ರಾಂಚಿ, ಏ.8: ಐಪಿಎಲ್ 8 ಆರಂಭಕ್ಕೂ ಮುನ್ನ ರಾಂಚಿಯಲ್ಲಿ ಹೆಚ್ಚು ಕಾಲ ಕಳೆದಿರುವ ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ತಮ್ಮ ನೆಚ್ಚಿನ ಬೈಕ್ ಸವಾರಿ ಮಾಡಿ ಆನಂದಿಸಿದ್ದಾರೆ. ಆದರೆ, ಇತ್ತೀಚೆಗೆ ಬುಲೆಟ್ ಏರಿ ಸುತ್ತಾಡಿದ ಧೋನಿ ಅವರು ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ತೆತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬಿಎಸ್ಎ ಗೋಲ್ಡ್ ಸ್ಟಾರ್ ಡಿಬಿಡಿ 34 ಬೈಕ್ ಏರಿದ ಧೋನಿ ಅವರು ಸೋಮವಾರ ರಾಂಚಿಯ ಬೀದಿಗಳಲ್ಲಿ ಸುತ್ತಾಡಿದ್ದರು. ಧೋನಿ ಅವರ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲೂ ಜನಪ್ರಿಯಗೊಂಡಿತ್ತು. [ಧೋನಿ ರಾವಣ ಇದ್ದಂತೆ, ಅವನು ನಿರ್ಗತಿಕನಾಗಲಿ]
ಧೋನಿ ಅವರಿಗೆ ಬೈಕ್ ಕ್ರೇಜ್ ಇರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ತಮ್ಮ ನೆಚ್ಚಿನ ಬೈಕ್ ಏರಿದ ಧೋನಿ ಅವರು ತಮ್ಮ ವಾಹನದ ನೋಂದಣಿ ಸಂಖ್ಯೆ ಪ್ಲೇಟ್ ಸರಿ ಇಲ್ಲ ಎಂಬುದನ್ನು ಗಮನಿಸಿರಲಿಲ್ಲ. [ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ]

ಸಂಚಾರಿ ನಿಯಮದಡಿ ವಾಹನದ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ನ್ನು ವಾಹನದ ಮುಂದೆ ಹಾಗೂ ಹಿಂದೆ ಸ್ಪಷ್ಟವಾಗಿ ಕಾಣುವಂತೆ ಇರಬೇಕು. ಆದರೆ ಧೋನಿ ಸವಾರಿ ಮಾಡುತ್ತಿದ್ದ ಬುಲೆಟ್ ನ ಮುಂದೆ ನಂಬರ್ ಪ್ಲೇಟ್ ಇರಲಿಲ್ಲ. [ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]
ಮುಂದಿನ ಚಕ್ರದ ಮಡ್ ಗಾರ್ಡ್ ನ ಎಡಬದಿಯಲ್ಲಿ ನಂಬರ್ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 122/179ರ ಅನ್ವಯ ಧೋನಿ ಅವರಿಗೆ 500 ರು ದಂಡ ವಿಧಿಸಿ ಚಲನ್ ಬರೆಯಲಾಯಿತು. [ಧೋನಿ-ಸಾಕ್ಷಿ ಪುತ್ರಿ ಝೀವಾ ನೋಡಿ]

ಚಲನ್ ಸ್ವೀಕರಿಸಿದ ಧೋನಿ ಕುಟುಂಬದವರು ದಂಡ ಕಟ್ಟಿದ್ದಾರೆ. ನಿಯಮದ ಬಗ್ಗೆ ಸರಿಯಾದ ಅರಿವಿಲ್ಲದ ಕಾರಣ ತಪ್ಪು ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ರಾಂಚಿಯ ಸಂಚಾರಿ ಪೊಲೀಸ್ ಅಧೀಕ್ಷಕ ಕಾರ್ತಿಕ್ ಅವರು ಹೇಳಿದ್ದಾರೆ. [ಐಪಿಎಲ್: ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]
ಸಂಚಾರ ನಿಯಮ ಪಾಲನೆ ಹಾಗೂ ಸುರಕ್ಷತೆ ಬಗ್ಗೆ ರಾಂಚಿ ಟ್ರ್ರಾಫಿಕ್ ಪೊಲೀಸರು ಕೈಗೊಂಡಿರುವ ಕ್ರಮಕ್ಕೆ ಶ್ಲಾಘಿಸಿದ ಧೋನಿ ಅವರು ಈ ಅಭಿಯಾನಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.