ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್‌ ಬದಲಿಗೆ 3 ವಿಕೆಟ್ ಕೀಪರ್‌ಗಳ ಹೆಸರಿಸಿದ ಎಂಎಸ್‌ಕೆ ಪ್ರಸಾದ್!

ರಿಷಬ್ ಪಂತ್ ಸ್ಥಾನಕ್ಕೂ ಬಂತು ಕುತ್ತು..? | Rishabh Pant
We’re grooming Rishabh Pant’s backups says MSK Prasad

ನವದೆಹಲಿ, ಸೆಪ್ಟೆಂಬರ್ 21: ರಿಷಬ್ ಪಂತ್‌ ಅವರನ್ನು ಅದ್ಭುತ ಪ್ರತಿಭೆ ಎಂದು ಪರಿಗಣಿಸಿ ಅವರ ಮೇಲಿನ ಕೆಲಸದ ಹೊರೆ ಕಡಿಮೆಗೊಳಿಸುವತ್ತ ಆಲೋಚಿಸುತ್ತಿದ್ದೇವೆ. ಪಂತ್‌ಗೆ ಬೆಂಬಲವಾಗಿ 3 ಜನ ಯುವ ವಿಕೆಟ್‌ ಕೀಪರ್‌ಗಳನ್ನು ತಯಾರಿಸುವತ್ತ ಮುಂದಡಿಯಿಡುತ್ತಿದ್ದೇವೆ ಎಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ಟೀಮ್ ಇಂಡಿಯಾ ಅಭ್ಯಾಸದಲ್ಲಿ ಪಾಲ್ಗೊಂಡ ಕನ್ನಡಿಗ ರಾಹುಲ್ ದ್ರಾವಿಡ್ಟೀಮ್ ಇಂಡಿಯಾ ಅಭ್ಯಾಸದಲ್ಲಿ ಪಾಲ್ಗೊಂಡ ಕನ್ನಡಿಗ ರಾಹುಲ್ ದ್ರಾವಿಡ್

ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್‌ ಕೀಪರ್, ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್‌ನಿಂದ ಕೊಂಚ ಬಿಡುವು ಪಡೆದಿರುವುದರಿಂದ ಧೋನಿ ಅನುಪಸ್ಥಿತಿಯಲ್ಲಿ ರಿಷಬ್ ಅವರನ್ನು ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಎನ್ನಲಾಗುತ್ತಿತ್ತು. ಆದರೆ ಈ ನಿಲುವು ಪರಿಶೀಲನೆಗೊಳಗಾಗಬೇಕು ಎನ್ನುವಂತಿದೆ ಸದ್ಯದ ಪರಿಸ್ಥಿತಿ.

ಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿ

ವಿಶ್ವಕಪ್ ಬಳಿಕ ಧೋನಿ ಅನುಪಸ್ಥಿತಿಯಲ್ಲಿ ಪಂತ್‌ಗೆ ಹೆಚ್ಚಿಗೆ ಅವಕಾಶ ನೀಡಲಾಗಿತ್ತು. ಆದರೆ ಬಹುತೇಕ ಪಂದ್ಯಗಳಲ್ಲಿ ಪಂತ್ ಪ್ರಭಾವಶಾಲಿ ಆಟವನ್ನೇನೂ ಪ್ರದರ್ಶಿಸಿಲ್ಲ. ವೆಸ್ಟ್ ಇಂಡೀಸ್‌ ವಿರುದ್ಧದ 3ನೇ ಟಿ20ಯಲ್ಲಿ ಅರ್ಧ ಶತಕ (65 ರನ್, 42 ಎಸೆತ) ಬಾರಿಸಿದ್ದು ಬಿಟ್ಟರೆ ಇನ್ಯಾವುದೇ ಪಂದ್ಯಗಳಲ್ಲಿ ಗಮನಾರ್ಹ ಬ್ಯಾಟಿಂಗ್ ತೋರಿಸಿಲ್ಲ.

ಎಡವುತ್ತಿರುವ ಪಂತ್

ಎಡವುತ್ತಿರುವ ಪಂತ್

ಕೆಟ್ಟ ಹೊಡೆತಗಳಿಗೆ ಮುಂದಾಗಿ ಪಂತ್ ವಿಕೆಟ್‌ ಒಪ್ಪಿಸುತ್ತಿರುವುದು ಮುಂದುವರೆದಿದೆ. ಹೀಗಾಗಿ ತಂಡ ನಿರ್ವಹಣಾ ಸಮಿತಿ ಇನ್ನುಳಿದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್‌ ಕೀಪರ್‌ಗಳಿಗೆ ಅವಕಾಶ ನೀಡುವತ್ತ ಯೋಚಿಸುತ್ತಿದೆ. ಈ ಬಗ್ಗೆ ಎಂಎಸ್‌ಕೆ ಪ್ರಸಾದ್‌ ಅವರೇ ಬಾಯ್ಬಿಟ್ಟಿದ್ದಾರೆ.

ಇನ್ನಷ್ಟು ಅವಕಾಶ ನೀಡಬೇಕಿದೆ

ಇನ್ನಷ್ಟು ಅವಕಾಶ ನೀಡಬೇಕಿದೆ

ಪಂತ್‌ ಬಗ್ಗೆ ಮಾತನಾಡಿದ ಪ್ರಸಾದ್, 'ನಾವು ಈ ಮೊದಲೇ ಹೇಳಿದ್ದೇವೆ. ವಿಶ್ವಕಪ್‌ ಬಳಿಕ ಪಂತ್‌ ಸುಧಾರಣೆ-ಬೆಳವಣಿಗೆ ಬಗ್ಗೆ ಗಮನಹರಿಸುತ್ತಿದ್ದೇವೆ ಎಂದು. ಪಂತ್ ಪ್ರತಿಭಾನ್ವಿತ ಆಟಗಾರನಾಗಿರುವುದರಿಂದ ನಾವು ತಾಳ್ಮೆಯಿಂದ ಕಾಯಬೇಕಿದೆ. ಪಂತ್‌ಗೆ ಇನ್ನಷ್ಟು ಅವಕಾಶ ನೀಡಬೇಕಿದೆ,' ಎಂದರು.

ಪಂತ್‌ಗೆ ಕೆಲಸದ ಹೊರೆ

ಪಂತ್‌ಗೆ ಕೆಲಸದ ಹೊರೆ

ಪಂತ್‌ ಕಳಪೆ ಪ್ರದರ್ಶನಕ್ಕೆ ಕೆಲಸದ ಒತ್ತಡವೂ ಕಾರಣ ಎಂಬುದನ್ನು ಆಯ್ಕೆ ಸಮಿತಿ ಮನಗಂಡಿದೆ. ಮಾತು ಮುಂದುವರೆಸಿದ ಎಂಎಸ್‌ಕೆ, 'ಪಂತ್‌ ಕೆಲಸದ ಹೊರೆ ಇಳಿಸುವತ್ತ ಯೋಚಿಸುತ್ತಿದ್ದೇವೆ. ಪಂತ್‌ಗೆ ಬೆಂಬಲವಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಯುವ ವಿಕೆಟ್‌ ಕೀಪರ್‌ಗಳನ್ನು ತಯಾರಿಸುವುದರಲ್ಲಿದ್ದೇವೆ,' ಎಂದರು.

ಮೂರು ಯುವ ಕೀಪರ್‌ಗಳು

ಮೂರು ಯುವ ಕೀಪರ್‌ಗಳು

'ಭಾರತ 'ಎ' ತಂಡದಲ್ಲಿರುವ ಕೆಎಲ್ ಭರತ್ ದೀರ್ಘ ಕ್ರಿಕೆಟ್‌ ಮಾದರಿಗೆ ಸೂಕ್ತರಿದ್ದಾರೆ. ನಿಗದಿತ ಓವರ್‌ಗಳ ಮಾದರಿಗೆ ನಮ್ಮಲ್ಲಿ ಭಾರತ 'ಎ' ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ,' ಎಂದು ಎಂಎಸ್‌ಕೆ ಪ್ರಸಾದ್‌ ತಿಳಿಸಿದ್ದಾರೆ. ಈ ಮೂವರು ಮುಂಬರುವ ದಿನಗಳಲ್ಲಿ ಪಂತ್‌ಗೆ ಬೆಂಬಲ ವಿಕೆಟ್‌ ಕೀಪರ್‌ಗಳಾಗಿ ಇರಲಿದ್ದಾರೆ. ಪಂತ್‌ ಅನುಪಸ್ಥಿತಿಯಲ್ಲಿ ಜವಾಬ್ದಾರಿ ಹೊರಲಿದ್ದಾರೆ.

Story first published: Saturday, September 21, 2019, 10:21 [IST]
Other articles published on Sep 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X