ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊರತಳ್ಳುವ ಬದಲು ಧೋನಿ ತಾವಾಗಿಯೇ ಹೊರನಡೆಯಲಿ: ಗವಾಸ್ಕರ್

ಧೋನಿ ನಿಜಕ್ಕೂ ಈಗ ಮಾಡಬೇಕಾಗಿರಿವುದು ಏನು ಗೊತ್ತಾ..? | M S Dhoni | Oneindia Kannada
 Cricket Dhoni Should Go Without Being Pushed Out Sunil Gavaskar Retirement

ಮುಂಬೈ, ಸೆಪ್ಟೆಂಬರ್ 20: ಭಾರತವು ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಾಚೆಗೆ ನೋಡುವ ಸಮಯ ಬಂದಿದೆ ಎಂದು ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಅವರು ನಿವೃತ್ತರಾಗುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಅವರ ಸಮಯ ಬಂದಿದೆ ಎನ್ನುವ ಮೂಲಕ ಗವಾಸ್ಕರ್, ಧೋನಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ನೇರ ಹೇಳಿಕೆ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಾರಾ?!ರಾಯಲ್ ಚಾಲೆಂಜರ್ಸ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಾರಾ?!

'ಇಂಡಿಯಾ ಟುಡೆ'ಯೊಂದಿಗೆ ಮಾತನಾಡಿದ ಸುನಿಲ್ ಗವಾಸ್ಕರ್, ಭಾರತೀಯ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಅವರ ಪಾತ್ರ ಮುಂದುವರಿಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿಯೇ ಬಂದಿದೆ. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಧೋನಿ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ.

ಆಗಸ್ಟ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಸ್ವತಃ ಧೋನಿ ತಿಳಿಸಿದ್ದರು. ಅವರು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಪ್ರಾದೇಶಿಕ ಅರೆ ಸೇನಾ ತುಕಡಿಯಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಪ್ರಸ್ತುತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ತಂಡದಲ್ಲಿಯೂ ಧೋನಿ ಇಲ್ಲ.

ಭವಿಷ್ಯದ ಭಾರತೀಯ ಕ್ರಿಕೆಟ್‌ನಲ್ಲಿ ಧೋನಿ ಅವರ ಅಗತ್ಯವನ್ನು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ. ಭಾರತಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಟ್ಟರುವ ಧೋನಿ ಅವರು ಗೌರವಾನ್ವಿತವಾಗಿ ತಂಡದಿಂದ ನಿರ್ಗಮಿಸುವಂತಾಗಬೇಕು ಎಂದಿದ್ದಾರೆ.

ಧೋನಿ ವಯಸ್ಸು ಮೀರುತ್ತಿದೆ

ಧೋನಿ ವಯಸ್ಸು ಮೀರುತ್ತಿದೆ

'ಎಂಎಸ್ ಧೋನಿ ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಭವಿಷ್ಯದ ಬಗ್ಗೆ ಯಾವ ಆಲೋಚನೆ ಇದೆ ಎನ್ನುವುದನ್ನು ಅವರು ಮಾತ್ರವೇ ಸ್ಪಷ್ಟಪಡಿಸಬಲ್ಲರು. ಆದರೆ, ಅವರಿಗೀಗ 38 ವರ್ಷ. ಭಾರತವು ಇನ್ನಷ್ಟು ಮುಂದೆ ನೋಡಬೇಕಾದ ಅಗತ್ಯವಿದೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ವೇಳೆ ಅವರು 39 ವರ್ಷದವರಾಗಿರುತ್ತಾರೆ' ಎಂದು ಗವಾಸ್ಕರ್ ಹೇಳಿದ್ದಾರೆ.

ಧೋನಿ ಹಾಜರಾತಿ ದೊಡ್ಡ ಲಾಭ

ಧೋನಿ ಹಾಜರಾತಿ ದೊಡ್ಡ ಲಾಭ

'ತಂಡಕ್ಕೆ ಧೋನಿ ಅವರಿಂದ ದೊರಕುವ ಮೌಲ್ಯ ಯಾವಾಗಲೂ ಅದ್ಭುತವಾದದ್ದು. ಅವರು ತಂಡದಲ್ಲಿದ್ದು ಗಳಿಸುವ ರನ್ ಅಥವಾ ಅವರು ಮಾಡುವ ಚುರುಕಿನ ಸ್ಟಂಪಿಂಗ್ ಮಾತ್ರವಲ್ಲ, ಅವರು ಮೈದಾನದಲ್ಲಿ ಇರುವುದೇ ನಾಯಕನಿಗೆ ಒತ್ತಡ ಕಡಿಮೆ ಮಾಡುತ್ತದೆ. ಅವರ ಸಲಹೆಗಳನ್ನು ಪಡೆಯುವುದರಿಂದ ನಾಯಕನಿಗೆ ಲಾಭ. ಹೀಗಾಗಿ ಅದು ದೊಡ್ಡ ಸಂಗತಿ. ಆದರೆ ಅವರ ಸಮಯ ಬಂದಿದೆ ಎಂದು ನನಗೆ ಅನಿಸುತ್ತದೆ' ಎಂದು ಹೇಳಿದ್ದಾರೆ.

ಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿ

ಅವರು ತಾವಾಗಿಯೇ ನಿರ್ಗಮಿಸಲಿ

ಅವರು ತಾವಾಗಿಯೇ ನಿರ್ಗಮಿಸಲಿ

'ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಹೆಚ್ಚು ಉಪಯೋಗ ಅರ್ಹ ಅವಧಿಯನ್ನು ಹೊಂದಿರುತ್ತಾರೆ. ಧೋನಿ ಅವರ ಕುರಿತು ಇರುವ ಅಪಾರವಾದ ಗೌರವದೊಂದಿಗೆ ಮತ್ತು ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ಒಬ್ಬನಾಗಿ ನಾನು ನಂಬುವುದು ಅವರು ತಂಡದಿಂದ ಹೊರತಳ್ಳುವಂತಹ ಸಮಯ ಬರುವ ಮೊದಲೇ ನಿರ್ಗಮಿಸಬೇಕು. ಅವರು ತಮ್ಮದೇ ಆಸಕ್ತಿ, ನಿರ್ಧಾರದಿಂದ ಹೊರಹೋಗಬೇಕು' ಎಂದಿದ್ದಾರೆ.

ಪಂತ್ ಪರ ಗವಾಸ್ಕರ್ ಬ್ಯಾಟಿಂಗ್

ಪಂತ್ ಪರ ಗವಾಸ್ಕರ್ ಬ್ಯಾಟಿಂಗ್

'ರಿಷಬ್ ಪಂತ್ ನಿಜಕ್ಕೂ ಪ್ರತಿಭಾವಂತ ಆಟಗಾರ. ಬ್ಯಾಟ್ಸ್‌ಮನ್ ಆಗಿರಲಿ ಅಥವಾ ಬೌಲರ್ ಆಗಿರಲಿ, ಆರಂಭದ ಗಳಿಗೆ ಯಾವಾಗಲೂ ಕ್ಲಿಷ್ಟಕರವಾಗಿರುತ್ತದೆ. ಅದನ್ನು ಅವರು ಕಂಡುಕೊಳ್ಳುತ್ತಿದ್ದಾರೆ. ಜನರಿಗೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಹೆಚ್ಚು ತಿಳಿವಳಿಕೆ ಇರುತ್ತದೆ. ಹೀಗಾಗಿ ಬೌಲರ್‌ಗಳು ಅದಕ್ಕೆ ಅನುಗುಣವಾಗಿ ಬೌಲ್ ಮಾಡುತ್ತಾರೆ. ಹೀಗಾಗಿ ಅವರು ಸಂಕಷ್ಟದ ಸಮಯ ಎದುರಿಸುತ್ತಿದ್ದಾರೆ. ಅವರು ತಮ್ಮ ಗಲ್ಲ ಎತ್ತಿಕೊಂಡಿರಬೇಕು' ಎಂದು ಸಲಹೆ ನೀಡುವ ಮೂಲಕ, ಪಂತ್ ಬಗ್ಗೆ ಭಾರತೀಯ ಕ್ರಿಕೆಟ್ ವಿಶ್ವಾಸ ಇರಿಸಬೇಕು ಎಂದಿದ್ದಾರೆ.

ರೋಹಿತ್ ಶರ್ಮಾ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ!

ಪಂತ್ ಬಗ್ಗೆ ಕಠೋರ ನಿಲುವು ಬೇಡ

ಪಂತ್ ಬಗ್ಗೆ ಕಠೋರ ನಿಲುವು ಬೇಡ

'ಪಂತ್ ಮೊಹಾಲಿಯಲ್ಲಿ ಔಟಾದ ಬಗೆ ನೀಡಿ ಬೇಸರವಾಯಿತು. ಅದು ಕೆಟ್ಟ ಹೊಡೆತವಾಗಿರಲಿಲ್ಲ. ಅದು ಫೀಲ್ಡರ್ ಕೈಗೆ ನೇರವಾಗಿ ಬಾರಿಸಿದ ಹೊಡೆತವಾಗಿತ್ತು. ನೀವು ಕೆಟ್ಟ ಪಿಚ್‌ನಲ್ಲಿ ಆಡುವಾಗ ಈ ರೀತಿಯದ್ದು ನಡೆಯುತ್ತವೆ. ನನ್ನ ಸಲಹೆ ಏನೆಂದರೆ ಅವರ ಬಗ್ಗೆ ತುಂಬಾ ಕಠೋರವಾಗಬೇಡಿ. ಅವರ ಬಗ್ಗೆ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಅವರ ಬ್ಯಾಟಿಂಗ್ ಕ್ರಮಾಂಕವನ್ನು ಐದಕ್ಕೆ ಇಳಿಸಿ ಅವರಿಗೆ ಅದರಿಂದ ಅನುಕೂಲವಾಗಲಿದೆ' ಎಂದು ಪಂತ್ ಬೆಂಬಲಕ್ಕೆ ನಿಂತಿದ್ದಾರೆ.

Story first published: Friday, September 20, 2019, 14:50 [IST]
Other articles published on Sep 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X