IPL 2022: ಡೆಲ್ಲಿ ಪ್ಲೇ ಆಫ್ ಕನಸು ಜೀವಂತ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾರು ಸೇಫ್?

ಐಪಿಎಲ್ 2022ರ ಸೀಸನ್‌ನ 41ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಇನ್ನೊಂದು ಓವರ್ ಬಾಕಿ ಇರುವಂತೆಯೇ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಗೆಲುವಿನ ನಗಾರಿ ಬಾರಿಸಿದೆ.
ಕೆಕೆಆರ್ ನೀಡಿದ್ದ 147 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಡೇವಿಡ್ ವಾರ್ನರ್ 42, ರೋವ್ಮನ್ ಪೊವೆಲ್ ಅಜೇಯ 33, ಅಕ್ಷರ್ ಪಟೇಲ್ 24 ರನ್‌ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಜಯಿಸಿದೆ.
ಉಮೇಶ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಪ್ರಮುಖ ಬ್ಯಾಟರ್‌ಗಳು ನೆಲಕಚ್ಚಿದರೂ ಸಹ ಡೇವಿಡ್ ವಾರ್ನರ್, ಪೊವೆಲ್ ಹಾಗೂ ಅಕ್ಷರ್ ಪಟೇಲ್ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಇದಕ್ಕೂ ಮೊದಲು ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಕುಲ್‌ದೀಪ್ ಯಾದವ್ ಹಾಗೂ ಮುಸ್ತಫಿಜುರ್ ದಾಳಿಗೆ ತತ್ತರಿಸಿ 9 ವಿಕೆಟ್ ನಷ್ಟಕ್ಕೆ 146 ರನ್‌ಗಳಿಸಲಷ್ಟೇ ಶಕ್ತವಾಯಿತು.
ಕೆಕೆಆರ್ ಪರ ಶ್ರೇಯಸ್ ಅಯ್ಯರ್ 42, ನಿತಿಶ್ ರಾಣಾ 57, ರಿಂಕು ಸಿಂಗ್ 23 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೆಕೆಆರ್ ವಿರುದ್ಧ ಗೆಲುವಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಕನಸು ಜೀವಂತವಾಗಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಏರಿಕೆಗೊಂಡಿದೆ. ಆದ್ರೆ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಕಮರಿದೆ. ಉಳಿದ ಐದು ಪಂದ್ಯಗಳನ್ನ ಗೆದ್ದರೂ ಸಹ ಪ್ಲೇ ಆಫ್ ತಲುಪಲು ಅದೃಷ್ಟ ಬೇಕಿದೆ.
ಹಾಗಾದರೆ ಈ ಪಂದ್ಯದ ಬಳಿಕ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ವಿಕೆಟ್‌ಗಳಿಂದ ಗೆಲ್ಲುವ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಏರಿಕೆಗೊಂಡಿದೆ. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಮತ್ತು ಸೋಲನ್ನ ಕಂಡಿದ್ದು 8 ಪಾಯಿಂಟ್ಸ್ ಕಲೆಹಾಕಿದೆ. ಜೊತೆಗೆ ಉತ್ತಮ ರನ್‌ರೇಟ್ ಸಹ (+0695) ಹೊಂದಿದೆ.
ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ (14) ನಂತರದಲ್ಲಿ ರಾಜಸ್ತಾನ್ ನಂತರದಲ್ಲಿ 12 ಪಾಯಿಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್ 10 ಪಾಯಿಂಟ್ಸ್ ಮೂಲಕ ನೆಟ್‌ರನ್‌ರೇಟ್‌ನಲ್ಲಿ ಲಕ್ನೋಗಿಂತ ಮುಂದಿದೆ. ಇನ್ನು 10 ಪಾಯಿಂಟ್ಸ್ ಹೊಂದಿರುವ ಆರ್‌ಸಿಬಿ ನೆಟ್ ರನ್‌ರೇಟ್‌ನಲ್ಲಿ ಹಿಂದಿದ್ದು ಐದನೇ ಸ್ಥಾನದಲ್ಲೇ ಉಳಿದಿದೆ.
DC vs KKR: ಮಿಂಚಿದ ಕುಲದೀಪ್; ಕೆಕೆಆರ್ ವಿರುದ್ಧ ಡೆಲ್ಲಿಗೆ 4 ವಿಕೆಟ್‍ಗಳ ಜಯ

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ ಬಟ್ಲರ್ 499 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 368 ರನ್‌ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ 305 ರನ್‌ಗಳೊಂದಿಗೆ ಮೂರನೇ ಸ್ಥಾನ, ಶಿಖರ್ ಧವನ್ 302 ರನ್‌ಗಳ ಮೂಲಕ 4ನೇ ಸ್ಥಾನ ಹಾಗೂ 285 ರನ್‌ಗಳಿಸಿರುವ ಎಸ್‌ಆರ್‌ಎಚ್‌ನ ಅಭಿಷೇಕ್ ಶರ್ಮಾ ಐದನೇ ಸ್ಥಾನ ಪಡೆದಿದ್ದಾರೆ.
ವಿಮಾನದಲ್ಲಿ ಅವರಿಗಾಗಿ ತನ್ನ ಬಿಜಿನೆಸ್ ಕ್ಲಾಸ್ ಸೀಟ್‌ಗಳನ್ನೇ, ಬಿಟ್ಟುಕೊಡುತ್ತಿದ್ರಂತೆ ವಿರಾಟ್ ಕೊಹ್ಲಿ!

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಎರಡನೇ ಸ್ಥಾನಕ್ಕೆ ಜಿಗಿದಿದ್ದು, 17 ವಿಕೆಟ್‌ಗಳೊಂದಿಗೆ, ಚಹಾಲ್‌ಗಿಂತ ಒಂದು ವಿಕೆಟ್ ಹಿಂದಿದ್ದಾರೆ. ಇನ್ನು ಗುಜರಾತ್ ವಿರುದ್ಧ ಐದು ವಿಕೆಟ್ ಸಂಪಾದಿಸಿದ ಉಮ್ರಾನ್ ಮಲ್ಲಿಕ್ ಮೂರನೇ ಸ್ಥಾನದಲ್ಲಿದ್ದು 15 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸರಾಸರಿಯಲ್ಲಿ ಸ್ವಲ್ಪ ಹಿಂದಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 14 ವಿಕೆಟ್‌ಗಳೊಂದಿಗೆ ಉಮೇಶ್ ಯಾದವ್ ಐದನೇ ಸ್ಥಾನ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications