Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Breaking News: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 342ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ

Abdullah Shafique

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ನೀಡಿದ್ದ 342ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಪಾಕಿಸ್ತಾನ ದಾಖಲೆಯ ಗೆಲುವು ಪಡೆದಿದೆ. ಗಾಲೆ ಮೈದಾನದಲ್ಲಿ ಇದು ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್‌ ಚೇಸ್ ಆಗಿದ್ದು, ಪ್ರವಾಸಿ ಪಾಕ್ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅಂತಿಮ ದಿನದಾಟದಲ್ಲಿ ಗೆಲುವಿಗೆ 120ರನ್ ಬಾಕಿ ಉಳಿಸಿಕೊಂಡಿದ್ದ ಪಾಕಿಸ್ತಾನ ಕೊನೆಯ ದಿನದಲ್ಲಿ ಒಂದು ವಿಕೆಟ್‌ನಷ್ಟೇ ಕಳೆದುಕೊಂಡು ಗೆಲುವಿನ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಪಾಕ್ ಪರ ಗೋಡೆಯಂತೆ ನಿಂತು ತಂಡವನ್ನ ಗೆಲುವಿನ ದಡ ತಲುಪಿಸಿದ ಅಬ್ದುಲ್ಲಾ ಶಫೀಕ್ ಅಜೇಯ 160 ರನ್ ಕಲೆಹಾಕಿ ತಂಡದ ಪರ ಹೀರೋ ಆಗಿ ಮಿಂಚಿದರು.

ಬರೋಬ್ಬರಿ 408 ಎಸೆತಗಳನ್ನ ಎದುರಿಸಿದ ಶಫೀಕ್

ಪಾಕಿಸ್ತಾನ ಓಪನಿಂಗ್ ಬ್ಯಾಟರ್ ಅಬ್ದುಲ್ಲಾ ಶಫೀಕ್ ಅಂತಿಮ ದಿನದಾಟದಲ್ಲೂ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು. ಅತ್ಯಂತ ತಾಳ್ಮೆಯುತ ಆಟವಾಡಿರುವ ಶಫೀಕ್ 408 ಎಸೆತಗಳನ್ನ ಎದುರಿಸಿದ್ದು, 39.22ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 160ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

ನಾಲ್ಕನೇ ದಿನದಾಟದಂತ್ಯಕ್ಕೆ 289 ಎಸೆತಗಳಲ್ಲಿ ಅಜೇಯ 112 ರನ್‌ ಕಲೆಹಾಕಿದ್ದ ಶಫೀಕ್ ಕೊನೆಯ ದಿನದಾಟದಲ್ಲಿ ಎಲ್ಲೂ ಕೂಡ ತಪ್ಪು ಹೆಜ್ಜೆಯನ್ನಿಡದೆ ತಂಡವನ್ನ ಗೆಲುವಿನ ಗೆರೆ ದಾಟಿಸಿದ್ರು. ದಿನದಾಟದ ಆರಂಭದಲ್ಲಿ ಹಸನ್ ಅಲಿ 5ರನ್‌ಗೆ ಔಟಾದ ಬಳಿಕ ಮೊಹಮ್ಮದ್ ನವಾಜ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ನವಾಜ್ ಅಜೇಯ 19ರನ್‌ಗಳ ಕೊಡುಗೆಯನ್ನ ನೀಡಿದ್ರು.

ಹಾರ್ದಿಕ್ ಪಾಂಡ್ಯ ವಿಶ್ವದ ಬೆಸ್ಟ್ ಆಲ್‌ರೌಂಡರ್ ಆಗಲಿದ್ದಾರೆ: ಶೋಯೆಬ್ ಅಖ್ತರ್ ಭವಿಷ್ಯ

ಶ್ರೀಲಂಕಾ ಪರ ಏಕಾಂಗಿಯಾಗಿ ಹೋರಾಡಿದ ಪ್ರಭಾತ್ ಜಯಸೂರ್ಯ

ಶ್ರೀಲಂಕಾ ಪರ ಏಕಾಂಗಿಯಾಗಿ ಹೋರಾಡಿದ ಪ್ರಭಾತ್ ಜಯಸೂರ್ಯ

ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದ ಪ್ರಭಾತ್ ಜಯಸೂರ್ಯ , ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲೂ ಶ್ರೀಲಂಕಾದ ಗರಿಷ್ಠ ವಿಕೆಟ್ ಟೇಕರ್ ಆಗಿ ಮಿಂಚಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ 135ರನ್ ನೀಡಿದ 10 ಮೇಡನ್ ಓವರ್ ಸಹಿತ 4 ವಿಕೆಟ್ ಪಡೆದರು ಹಾಗೂ ಪಂದ್ಯದಲ್ಲಿ ಒಟ್ಟು 9 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕಳೆದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಈ ಸ್ಪಿನ್ನರ್ ಎರಡೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿ ಒಟ್ಟಾರೆ ಪಂದ್ಯದಲ್ಲಿ 12 ವಿಕೆಟ್ ಸಂಪಾದಿಸಿದ್ದರು.

ಆದ್ರೆ ಪ್ರಭಾತ್ ಜಯಸೂರ್ಯಗೆ ಉತ್ತಮ ಸಾಥ್ ಕೊಡುವಲ್ಲಿ ಶ್ರೀಲಂಕಾ ಬೌಲರ್‌ಗಳು ಎಡವಿದ ಪರಿಣಾಮ ಮೊದಲ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನ ಶ್ರೀಲಂಕಾ ಕಳೆದುಕೊಂಡಿದೆ. ರಮೇಶ್ ಮೆಂಡೀಸ್, ಧನಂಜಯ ಡಿಸಿಲ್ವಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಶಿಖರ್ ಧವನ್ ರೀಲ್ಸ್ ವೀಡಿಯೋದಲ್ಲಿ ಕಾಣಿಸಿಕೊಂಡ ರಾಹುಲ್ ದ್ರಾವಿಡ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

ದಿನೇಶ್ ಕಾರ್ತಿಕ್ ಇಂದು ವಿರಾಟ್ ಕೊಹ್ಲಿ ಮುಂದಿನ ಶತಕದ ಬಗ್ಗೆ ಭವಿಷ್ಯ ನುಡಿದಿದ್ದಾರೆ | *Cricket | OneIndia
ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ

ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ

ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್

Story first published: Wednesday, July 20, 2022, 15:18 [IST]
Other articles published on Jul 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+