ಆತನ ಬೌಲಿಂಗ್ ಎದುರಿಸುವುದೇ ನನಗೆ ದೊಡ್ಡ ದುಸ್ವಪ್ನದಂತಿತ್ತು: ಮಹೇಲಾ ಜಯವರ್ಧನೆ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ತನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲಿನ ಕುರಿತು ರಿವೀಲ್ ಮಾಡಿದ್ದು, ಪಾಕಿಸ್ತಾನ ಮಾಜಿ ಬೌಲರ್ ವಾಸಿಂ ಅಕ್ರಂ ತಾನೆದುರಿಸಿದ ಅತ್ಯಂತ ಕಠಿಣವಾದ ಬೌಲರ್ ಎಂದು ತಿಳಿಸಿದ್ದಾರೆ.
ವಾಸಿಂ ಅಕ್ರಮ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಒಟ್ಟಾರೆ 916 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದು, ಜಯವರ್ಧನೆ ಶ್ರೀಲಂಕಾ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.

ಪಾಕ್ ಪರ ವಾಸಿಂ ಅಕ್ರಂ ಅಮೋಘ ದಾಖಲೆ
ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ 104 ಟೆಸ್ಟ್ ಪಂದ್ಯಗಳನ್ನಾಡಿದ್ದು, 23.62ರ ಸರಾಸರಿಯಲ್ಲಿ 414 ಟೆಸ್ಟ್ ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಇನ್ನು 356 ಏಕದಿನ ಪಂದ್ಯಗಳನ್ನಾಡಿರುವ ವಾಸಿಂ ಅಕ್ರಂ 23.52ರ ಸರಾಸರಿಯಲ್ಲಿ 502 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.
ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಈತನ ದಾಖಲೆ ಮುರಿಯುವವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದರು.
IPL 2023ರ ಸೀಸನ್‌ಗೆ ಈ ಐವರನ್ನು ರೀಟೈನ್ ಮಾಡಿಕೊಳ್ಳಲಿದೆ ಮುಂಬೈ ಇಂಡಿಯನ್ಸ್

ವಾಸಿಂ ಅಕ್ರಂ ಬೌಲಿಂಗ್ ಎದುರಿಸಲು ಭಯವಾಗುತ್ತಿತ್ತು!
ಐಸಿಸಿ ಡಿಜಿಟಲ್ ಶೋವೊಂದರಲ್ಲಿ ಮಾತನಾಡಿರುವ ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ, ಪಾಕ್ ಮಾಜಿ ಬೌಲರ್ ವಾಸಿಂ ಅಕ್ರಂ ಬೌಲಿಂಗ್ ಎದುರಿಸುವುದು ದುಸ್ವಪ್ನವಾಗಿತ್ತು. ಯಾವುದೇ ಫಾರ್ಮೆಟ್ ಆಗಿರಲಿ ಆತ ಹೊಸ ಚೆಂಡು ಅಥವಾ ಹಳೆಯ ಚೆಂಡಿನಲ್ಲಿ ಅಮೋಘ ಬೌಲಿಂಗ್ ಮಾಡುತ್ತಿದ್ದರು ಎಂದಿದ್ದಾರೆ.
" ವಾಸಿಂ ಅಕ್ರಂ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಾನು ನನ್ನ ಚೊಚ್ಚಲ ಪಂದ್ಯವನ್ನಾಡುವ ಮೂಲಕ ಪ್ರವೇಶ ಮಾಡಿದೆ. ಹೊಸ ಚೆಂಡಿನ ಮೂಲಕ ಅವರು ಸವಾಲು ಹಾಕುತ್ತಿರುವ ಕಾರಣ ಕಠಿಣವಾಗಿರುವುದರಿಂದ ಅವರನ್ನು ಎದುರಿಸುವುದು ದುಃಸ್ವಪ್ನವಾಗಿತ್ತು, ಅದು ಯಾವ ಸ್ವರೂಪದ್ದಾದರೂ ಪರವಾಗಿಲ್ಲ. ಅವರು ನಿಜವಾಗಿಯೂ ತ್ವರಿತ ಬೌಲಿಂಗ್ ಆಕ್ಷನ್ ಹೊಂದಿದ್ದರು ಮತ್ತು ದಿನದ ಯಾವುದೇ ಸಮಯದಲ್ಲಿ ಅವರು ನಿಮ್ಮನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದ್ದರು, "ಎಂದು ಅವರು ಹೇಳಿದರು.
ರೀಟೈನ್ ಮಾಡಿಕೊಂಡ ಈ ಆಟಗಾರನನ್ನು ಹರಾಜಿಗೆ ಬಿಡುಗಡೆಗೊಳಿಸಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ
ವಾಸಿಂ ಅಕ್ರಂ ಸ್ಥಿರ ಬೌಲಿಂಗ್ ಕುರಿತು ಹೊಗಳಿದ ಜಯವರ್ಧನೆ
45 ವರ್ಷದ ಜಯವರ್ಧನೆ, ವಾಸಿಂ ಅಕ್ರಂ ಸ್ಥಿರ ಬೌಲಿಂಗ್ ದಾಳಿ ಹಾಗೂ ಆತನ ಕ್ರಿಕೆಟ್ ಚೆಂಡಿನಲ್ಲಿ ಮಾಡಿದ ಅದ್ಭುತಗಳ ಕುರಿತಾಗಿ ಹೊಗಳಿಕೆಯ ಮಾತನಾಡಿದ್ದಾರೆ. ಯಾವುದೇ ಕಂಡೀಶನ್ ಆಗಿರಲಿ, ಅಕ್ರಂ ತನ್ನ ಕೌಶಲ್ಯಗಳ ಮೂಲಕ ಎದುರಾಳಿ ಬ್ಯಾಟರ್‌ಗಳನ್ನ ತೊಂದರೆಗೆ ಸಿಲುಕಿಸುತ್ತಿದ್ದರು ಎಂದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಪರ 26,000 ರನ್ ಕಲೆಹಾಕಿರುವ ಮಹೇಲಾ ಜಯವರ್ಧನೆ, ಅಕ್ರಂ ತನ್ನ ಕೊನೆಯ ಪಂದ್ಯದವರೆಗೂ ಯಾವ ರೀತಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದರು ಎಂಬ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications