೇ ಸರಿ.

1. ಶಹಬಾಜ್ ಅಹ್ಮದ್

1. ಶಹಬಾಜ್ ಅಹ್ಮದ್

ಈ ಸರಣಿಗೆ ಆಯ್ಕೆಯಾಗಿದ್ದ ಆಲ್‌ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಹೊರಬಿದ್ದ ನಂತರ ಬದಲಿ ಆಟಗಾರನಾಗಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಶಹಬಾಜ್ ಅಹ್ಮದ್ ಅಕ್ಷರ್ ಪಟೇಲ್ ಮುಂದೆ ಅವಕಾಶ ವಂಚಿತರಾಗುವ ಸಾಧ್ಯತೆಗಳಿವೆ. ಶಹಬಾಜ್ ಅಹ್ಮದ್ ಅಕ್ಷರ್ ಪಟೇಲ್ ರೀತಿಯ ಎಡಗೈ ಆಲ್‌ರೌಂಡರ್ ಆಗಿದ್ದು, ಅಕ್ಷರ್ ಪಟೇಲ್‌ ಹಾಗೂ ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ಲಭಿಸಲಿದ್ದು ಶಹಬಾಜ್ ಅಹ್ಮದ್ ಆಡುವ ಅವಕಾಶ ಪಡೆದುಕೊಳ್ಳದೇ ಇರಬಹುದು.

Story first published: Wednesday, August 17, 2022, 17:55 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X