ಟ್ವೆಂಟಿ20: ಹೊಸ ದಾಖಲೆ ಬರೆದ ಕಿಂಗ್ ಕ್ರಿಸ್ ಗೇಲ್
ಬೆಂಗಳೂರು, ಏ.29: ಐಪಿಎಲ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮತ್ತೊಂದು ದಾಖಲೆ ಬರೆದಿದ್ದಾರೆ. ಮಳೆಗೆ ಆಹುತಿಯಾದ ಟ್ವೆಂಟಿ20 ಕ್ರಿಕೆಟ್ ಪಂದ್ಯದಲ್ಲಿ ಕ್ರಿಸ್ ಗೇಲ್ ಹೆಚ್ಚು ಹೊತ್ತು ಆಟವಾಡದಿದ್ದರೂ ಹೊಡೆದ ಸಿಕ್ಸರ್ ಹೊಸ ರೆಕಾರ್ಡ್ ಸೃಷ್ಟಿ ಮಾಡಿತು.
ಜಮೈಕಾದ ಕಿಂಗ್ ಗೇಲ್ ಅವರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಈಗ ಟ್ವೆಂಟಿ 20 ಕ್ರಿಕೆಟ್ ನಲ್ಲೂ ಕ್ರಿಸ್ ಗೇಲ್ ಬಾರಿಸಿದ ಸಿಕ್ಸರ್ ಗಳೇ ಎಲ್ಲರಿಗಿಂತ ಮುಂದಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೇಲ್ ಹೊಡೆದ ಸಿಕ್ಸರ್ ಅವರ 500ನೇ ಸಿಕ್ಸರ್ ( 201 ಟಿ20 ಪಂದ್ಯಗಳಲ್ಲಿ) ಆಗಿತ್ತು. []
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಏ.13 ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇದೇ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 200ನೇ ಸಿಕ್ಸರ್ ಸಿಡಿಸಿದ್ದರು.
ಈಗ 500ನೇ ಸಿಕ್ಸರ್ ಸಿಡಿಸುವ ಮೂಲಕ ಟ್ವಿಂಟಿ20 ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಈ ದಾಖಲೆ ಸಮೀಪ ಯಾರೂ ಇಲ್ಲ. ಮುಂಬೈ ಇಂಡಿಯನ್ಸ್ ಆಟಗಾರ ವೆಸ್ಟ್ ಇಂಡೀಸ್ ನ ಕಿರಾನ್ ಪೊಲ್ಲಾರ್ಡ್ ಅವರು 348 ಸಿಕ್ಸ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.[ವೈಯಕ್ತಿಕ ರನ್ ಗಳಿಕೆ, ಗೇಲ್ ಇಸ್ ಕಿಂಗ್ ]
35 ವರ್ಷ ವಯಸ್ಸಿನ ಗೇಲ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ 4 ಎಸೆತಗಳಲ್ಲಿ 10 ರನ್ (1 ಸಿಕ್ಸರ್, 1 ಬೌಂಡರಿ) ಗಳಿಸಿ ಔಟಾದರು. ಮೊದಲ ಓವರ್ ನಲ್ಲೇ ವಿಶ್ವದಾಖಲೆ ಬರೆದ ಮರು ಎಸೆತದಲ್ಲೇ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಎಬಿ ಡಿವಿಲೆಯರ್ಸ್ ಹಾಗೂ ಯುವ ಪ್ರತಿಭೆ ಸರ್ಫರಾಜ್ ಆರ್ಭಟದಿಂದ ಆರ್ ಸಿಬಿ 200ರನ್ ಮುಟ್ಟಿತ್ತು. ಅದರೆ, ಭಾರಿ ಮಳೆಯಿಂದ ಪಂದ್ಯ ರದ್ದಾಗಿತ್ತು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications