CSK VS DC: ಸಂಭಾವ್ಯ ಪ್ಲೇಯಿಂಗ್ 11, ಡ್ರೀಮ್ ಟೀಂ, ಫ್ಯಾಂಟೆಸಿ ಟಿಪ್ಸ್

ಸೂಪರ್ ಸಂಡೆಯ ಡಬಲ್ ಹೆಡರ್ ಪಂದ್ಯಗಳಲ್ಲಿ ಆರ್‌ಸಿಬಿ ವರ್ಸಸ್ ಎಸ್‌ಆರ್‌ಎಚ್ ಮುಖಾಮುಖಿ ಒಂದೆಡೆಯಾದ್ರೆ, ಮೇ 08ರಂದು ನಡೆಯುವ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಖಾಡಕ್ಕಿಳಿಯಲು ಸಜ್ಜಾಗಿವೆ. ಮುಂಬೈನ ಡಿ.ವಿ. ಪಾಟೀಲ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ, ಬಲಿಷ್ಠ ಡೆಲ್ಲಿ ಸವಾಲು ಸ್ವೀಕರಿಸಲಿದೆ.
ಆರ್‌ಸಿಬಿ ವಿರುದ್ಧ ಕಳೆದ ಪಂದ್ಯದಲ್ಲಿ ಎಡವಿದ್ದ ಸಿಎಸ್‌ಎಕೆ, ನಾಯಕತ್ವ ವಿವಾದದ ಜೊತೆಗೆ ಗೆಲುವಿನ ಲಯ ಕಳೆದುಕೊಂಡಿದೆ. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಸಿಎಸ್‌ಕೆ ಟೀಂ ಉಳಿದ ಪಂದ್ಯಗಳಲ್ಲಾದ್ರೂ ಗೆಲುವು ಸಾಧಿಸುವ ಬಯಕೆ ಹೊಂದಿದೆ.
ಮತ್ತೊಂದೆಡೆ ಹೈದ್ರಾಬಾದ್ ವಿರುದ್ಧ ಗೆದ್ದು ಫುಲ್ ಜೋಶ್‌ನಲ್ಲಿರುವ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಮೇಲೆ ಕಣ್ಣಿಟ್ಟಿದ್ದು, ಶತಾಯಗತಾಯ ಉಳಿದ ಎಲ್ಲಾ ಪಂದ್ಯಗಳನ್ನ ಗೆಲ್ಲಲೇಬೇಕಿದೆ.

ಪಾಯಿಂಟ್ಸ್ ಟೇಬಲ್
ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಗೆದ್ದು ಉಳಿದ 7 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು, 6 ಪಾಯಿಂಟ್ಸ್‌ನೊಂದಿಗೆ 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಮತ್ತು ಸೋಲನ್ನ ಕಂಡಿದ್ದು, 10 ಪಾಯಿಂಟ್ಸ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.
SRH vs RCB: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್, ಪಿಚ್ ರಿಪೋರ್ಟ್

ಚೆನ್ನೈ ಮತ್ತು ಡೆಲ್ಲಿ ಸಂಪೂರ್ಣ ತಂಡ
ಡೆಲ್ಲಿ ಕ್ಯಾಪಿಟಲ್ಸ್:
ರಿಷಬ್ ಪಂತ್ (ನಾಯಕ, ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಅಭಿಷೇಕ್ ಶರ್ಮಾ, ಕಮಲೇಶ್ ನಾಗರಕೋಟಿ, ಕೆಎಸ್ ಭರತ್ ಸಿಂಗ್, ಭರತ್, ಮನ್ದೀಪ್ ಸಿಂಗ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್‌ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್‌ಗಿಡಿ, ವಿಕಿ ಓಸ್ತ್ವಾಲ್, ಸರ್ಫರಾಜ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್:
ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮೊಯಿನ್ ಅಲಿ, ಶಿವಂ ದುಬೆ, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಡ್ವೈನ್ ಪ್ರಿಟೋರಿಯಸ್, ನಾರಾಯಣ ಜಗದೀಸನ್ (ವಿಕೆಟ್ ಕೀಪರ್) , ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಕೆಎಂ ಆಸಿಫ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಹರಿ ನಿಶಾಂತ್, ಸುಬ್ರಾಂಶು ಸೇನಾಪತಿ.
IPL 2022: ಮುಂಬೈ ವಿರುದ್ಧ GT ಸೋಲಿಗೆ ಕಾರಣ ಬಹಿರಂಗಪಡಿಸಿದ ರಶೀದ್ ಖಾನ್

ಸಂಭಾವ್ಯ ಪ್ಲೇಯಿಂಗ್ 11 ತಂಡ
ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಎನ್ರಿಕ್ ನೊರ್ಕಿಯಾ, ಖಲೀಲ್ ಅಹ್ಮದ್
MI vs GT: ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು, ಸೋತ ಗುಜರಾತ್ ಸ್ಥಾನ ಎಷ್ಟು?

ಡೀಮ್ ಫ್ಯಾಂಟೆಸಿ ಟೀಂ
ತಂಡ 1: ಡೇವಿಡ್ ವಾರ್ನರ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರಾಬಿನ್ ಉತ್ತಪ್ಪ, ಮಿಚೆಲ್ ಮಾರ್ಷ್, ರಿಪಾಲ್ ಪಟೇಲ್, ಲಲಿತ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಸಿಮರ್ಜೀತ್ ಸಿಂಗ್.
ತಂಡ 2: ಡೆವೊನ್ ಕಾನ್ವೇ (ನಾಯಕ), ಮೊಯಿನ್ ಅಲಿ, ಅಂಬಟಿ ರಾಯುಡು, ರೋವ್‌ಮನ್ ಪೊವೆಲ್ (ಉಪನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಎನ್ರಿಕ್ ನೊರ್ಕಿಯಾ, ಮುಖೇಶ್ ಚೌಧರಿ, ಖಲೀಲ್ ಅಹ್ಮದ್.

ಯಾವ ತಂಡ ಪಂದ್ಯ ಗೆಲ್ಲಬಹುದು?
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ರನ್ ಚೇಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಹಾಳುಮಾಡಿಕೊಂಡಿದೆ. ತಂಡಗಳ ಪ್ರಸ್ತುತ ಫಾರ್ಮ್ ನೋಡಿದ್ರೆ, ಡೆಲ್ಲಿ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications