BCCIಗೆ ಚಾಲೆಂಜ್ ಹಾಕಿದ್ದ ರಮೀಜ್ ರಾಜಾ ಯೂ ಟರ್ನ್: PSL ಬಿಟ್ಟು IPLಗೆ ಅದ್ಯಾರು ಹೋಗ್ತಾರೆ ನೋಡೆ ಬಿಡೋಣ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿದೊಡ್ಡ ಮತ್ತು ಪ್ರಖ್ಯಾತ ಟಿ20 ಟೂರ್ನಮೆಂಟ್ ಆಗಿದ್ದು, ಇನ್ನೂ ಕೂಸಾಗಿರುವ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್‌ಎಲ್) ಅನ್ನು ಐಪಿಎಲ್‌ಗೂ ಮೀರಿಸಿ ಬೆಳೆಸುವುದಾಗಿ ಹೇಳಿದ್ದ ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾ ಯೂ ಟರ್ನ್ ಹೊಡೆದಿದ್ದಾರೆ.
ಯಾವ ವಿದೇಶಿ ಆಟಗಾರರು ಪಿಎಸ್‌ಎಲ್ ಬಿಟ್ಟು ಐಪಿಎಲ್‌ಗೆ ತೆರಳುತ್ತಾರೆ ಎಂದು ನೋಡೆ ಬಿಡೋಣ ಎಂಬ ಹೇಳಿಕೆಯನ್ನ ತಾನು ನೀಡಿಲ್ಲ. ನನ್ನ ಹೇಳಿಕೆಯನ್ನ ತಿರುಚಲಾಗಿದೆ ಎಂದು ಎಂದು ರಮೀಜಾ ರಾಜಾ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಮಾದರಿಯಲ್ಲಿ ಪಿಎಸ್‌ಎಲ್ ಹರಾಜು ಪ್ರಕ್ರಿಯೆ
ಐಪಿಎಲ್ 15ನೇ ಸೀಸನ್‌ನಲ್ಲಿ ಆಟಗಾರರ ಹರಾಜಿನ ಮೊತ್ತವನ್ನ ನೋಡಿ ದಂಗಾಗಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಿನ ಸೀಸನ್‌ನಿಂದ ಪಿಎಸ್‌ಎಲ್‌ನಲ್ಲೂ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಯೋಜಿಸಿದೆ. ಈ ಕುರಿತಾಗಿ ರಮೀಜ್ ರಾಜಾ ನೀಡಿದ ಹೇಳಿಕೆಯ ಬಳಿಕ ವಿವಾದ ಸ್ಫೋಟಕಗೊಂಡಿತು. ನಾವು ಹರಾಜು ಪ್ರಕ್ರಿಯೆ ಪ್ರಾರಂಭಿಸಿದ್ರೆ, ಪಿಎಸ್‌ಎಲ್ ಬಿಟ್ಟು ಐಪಿಎಲ್‌ಗೆ ಯಾರು ಹೋಗುತ್ತಾರೆ ಎಂದು ನೋಡಿ ಬಿಡೋಣ ಎಂದು ರಮೀಜ್ ರಾಜಾ ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು.
RCB vs RR Head To Head: ಆರ್‌ಸಿಬಿ vs ಆರ್‌ಆರ್ ಬಲಾಬಲ, ಹೆಡ್ ಟು ಹೆಡ್ ರೆಕಾರ್ಡ್ಸ್

