ಕಿಲ್ಲರ್ ಮಿಲ್ಲರ್ ಈಸ್ ಬ್ಯಾಕ್: ಅಬ್ಬರದ ಆಟವಾಡಿ ಭಾರತದಿಂದ ಗೆಲುವನ್ನ ಕಸಿದುಕೊಂಡ ಡೇವಿಡ್ ಮಿಲ್ಲರ್

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಗೆಲುವಿನ ಆರಂಭ ಪಡೆದಿದ್ದರ ಜೊತೆಗೆ ಟೀಂ ಇಂಡಿಯಾದ ವಿಶ್ವ ದಾಖಲೆಗೂ ಅಡ್ಡಗಾಲಿಟ್ಟಿದೆ.
ಭಾರತ ನೀಡಿದ 212ರನ್‌ಗಳ ಗುರಿ ಬೆನ್ನತ್ತಿದ ಹರಿಣಗಳು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಭಾರೀ ಗೆಲುವನ್ನ ದಾಖಲಿಸಿತು. ಇದು ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತವನ್ನ ಚೇಸ್ ಮಾಡಿ ಗೆದ್ದ ಪಂದ್ಯವಾಗಿದೆ.

ದಕ್ಷಿಣ ಆಫ್ರಿಕಾ ಪರ ಮತ್ತೆ ಅಬ್ಬರಿಸಿದ ಕಿಲ್ಲರ್ ಮಿಲ್ಲರ್
ಐಪಿಎಲ್ 2022ರ ಅಮೋಘ ಫಾರ್ಮ್ ಅನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ರಾಷ್ಟ್ರೀಯ ತಂಡದ ಪರ ಮುಂದುವರಿಸಿರುವ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್, ಟೀಂ ಇಂಡಿಯಾ ಬೌಲರ್‌ಗಳನ್ನ ಚಿಂದಿ ಉಡಾಯಿಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ ಅಜೇಯ 64 ರನ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಡೇವಿಡ್ ಮಿಲ್ಲರ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಅಮೋಘ ಸಿಕ್ಸರ್‌ಗಳಿದ್ದವು. ಬರೋಬ್ಬರಿ 206ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಡೇವಿಡ್ ಮಿಲ್ಲರ್ ಅಬ್ಬರದ ಆಟಕ್ಕೆ ಟೀಮ್ ಇಂಡಿಯಾ ಬೌಲರ್ಸ್ ತತ್ತರಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಡೇವಿಡ್ ಮಿಲ್ಲರ್ ಗರಿಷ್ಠ ಸ್ಕೋರ್ ಆಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಸಲುವಾಗಿ IPL ಆಫರ್ ತಿರಸ್ಕರಿಸಿದ 5 ಪ್ಲೇಯರ್ಸ್

ಮಿಲ್ಲರ್ ಜೊತೆಗೆ ಗುಡುಗಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್
ಇನ್ನು ಮಿಲ್ಲರ್ ಅಬ್ಬರ ಒಂದೆಡೆಯಾದ್ರೆ, ಒಂದೆಡೆ ನಿಂತು ಬಾಲ್ ಟು ಬಾಲ್ ರನ್ ಕಲೆಹಾಕುತ್ತಿದ್ದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕ್ಯಾಚ್ ಕೈ ಚೆಲ್ಲಿದ ಬಳಿಕ ಬ್ಯಾಟ್ ಬದಲಿಸಿ ಸಿಡಿಲಬ್ಬರದ ಆಟವಾಡಿದ್ರು. 29 ಎಸೆತಗಳಲ್ಲಿ 29 ರನ್ ಕಲೆಹಾಕಿದ್ದ ಈ ರಾಸ್ಸಿ ಹೊಡೆತದ ಚೆಂಡನ್ನ ಶ್ರೇಯಸ್ ಅಯ್ಯರ್ ನೆಲಕ್ಕೆ ಹಾಕಿದ ಬಳಿಕ, ರಾಸ್ಸಿ ಆಟವೇ ಬದಲಾಗಿ ಹೋಯಿತು.
ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿದ ಈತ ಕೊನೆಗೆ ಡೇವಿಡ್ ಮಿಲ್ಲರ್‌ಗಿಂತಲೂ ಹೆಚ್ಚಿನ ರನ್ ಕಲೆಹಾಕಿದ್ದು ವಿಶೇಷ. ಕೊನೆಗೆ ಬೌಂಡರಿಯೊಂದಿಗೆ ಗೆಲುವಿನ ರನ್ ಬಾರಿಸಿದ ರಾಸ್ಸಿ 46 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು.
IND vs SA: 212 ರನ್‌ಗಳ ಬೃಹತ್ ಗುರಿ ನೀಡಿಯೂ ಸೋತ ಭಾರತ; ವಿಶ್ವದಾಖಲೆಯ ಕನಸು ನುಚ್ಚುನೂರು!

ಐಪಿಎಲ್ 2022ರ ಸೀಸನ್‌ನಲ್ಲೂ ಅಮೋಘ ಫಾರ್ಮ್‌ನಲ್ಲಿದ್ದ ಮಿಲ್ಲರ್
ಐಪಿಎಲ್ 2022ರ ಸೀಸನ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ಡೇವಿಡ್ ಮಿಲ್ಲರ್ ಗುಜರಾತ್ ಟೈಟನ್ಸ್ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ರು. 16 ಪಂದ್ಯಗಳಲ್ಲಿ 481 ರನ್ ಸಿಡಿಸಿದ ಮಿಲ್ಲರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮ್ಯಾಚ್ ವಿನ್ನರ್ ಆಗಿದ್ದಾರೆ. ಐಪಿಎಲ್ ಜೊತೆಗೆ ಇವರ ಅಬ್ಬರದ ಆಟವು ಇದೀಗ ಟೀಂ ಇಂಡಿಯಾ ವಿರುದ್ಧವೂ ಮುಂದುವರಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications