ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs GT: ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು, ಸೋತ ಗುಜರಾತ್ ಸ್ಥಾನ ಎಷ್ಟು?

Mumbai indians

ಐಪಿಎಲ್ 2022ರ ಸೀಸನ್‌ನ 51ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ರೋಚಕ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸೋತು ಸೋತು ಸುಣ್ಣವಾಗಿದ್ದ ಮುಂಬೈ ಇದೀಗ ಸತತ ಎರಡು ಪಂದ್ಯಗಳನ್ನ ಗೆದ್ದು ಬೀಗಿದೆ.

ಮುಂಬೈ ಇಂಡಿಯನ್ಸ್ ನೀಡಿದ್ದ 178ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಕೊನೆಯ ಓವರ್‌ನಲ್ಲಿ 9 ರನ್‌ ಕಲೆಹಾಕಲು ಸಾಧ್ಯವಾಗದೇ ಐದು ರನ್‌ಗಳಿಂದ ಸೋಲುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿತು. ವೃದ್ದಿಮಾನ್ ಸಾಹಾ 55, ಶುಭಮನ್ ಗಿಲ್ 52, ಹಾರ್ದಿಕ್ ಪಾಂಡ್ಯ 24, ಸಾಯಿ ಸುದರ್ಶನ್ 14 ರನ್‌ಗಳಿಸಿ ಔಟಾದ್ರು. ಕೊನೆಯ ಓವರ್‌ನಲ್ಲಿ ಪಿಂಚ್ ಹಿಟ್ಟರ್‌ಗಳಾದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವಾಟಿಯಾ ಕ್ರೀಸ್‌ನಲ್ಲಿ ಉಳಿದಿದ್ರು.

ಈ ಇಬ್ಬರು ಸ್ಫೋಟಕ ಆಟಗಾರರಿದ್ರೂ ಗುಜರಾತ್ ಟೈಟನ್ಸ್ ಕೊನೆಯ ಆರು ಎಸೆತಗಳಲ್ಲಿ 9 ರನ್ ಕಲೆಹಾಕಲು ಸಾಧ್ಯವಾಗದೇ ಮುಂಬೈ ಗೆ ಶರಣಾಗಿದೆ. ಮುಂಬೈ ಪರ ಅದ್ಭುತ ಬೌಲಿಂಗ್ ಮಾಡಿದ ಡೇನಿಯಲ್ ಸ್ಯಾಮ್ಸ್‌ ಕೇವಲ 3ರನ್‌ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ ಟೂರ್ನಿಯ ಗರಿಷ್ಠ 43, ಇಶಾನ್ ಕಿಶನ್ 45, ಸೂರ್ಯಕುಮಾರ್ ಯಾದವ್ 13, ತಿಲಕ್ ವರ್ಮಾ 21, ಪೊಲಾರ್ಡ್ 4, ಟಿಮ್ ಡೇವಿಡ್ ಅಜೇಯ 44 (21) ರನ್ ಗಳಿಸಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.

ಆದ್ರೆ ಮುಂಬೈ ಸಂಘಟಿನ ದಾಳಿಯಿಂದ ಗೆಲುವು ಸಾಧಿಸಿದ್ದು, ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಹಾಗಾದರೆ ಈ ಪಂದ್ಯದ ಬಳಿಕ ಗುಜರಾತ್ ಮತ್ತು ಮುಂಬೈ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್

ಪಾಯಿಂಟ್ಸ್ ಟೇಬಲ್

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಐದು ರನ್‌ಗಳ ರೋಚಕ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ರೋಹಿತ್ ನಾಯಕತ್ವದ ಮುಂಬೈ 10 ಪಂದ್ಯಗಳಲ್ಲಿ 2 ಗೆಲುವು ಮತ್ತು 8 ಪಂದ್ಯಗಳ ಸೋಲಿನಿಂದ ತಳಭಾಗದಲ್ಲಿದೆ.

ಮೊದಲ ಮೂರು ಸ್ಥಾನದಲ್ಲಿ ಪಂದ್ಯ ಸೋತರ ಗುಜರಾತ್ ಟೈಟನ್ಸ್ (16) ನಂತರದಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ 14, ಮೂರನೇ ಸ್ಥಾನದಲ್ಲಿ ರಾಜಸ್ತಾನ್ ರಾಯಲ್ಸ್ 12 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ನಾಲ್ಕು ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ

CSK ನಾಯಕತ್ವ ವಿವಾದ: ರವೀಂದ್ರ ಜಡೇಜಾ ಬಗ್ಗೆ ಗ್ರೇಮ್ ಸ್ವಾನ್ ಮೆಚ್ಚುಗೆ

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ ಬಟ್ಲರ್ 588 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 451 ರನ್‌ಗಳಿಸಿದ್ದಾರೆ. ನಂತರದಲ್ಲಿ ಶಿಖರ್ ಧವನ್ 369 ರನ್‌ , ಡೇವಿಡ್ ವಾರ್ನರ್ 379ರನ್‌ಗಳ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ 333ರನ್‌ಗಳ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

MI vs GT: ಡೇನಿಯಲ್ ಸ್ಯಾಮ್ಸ್ ಮ್ಯಾಜಿಕ್: ಅಂತಿಮ ಓವರ್‌ನಲ್ಲಿ ಮುಂಬೈಗೆ ರೋಚಕ ಗೆಲುವು

Hardik Pandya ಗೆ ಅದೃಷ್ಟ ಕೈಕೊಟ್ಟಿದ್ದೇ ಇಲ್ಲಿ | Oneindia Kannada
ಪರ್ಪಲ್ ಕ್ಯಾಪ್‌

ಪರ್ಪಲ್ ಕ್ಯಾಪ್‌

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 19 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್, ಎರಡನೇ ಸ್ಥಾನದಲ್ಲಿದ್ದು 18 ವಿಕೆಟ್‌ಗಳೊಂದಿಗೆ, ಚಹಾಲ್‌ಗಿಂತ ಒಂದು ವಿಕೆಟ್ ಹಿಂದಿದ್ದಾರೆ. 17 ವಿಕೆಟ್‌ಗಳ ಮೂಲಕ ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ ಮತ್ತು ಎಸ್‌ಆರ್‌ಎಚ್‌ನ ಟಿ. ನಟರಾಜನ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. 15 ವಿಕೆಟ್‌ಗಳೊಂದಿಗೆ ಉಮೇಶ್‌ ಯಾದವ್ ಐದನೇ ಸ್ಥಾನದಲ್ಲಿದ್ದಾರೆ.

Story first published: Friday, May 6, 2022, 23:44 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X