ನಮಗಂತೂ ವಿಶ್ರಾಂತಿ ಬೇಕೆ ಎಂದು ಯಾರು ಕೇಳಲಿಲ್ಲ: ಕೊಹ್ಲಿಗೆ ವಿಶ್ರಾಂತಿ ನೀಡಿದ್ದರ ಕುರಿತು R.P ಸಿಂಗ್ ಪ್ರಶ್ನೆ

ವಿಶ್ರಾಂತಿ ಹೆಸರಿನಲ್ಲಿ ಫಾರ್ಮ್ ಇಲ್ಲದ ಆಟಗಾರರಿಗೆ ಬಿಸಿಸಿಐ ಐಷಾರಾಮಿ ಅವಕಾಶ ನೀಡುತ್ತಿದೆ ಎಂದು ಟೀಂ ಇಂಡಿಯಾ ಮಾಜಿ ಬೌಲರ್ ಆರ್.ಪಿ. ಸಿಂಗ್ ಆರೋಪಗಳ ಸುರಿಮಳೆಗೈದಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಮುಂದಿನ ಬಾರಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಲ್ಲಿ ಸೆಣಸಲಿದೆ.
ಈ ಸರಣಿಗಾಗಿ ಶಿಖರ್ ಧವನ್ ನೇತೃತ್ವದಲ್ಲಿ ಏಕದಿನ ತಂಡ ಹಾಗೂ ರೋಹಿತ್ ಶರ್ಮಾ ನೇತೃತ್ವದ ಟಿ20 ಭಾರತೀಯ ತಂಡವನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಭಾರತ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಐದು ಟಿ20 ಪಂದ್ಯಗಳನ್ನಾಡಲಿದೆ.

ವಿಂಡೀಸ್ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪ್ರಮುಖ ಆಟಗಾರ ವಿರಾಟ್ ಕೊಹ್ಲಿಗೆ ಬ್ರೇಕ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಕಳೆದ 2 ವರ್ಷಗಳಿಂದ ವಿರಾಟ್ ಕೊಹ್ಲಿ ಫಾರ್ಮ್ ಕಳಪೆಯಾಗಿದ್ದು, ಅವರಿಗೆ ಸಾಂದರ್ಭಿಕ ವಿಶ್ರಾಂತಿ ನೀಡಲಾಗುತ್ತಿದೆ. ಆದರೆ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 16 ರನ್ ಗಳಿಸಿ ಔಟಾದರು. ಇದರಿಂದಾಗಿ ವೆಸ್ಟ್ ಇಂಡೀಸ್ ಸರಣಿಗೆ ಮತ್ತೆ ವಿಶ್ರಾಂತಿ ಘೋಷಿಸಲಾಗಿದೆ.

ಬಿಸಿಸಿಐ ಕ್ರಮವನ್ನ ಖಂಡಿಸಿದ ಟೀಂ ಇಂಡಿಯಾ ಮಾಜಿ ಬೌಲರ್
ಈ ವೇಳೆ ಮಾಜಿ ಆಟಗಾರ ಆರ್.ಪಿ. ಸಿಂಗ್ ಬಿಸಿಸಿಐನ ಈ ಕ್ರಮವನ್ನು ಖಂಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಆಟಗಾರ ಚೆನ್ನಾಗಿ ಆಡದಿದ್ದಾಗ ವಿಶ್ರಾಂತಿ ಕೇಳುವುದಿಲ್ಲ. ಅವರು ಹೆಚ್ಚು ಪಂದ್ಯಗಳನ್ನು ಆಡಲು ಮತ್ತು ಫಾರ್ಮ್‌ಗೆ ಮರಳಲು ಬಯಸುತ್ತಾರೆ. ಆದರೆ ಈ ಪದ್ಧತಿ ಈಗ ಕಡಿಮೆಯಾಗಿದೆ. ವಿಶ್ರಾಂತಿಯ ನಂತರ ಆಟಗಾರನು ಹೇಗೆ ಫಾರ್ಮ್‌ಗೆ ಮರಳಬಹುದು ನನಗೆ ತಿಳಿದಿಲ್ಲ ಎಂದು ಆರ್.ಪಿ ಸಿಂಗ್ ಆಯ್ಕೆಗಾರರ ನಿರ್ಧಾರವನ್ನ ಪ್ರಶ್ನಿಸಿದ್ದಾರೆ.
21ನೇ ಶತಮಾನದಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿ: ಸಚಿನ್‌ಗೆ 10ನೇ ಸ್ಥಾನ, ಕೊಹ್ಲಿ ಟಾಪ್ 2, ಈತ ನಂಬರ್ 1!

ವಿಶ್ರಾಂತಿ ಹೆಸರಿನಲ್ಲಿ ಐಷಾರಾಮಿ ಅವಕಾಶ!
ಸ್ಟಾರ್ ಆಟಗಾರರಿಗೆ ವಿಶ್ರಾಂತಿಯ ಹೆಸರಿನಲ್ಲಿ ಬಿಸಿಸಿಐ ನೀಡುವ ಐಷಾರಾಮಿ ಅವಕಾಶ ಎಲ್ಲ ಆಟಗಾರರಿಗೂ ಸಿಗುವುದಿಲ್ಲ. ನಾನು ಮತ್ತು ಪ್ರಗ್ಯಾನ್ ಓಜಾ ಭಾರತ ತಂಡದಲ್ಲಿ ಆಡಿದಾಗ ವಿಶ್ರಾಂತಿಯ ಬಗ್ಗೆ ಮಾತನಾಡಿರಲಿಲ್ಲ. ತಂಡದ ಆಯ್ಕೆ ಮಾಡುವಾಗ ಆಗಲಿ, ಯಾರಿಗಾದರೂ ನಮ್ಮೊಂದಿಗೆ ವಿರಾಮ ಬೇಕೇ? ಎಂದೂ ಎಂದೂ ಕೇಳಿಲ್ಲ ಎಂದು ಆರ್.ಪಿ ಸಿಂಗ್ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
2007ರ ಟಿ20 ವಿಶ್ವಕಪ್‌ಗೂ ಮುನ್ನ ಹಿರಿಯ ಆಟಗಾರರು ಕೂಡ ವಿರಾಮ ತೆಗೆದುಕೊಳ್ಳಲಿಲ್ಲ. ಏಕೆಂದರೆ ಆಗ ಟಿ20 ಕ್ರಿಕೆಟ್ ಹೊಸದು. ಕ್ರಿಕೆಟಿಗನಿಗೆ ಆಡುವ ದಿನಗಳು ಕಡಿಮೆ. ಒಂದು ದಿನ ಅವರು ನಿವೃತ್ತರಾಗಬೇಕು. ವಿರಾಟ್ ಕೊಹ್ಲಿ ನಿಜವಾಗಿಯೂ ಗಾಯಗೊಂಡರೆ, ಬಿಡುವು ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಫಾರ್ಮ್‌ಗೆ ಮರಳಲು ವಿಶ್ರಾಂತಿ ತೆಗೆದುಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.
Ind vs Eng: ಸರಣಿ ವಶಕ್ಕೆ ಪಡೆಯಬೇಕಾದರೆ ಭಾರತದ ರಣತಂತ್ರದಲ್ಲಿ ಈ 3 ಬದಲಾವಣೆ ಅಗತ್ಯ

ವಿಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ
ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಏಕದಿನ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications