IPL ಮುಂದಿನ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬೀಳಬಲ್ಲ ನಾಲ್ವರು ಆಟಗಾರರು

ಐಪಿಎಲ್ 15ನೇ ಸೀಸನ್‌ನಲ್ಲಿ ತಾನೇ ಮಾಡಿದ ಕೆಲವು ಎಡವಟ್ಟಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿ ಕೊನೆಗೊಂಡು ಟೂರ್ನಿಯಿಂದ ಹೊರನಡೆಯಿತು. ನಾಯಕತ್ವ ಬದಲಾವಣೆ ಮತ್ತು ಪ್ರಮುಖ ಬೌಲರ್ ದೀಪಕ್ ಚಹಾರ್ ಗಾಯಗೊಂಡಿದ್ದು ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ.
ಆದ್ರೆ ಮುಂದಿನ ಐಪಿಎಲ್ ಸರಣಿಗೆ ಸಿದ್ಧವಾಗಲು ಸಿಎಸ್‌ಕೆ ಈಗಾಗಲೇ ಕಸರತ್ತು ನಡೆಸುತ್ತಿದೆ. ಸಿಎಸ್‌ಕೆ ಈ ಋತುವಿನಲ್ಲಿದ್ದ ನಾಲ್ವರು ಆಟಗಾರರನ್ನು ಕೈಬಿಡಲು ಮತ್ತು ಮೆಗಾ ಹರಾಜಿನಲ್ಲಿ ಅವರನ್ನು ಬದಲಿ ಹೊಸ ಆಟಗಾರರನ್ನು ಖರೀದಿಸಲು ಸಿದ್ಧವಾಗಿದೆ.
ಹಾಗಿದ್ದಾರೆ ಸಿಎಸ್‌ಕೆ ಬದಲಿಸು ಎದುರು ನೋಡುತ್ತಿರುವ ಆ ನಾಲ್ವರು ಆಟಗಾರರು ಯಾರಿರಬಹುದು? ಯಾವ ಪ್ಲೇಯರ್ ತಂಡದಿಂದ ಹೊರಬೀಳಬಹುದು ಎಂಬ ಮಾಹಿತಿ ಈ ಕೆಳಗಿದೆ.

ಕ್ರಿಸ್ ಜೋರ್ಡಾನ್
ಐಪಿಎಲ್ ಮೆಗಾ ಹರಾಜಿನಲ್ಲಿ ಕ್ರಿಸ್ ಜೋರ್ಡಾನ್ ಅವರನ್ನು 3 ಕೋಟಿ 60 ಲಕ್ಷ ರೂಪಾಯಿಗಳಿಗೆ ಸಿಎಸ್‌ಕೆ ಖರೀದಿಸಿದೆ. ಕ್ರಿಸ್ ಜೋರ್ಡಾನ್ ಈ ಋತುವಿನಲ್ಲಿ ಸಿಎಸ್‌ಕೆ ತಂಡಕ್ಕಾಗಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಸಿಎಸ್‌ಕೆ 2 ಪಂದ್ಯಗಳ ಸೋಲಿಗೆ ಜೋರ್ಡಾನ್ ಪ್ರಮುಖ ಕಾರಣ. ಹೀಗಾಗಿ, ಜೋರ್ಡಾನ್ ಮುಂದಿನ ಋತುವಿನಲ್ಲಿ ಕೈಬಿಡುವ ನಿರೀಕ್ಷೆಯಿದೆ.
ಆತನ ಬೌಲಿಂಗ್ ಎದುರಿಸುವುದೇ ನನಗೆ ದೊಡ್ಡ ದುಸ್ವಪ್ನದಂತಿತ್ತು: ಮಹೇಲಾ ಜಯವರ್ಧನೆ

ತುಷಾರ್ ದೇಶಪಾಂಡೆ
ಐಪಿಎಲ್ ಮೆಗಾ ಹರಾಜಿನಲ್ಲಿ ತುಷಾರ್ ದೇಶಪಾಂಡೆಗೆ ಮೂಲ ಬೆಲೆ 20 ಲಕ್ಷ ರೂ ಕೊಟ್ಟು ಖರೀದಿಸಿತು. ಆದರೆ ಅವರು ಕೇವಲ 2 ಪಂದ್ಯಗಳನ್ನು ಆಡಿ 1 ವಿಕೆಟ್ ಮಾತ್ರ ನೀಡಿದರು. ಪ್ರತಿ ಓವರ್‌ಗೆ 9 ರನ್ ನೀಡಿದ ದೇಶಪಾಂಡೆಗೆ ಧೋನಿ ಅವಕಾಶ ನೀಡಲಿಲ್ಲ. ಹೀಗಾಗಿ ದೇಶಪಾಂಡೆಯನ್ನು ಐಪಿಎಲ್ 2023ರ ಸೀಸನ್‌ನಲ್ಲಿ ತಂಡದಲ್ಲಿ ಇರಿಸಿಕೊಳ್ಳುವುದು ಅನುಮಾನವಾಗಿದೆ.
ರೀಟೈನ್ ಮಾಡಿಕೊಂಡ ಈ ಆಟಗಾರನನ್ನು ಹರಾಜಿಗೆ ಬಿಡುಗಡೆಗೊಳಿಸಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ

ಆ್ಯಡಂ ಮಿಲ್ನೆ
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ನ್ಯೂಜಿಲೆಂಡ್ ಪೇಸರ್ ಆ್ಯಡಂ ಮಿಲ್ನೆಯನ್ನು 90 ಲಕ್ಷ ರೂಪಾಯಿಗೆ ಸಿಎಸ್‌ಕೆ ಖರೀದಿಸಿತು. ಆದರೆ ಗಾಯದ ಕಾರಣ ಮಿಲ್ನೆ ಬಹುತೇಕ ಐಪಿಎಲ್ ಪಂದ್ಯಗಳಲ್ಲಿ ಆಡಿರಲಿಲ್ಲ. ಮುಂದಿನ ವರ್ಷ ದೀಪಕ್ ಚಹಾರ್ ವಾಪಸ್ ಬರಲಿದ್ದಾರೆ. ಹೀಗಾಗಿ ಮಿಲ್ನೆಗೆ ತಂಡದಲ್ಲಿ ಮತ್ತೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.
ಈಗಾಗಲೇ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಬದಲಿಗೆ ಶ್ರೀಲಂಕಾದ ಮಥೀಶ ಪತಿರಾನ ಅವರನ್ನು ಸಹಿ ಮಾಡಿದೆ. ಶ್ರೀಲಂಕಾದ ಈ ಬೌಲರ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಆ್ಯಡಂ ಮಿಲ್ಲೆ ಅವರನ್ನು ವಜಾಗೊಳಿಸುವ ಸಾಧ್ಯತೆ ಹೆಚ್ಚಿದೆ.

ಅಂಬಟಿ ರಾಯುಡು
ಪ್ರಸಕ್ತ ಋತುವಿನಲ್ಲಿ ಐಪಿಎಲ್ ಟೂರ್ನಿಗೆ ರಾಜೀನಾಮೆ ನೀಡುವುದಾಗಿ ಅಂಬಟಿ ರಾಯುಡು ಹೇಳಿದ್ದರು. ಆದಾಗ್ಯೂ, ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರ ಮಧ್ಯಸ್ಥಿಕೆಯ ನಂತರ ರಾಜೀನಾಮೆಯನ್ನು ಹಿಂತೆಗೆದುಕೊಂಡರು. ಹೀಗಾಗಿ ರಾಯುಡು ಅವರಿಗೆ ಸಿಎಸ್ ಕೆ ಸಮಸ್ಯೆ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಮುಂದಿನ ವರ್ಷ ಸಿಎಸ್ ಕೆ ತಂಡದಲ್ಲಿ ರಾಯುಡು ಆಡುವುದು ಬಹುತೇಕ ಅನುಮಾನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications