ತಂಡದಿಂದ ಎಂಎಸ್ ಧೋನಿ ಹೊರಗುಳಿಯಲು ಅಸಲಿ ಕಾರಣ ಬಹಿರಂಗ!

ನವದೆಹಲಿ, ಸೆಪ್ಟೆಂಬರ್ 26: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಹಾದಿಯಲ್ಲಿದ್ದಾರೆ ಎಂಬ ಮಾತು ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯಾಗುತ್ತಿದೆ. 2019ರ ಏಕದಿನ ವಿಶ್ವಕಪ್ ಮುಗಿದ ಮೇಲೆ ಬ್ಯಾಕ್ ಟು ಬ್ಯಾಕ್ ಸರಣಿಯಿಂದ ಧೋನಿ ಹಿಂದೆ ಸರಿದಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.
ವೆಸ್ಟ್ ಇಂಡೀಸ್ ಸರಣಿ ಆಡಲಿಲ್ಲ, ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಮೈದಾನಕ್ಕಿಳಿಯಲಿಲ್ಲ. ಬಾಂಗ್ಲಾದೇಶದ ವಿರುದ್ಧ ಟಿ-ಟ್ವೆಂಟಿ ಸರಣಿಗಾದರೂ ಧೋನಿ ವಾಪಸ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.
ಬಾಂಗ್ಲಾ ವಿರುದ್ಧದ ಸರಣಿಗೂ ನಾನು ಲಭ್ಯವಿಲ್ಲ ಎಂದು ಬಿಸಿಸಿಐಗೆ ಧೋನಿ ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೆಲ್ಲಾ ಗಮನಿಸಿದರೆ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಭಾರಿ ಕುತೂಹಲ ಮೂಡಿಸುತ್ತಿದೆ. ಆದರೆ, ಧೋನಿಯ ಆ ವಿಶ್ರಾಂತಿ ಹಿಂದೆ ಬೇರೆಯೇ ಕಾರಣ ಇದೆ ಎಂಬ ಅಚ್ಚರಿ ಸುದ್ದಿ ಈಗ ಹೊರಬಿದ್ದಿದೆ. ಅಷ್ಟಕ್ಕೂ, ಸತತ ಸರಣಿಗಳಿಂದ ಧೋನಿ ಹಿಂದೆ ಸರಿಯುತ್ತಿರುವುದೇಕೆ? ಮುಂದೆ ಓದಿ....

ದೀರ್ಘಕಾಲದ ವಿಶ್ರಾಂತಿ ಯಾಕೆ?
ಕಳೆದ ಒಂದೂವರೆ ದಶಕದಿಂದ ಎಂಎಸ್ ಧೋನಿ ಸತತವಾಗಿ ಕ್ರಿಕೆಟ್ ಆಡಿದ್ದಾರೆ. ಆದರೆ ಇಷ್ಟು ದೀರ್ಘಾವಧಿ ಕಾಲ ವಿಶ್ರಾಂತಿ ಪಡೆದಿರುವ ಉದಾಹರಣೆ ಇಲ್ಲ. ಹಾಗಾಗಿ, ಧೋನಿ ತೆಗೆದುಕೊಂಡಿರುವ ಈ ವಿಶ್ರಾಂತಿ ಬಗ್ಗೆ ಸಾಕಷ್ಟು ಅನುಮಾನವಿದೆ. ಮತ್ತೆ ಮತ್ತೆ ತಮ್ಮ ವಿಶ್ರಾಂತಿ ಸಮಯ ವಿಸ್ತರಣೆ ಮಾಡುತ್ತಿರುವುದು ಕೂಡ ಕುತೂಹಲ ಮೂಡಿಸಿದೆ.
ರಿಷಬ್ ಪಂತ್ ಬದಲಿಗೆ 3 ವಿಕೆಟ್ ಕೀಪರ್‌ಗಳ ಹೆಸರಿಸಿದ ಎಂಎಸ್‌ಕೆ ಪ್ರಸಾದ್!

ಗಾಯದ ಸಮಸ್ಯೆಯೇ ಮುಖ್ಯ ಕಾರಣ
ಹಾಲಿಡೇ ಎಂಜಾಯ್ ಮಾಡುವುದಕ್ಕೆ ಆಗಲಿ ಅಥವಾ ಒಂದು ಬ್ರೇಕ್ ಬೇಕು ಎಂಬ ಕಾರಣಕ್ಕಾಗಲಿ ಧೋನಿ ವಿಶ್ರಾಂತಿ ಪಡೆಯುತ್ತಿಲ್ಲ. ಅವರಿಗೆ ಗಾಯದ ಸಮಸ್ಯೆ ಎದುರಾಗಿದೆ. ಗಾಯದಿಂದ ಚೇತರಿಸಿಕೊಳ್ಳುವ ಸಲುವಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಗಾಯಕ್ಕೆ ತುತ್ತಾಗಿದ್ದರು. ಆ ಉದ್ದೇಶದಿಂದಲೇ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆ ಗಾಯಗಳಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಮತ್ತಷ್ಟು ದಿನ ರಜೆ ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.
ಹೊರತಳ್ಳುವ ಬದಲು ಧೋನಿ ತಾವಾಗಿಯೇ ಹೊರನಡೆಯಲಿ: ಗವಾಸ್ಕರ್

ವೆಸ್ಟ್ ಇಂಡೀಸ್ ಸರಣಿಗೆ ಲಭ್ಯ.!
ಎಲ್ಲ ಅಂದುಕೊಂಡಂತೆ ಆಗಿದ್ದರೇ ನವೆಂಬರ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ಸರಣಿಗೆ ಧೋನಿ ಲಭ್ಯವಾಗಬೇಕಿತ್ತು. ಆದರೆ, ಬಾಂಗ್ಲಾ ಸರಣಿಗೂ ಅಲಭ್ಯರಾಗಿರುವ ಧೋನಿ, ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ವೆಸ್ಟ ಇಂಡೀಸ್ ವಿರುದ್ಧ ಟಿ-ಟ್ವೆಂಟಿ ಸರಣಿಗೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಇದೆ.
ಧೋನಿ ನಿವೃತ್ತಿ ಸುದ್ದಿ ಹಬ್ಬಿಸಿದ್ದ ಚಿತ್ರದ ಹಿಂದಿನ ಸತ್ಯ ಬಾಯ್ಬಿಟ್ಟ ಕೊಹ್ಲಿ!

ಧೋನಿಗೆ ಪರ್ಯಾಯ ಆಟಗಾರನ ಹುಡುಕಾಟ
ಎಂಎಸ್ ಧೋನಿ ಯಾವುದೇ ಕ್ಷಣದಲ್ಲಿ ಬೇಕಾದರೂ ನಿವೃತ್ತಿ ಘೋಷಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಸಿಸಿಐ ಕೂಡ ಇದೆ. ಹಾಗಾಗಿ, ಧೋನಿಗೆ ಪರ್ಯಾಯ ಆಟಗಾರನಾಗಿ ಯುವಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಧೋನಿ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ಗೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಹೆಚ್ಚು ಅವಕಾಶಗಳನ್ನ ಒದಗಿಸಲಾಗುತ್ತಿದೆ. ಸಂಜು ಸ್ಯಾಮಸನ್, ಇಶಾನ್ ಕಿಶನ್, ಕರುಣ್ ನಾಯರ್ ಕೂಡ ವಿಕೆಟ್ ಕೀಪರ್ ಆಗಿ ಆಡಬಲ್ಲರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications