ಪಾಕ್ ದಾಳಿಗೆ ನಲುಗಿದ ಶ್ರೀಲಂಕಾ, 222ರನ್‌ಗಳಿಗೆ ಆಲೌಟ್
ಬೃಹತ್ ಮೊತ್ತ ಕಲೆಹಾಕುವ ಯೋಜನೆ ಹಾಗೂ ತವರಿನ ಪಿಚ್ ಲಾಭ ಪಡೆಯಲು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡಿ ಕೇವಲ 222ರನ್‌ಗಳನ್ನು ಸ್ಕೋರ್ ಬೋರ್ಡ್‌ಗೆ ದಾಖಲಿಸಿತು. ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡ ದ್ವೀಪ ರಾಷ್ಟ್ರ ಮೊದಲಿಗೆ ನಾಯಕ ದಿಮುತ್ ಕರುಣರತ್ನೆ (1) ವಿಕೆಟ್ ಕಳೆದುಕೊಳ್ಳುವ ಮೂಲಕ ವಿಕೆಟ್ ಪತನ ಶುರುವಾಯಿತು.
ಆರಂಭಿಕ ಆಘಾತದ ಬಳಿಕ ಎರಡನೇ ವಿಕೆಟ್‌ಗೆ ಅರ್ಧಶತಕಕ್ಕೆ ಒಂದು ರನ್ ಕಡಿಮೆಯ ಜೊತೆಯಾಟವಾಡಿದ್ದ ಕುಸಾಲ್ ಮೆಂಡೀಸ್ ಹಾಗೂ ಒಶಾಂಡ ಫರ್ನಾಂಡೊ ಜೋಡಿಗೆ ಯಾಸಿರ್ ಶಾ ಬ್ರೇಕ್ ನೀಡಿದ್ರು. ಕುಸಾಲ್ ಮೆಂಡೀಸ್ 21ರನ್‌ಗೆ ಔಟಾದ ಬಳಿಕ ಒಂದರ ಮತ್ತೊಂದು ವಿಕೆಟ್ ಉರುಳಿದವು. ಉತ್ತಮವಾಗಿ ಆಡ್ತಿದ್ದ ಒಶಾಂಡ ಫರ್ನಾಂಡೊ 35ರನ್‌ಗೆ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಏಂಜೆಲೊ ಮ್ಯಾಥ್ಯೂಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.
ಮಧ್ಯಾಹ್ನ ಊಟದ ವಿರಾಮದ ಹೊತ್ತಿಗೆ 25 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80ರನ್ ಕಲೆಹಾಕಿದ್ದ ಶ್ರೀಲಂಕಾ ತಂಡವು, ವಿರಾಮದ ಬಳಿಕವೂ ವಿಕೆಟ್ ಪತನ ಮುಂದುವರಿಸಿತು. ಒಂದೆಡೆ ದಿನೇರ್ಶ ಚಾಂಡಿಮಲ್ ಅರ್ಧಶತಕದೊಂದಿಗೆ ಗಟ್ಟಿಯಾಗಿ ನೆಲೆಯೂರಿದ್ರೆ, ಮತ್ತೊಂದೆಡೆ ವಿಕೆಟ್ ಉರುಳಲಾರಂಭಿಸಿದವು. ಶಾಹಿನ್ ಅಫ್ರಿದಿ ದಾಳಿಗೆ ಕಂಗೆಟ್ಟ ಲಂಕಾ 222ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಪಾಕ್ ಶಾಹಿನ್ ಅಫ್ರಿದಿ 4, ಹಸನ್ ಅಲಿ ಹಾಗೂ ಯಾಸಿರ್ ಶಾ ತಲಾ 2 ವಿಕೆಟ್ ಪಡೆದ್ರೆ, ನಸೀಂ ಶಾ ಮತ್ತು ನವಾಜ್ ತಲಾ 1 ವಿಕೆಟ್ ಪಡೆದರು.
ಶ್ರೀಲಂಕಾ ತಂಡಕ್ಕೆ ಏಕೈಕ ಆಸರೆಯಾದ ದಿನೇಶ್ ಚಾಂಡಿಮಲ್
ಒಂದೆಡೆ ಲಂಕಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರೆ, ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ದಿನೇಶ್ ಚಾಂಡಿಮಲ್ ಅರ್ಧಶತಕ ದಾಖಲಿಸಿ ತಂಡದ ಪರ ಗರಿಷ್ಠ ಸ್ಕೋರ್ ಎನಿಸಿಕೊಂಡ್ರು. 115 ಎಸೆತಗಳಲ್ಲಿ 76 ರನ್ ಕಲೆಹಾಕಿದ ಚಾಂಡಿಮಲ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹ ಒಳಗೊಂಡಿತ್ತು. ಚಾಂಡಿಮಲ್ ಆಟದಿಂದಾಗಿ ಲಂಕಾ 200ರ ಗಡಿದಾಟಲು ಸಾಧ್ಯವಾಯಿತು.
ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!
ಬಹುಬೇಗನೆ ಎರಡು ವಿಕೆಟ್ ಕಳೆದುಕೊಂಡ ಪಾಕಿಸ್ತಾನ
ಮೊದಲ ದಿನದಾಟದಂತ್ಯಕ್ಕೆ ಶ್ರೀಲಂಕಾ ನೀಡಿದ್ದ ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 24ರನ್ ಕಲೆಹಾಕಿದೆ. 18 ಓವರ್‌ಗಳಲ್ಲಿ ಲಂಕಾ ಬೌಲರ್ಸ್ ಮೇಲುಗೈ ಸಾಧಿಸಿದ್ದು ಅದ್ಬುಲ್ಲ ಶಫೀಕ್ (13), ಇಮಾಮ್ ಉಲ್ ಹಕ್ (2) ವಿಕೆಟ್ ಪಡೆಯುವಲ್ಲಿ ಪ್ರಭಾತ್ ಜಯಸೂರ್ಯ ಮತ್ತು ರಜಿತ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ಲೀಡ್ ಪಡೆಯಲು ಇನ್ನೂ 198ರನ್‌ಗಳನ್ನ ಹಿಂದಿಕ್ಕಬೇಕಿದೆ.
IND vs ENG 3rd ODI: ನಿರ್ಣಾಯಕ ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್, ಸಂಭಾವ್ಯ ತಂಡಗಳ ಮಾಹಿತಿ
ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್


Click it and Unblock the Notifications