ನನ್ನ ಹೇಳಿಕೆಯನ್ನ ತಿರುಚಲಾಗಿದೆ ಎಂದ ರಮೀಜ್ ರಾಜಾ
ಪಿಎಸ್‌ಎಲ್ ಅನ್ನು ಐಪಿಎಲ್‌ನೊಂದಿಗೆ ಹೋಲಿಸಿದ್ದಕ್ಕಾಗಿ ರಾಜಾ ಟೀಕೆಗೆ ಗುರಿಯಾದಾಗ ಅವರ ಹೇಳಿಕೆಗಳು ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಆದ್ರೀಗ ಆತ ತನ್ನ ಹೇಳಿಕೆಯನ್ನ ತಿರುಚಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಬಂದಿದ್ದಾರೆ. ನನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಮತ್ತು ಐಪಿಎಲ್ ಅನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ.
"ನನ್ನನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಭಾರತದ ಆರ್ಥಿಕತೆ ಎಲ್ಲಿದೆ ಮತ್ತು ಪಾಕಿಸ್ತಾನ ಎಲ್ಲಿದೆ ಎಂದು ನನಗೆ ತಿಳಿದಿದೆ. ಪಿಎಸ್ಎಲ್ ಅನ್ನು ಸುಧಾರಿಸಲು ನಾವು ಯೋಜನೆಗಳನ್ನು ಹೊಂದಿದ್ದೇವೆ. ನಾವು ಹರಾಜು ಮಾದರಿಯನ್ನು ತರುತ್ತೇವೆ ಆದರೆ ಇನ್ನೊಂದು ಭಾಗದಲ್ಲಿ ನನ್ನನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ'' ಎಂದು ರಾಜಾ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್

ನಾಲ್ಕು ರಾಷ್ಟ್ರಗಳ ಸೂಪರ್ ಸೀರೀಸ್‌ಗೆ ಯೋಜನೆ ರೂಪಿಸಿದ ಪಿಸಿಬಿ
ನಾಲ್ಕು ರಾಷ್ಟ್ರಗಳ ಸೂಪರ್ ಸರಣಿಗೆ ಪಿಸಿಬಿ ಪ್ಲ್ಯಾನ್ ಮಾಡಿಕೊಂಡಿದ್ದು, ಈಗಾಗಲೇ ಈ ಯೋಜನೆಯ ಕುರಿತಾದ ಡ್ರಾಫ್ಟ್ ಅನ್ನು ಐಸಿಸಿಗೆ ಸಲ್ಲಿಸಿದೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ತಂಡಗಳ ಟಿ20 ಸರಣಿಯನ್ನು ಸೆಪ್ಟೆಂಬರ್-ಅಕ್ಟೋಬರ್ ನಡುವೆ ಆಡಲು ಪ್ರಸ್ತಾಪಿಸಿದೆ. ಈ ವಾರದ ಈವೆಂಟ್‌ನಲ್ಲಿ ಯೋಜನೆಯನ್ನು ಔಪಚಾರಿಕವಾಗಿ ಐಸಿಸಿಗೆ ಪ್ರಸ್ತುತಪಡಿಸಲಾಗುತ್ತದೆ.
RR vs RCB : ರಾಜಸ್ಥಾನ್ ವಿರುದ್ಧವೂ ಕಣಕ್ಕಿಳಿಯಲ್ಲ ಆರ್‌ಸಿಬಿ ಬ್ರಹ್ಮಾಸ್ತ್ರ: ಮುಂಬೈ ವಿರುದ್ಧ ಅಬ್ಬರಿಸಲು ಸಜ್ಜು


ICC T20 ವಿಶ್ವಕಪ್ 2022: ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಸಂಪೂರ್ಣ ಮಾರಾಟ
ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ಕೇವಲ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಗಡಿ ಜಟಾಪಟಿಯ ಜೊತೆಗೆ ಉಭಯ ರಾಷ್ಟ್ರಗಳ ಕ್ರಿಕೆಟ್ ಸಂಬಂಧ ಕಮರಿದೆ. ಆದ್ರೆ ಈ ವರ್ಷ ಮೈದಾನದಲ್ಲಿ ಉಭಯ ರಾಷ್ಟ್ರಗಳ ಕಾದಾಟವನ್ನ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಈಗಾಗಲೇ ಕ್ರೇಜ್ ಹೆಚ್ಚಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದಂತೆ 2022ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನದ ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.
2022ರ ಐಸಿಸಿ ಟಿ20 ವಿಶ್ವಕಪ್, ಇದು ಎಂಟನೇ ಬಾರಿಗೆ ನಡೆಯುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. ಕಳೆದ 2021 ರ ಆವೃತ್ತಿಯಲ್ಲಿ ನೆರೆಯ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications