Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತ್ರಿಕೋನ ಟಿ20 ಸರಣಿ: ಬಾಂಗ್ಲಾ ವಿರುದ್ಧ 24 ಎಸೆತಗಳಲ್ಲಿ 60ರನ್ ಸಿಡಿಸಿದ ಫಿಲಿಪ್ಸ್‌, ಕಿವೀಸ್‌ಗೆ 48ರನ್‌ಗಳ ಜಯ

New zealand

ಟಿ20 ವಿಶ್ವಕಪ್‌ಗೂ ಮುನ್ನ ಆತಿಥೇಯ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕಿವೀಸ್ ನಾಡಿನಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಭಾಗಿಯಾಗಿದ್ದು, ಬುಧವಾರ ನಡೆದ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆತಿಥೇಯ ನ್ಯೂಜಿಲೆಂಡ್ 48ರನ್‌ಗಳಿಂದ ಗೆದ್ದು ಬೀಗಿದೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನಿಸಿತು. ಈ ಅವಕಾಶವನ್ನ ಎರಡೂ ಕೈನಿಂದ ಬಾಚಿಕೊಂಡ ಕಿವೀಸ್ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಅದ್ರಲ್ಲೂ ಗ್ಲೆನ್ ಫಿಲಿಪ್ಸ್‌ ಸ್ಫೋಟಕ ಆಟಕ್ಕೆ ಬಾಂಗ್ಲಾ ಬೌಲರ್ಸ್ ನಲುಗಿ ಹೋದರು.

ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್ ಅಬ್ಬರ, 200ರ ಗಡಿ ದಾಟಿದ ಕಿವೀಸ್

ನ್ಯೂಜಿಲೆಂಡ್ ಓಪನರ್‌ಗಳಾದ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೆ ತಂಡಕ್ಕೆ ಉತ್ತಮ ಆರಂಭ ನೀಡಿದ್ರು. ಮೊದಲ ವಿಕೆಟ್‌ಗೆ 45ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಭರ್ಜರಿ ಆರಂಭ ನೀಡಿತು. ಫಿನ್ ಅಲೆನ್ 19 ಎಸೆತಗಳಲ್ಲಿ 32ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಮತ್ತೊಬ್ಬ ಓಪನರ್ ಡೆವೊನ್ ಕಾನ್ವೆ 40 ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಅಮೋಘ ಆಟ ಪ್ರದರ್ಶಿಸಿದ್ರು. ಕಾನ್ವೆ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.

ಹಿರಿಯ ಅನುಭವಿ ಕ್ರಿಕೆಟಿಗ ಮಾರ್ಟಿನ್ ಗಪ್ಟಿಲ್ 27 ಎಸೆತಗಳಲ್ಲಿ 34ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು. ಕಾನ್ವೆಯ ಅದ್ಭುತ ಆಟ 64ರನ್‌ಗಳಿಗೆ ಕೊನೆಗೊಂಡಿತು. ಈ ವೇಳೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಫಿಲಿಪ್ಸ್‌ ತಂಡದ ಸ್ಕೋರನ್ನು 200ರ ಗಡಿದಾಟಿಸಿದ್ರು.

24 ಎಸೆತಗಳಲ್ಲಿ 60ರನ್ ಚಚ್ಚಿದ ಫಿಲಿಪ್ಸ್‌ ಅಬ್ಬರಕ್ಕೆ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 250.00 ಸಾಕ್ಷಿಯಾಗಿತ್ತು. ಇವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಿದ್ದವು. ನಿಗದಿತ 20 ಓವರ್‌ಗಳಲ್ಲಿ ಕಿವೀಸ್ 5 ವಿಕೆಟ್ ನಷ್ಟಕ್ಕೆ 208ರನ್ ಕಲೆಹಾಕಿತು

ಇನ್ನು ಬಾಂಗ್ಲಾ ಪರ ಸೈಫುದ್ದೀನ್ ಹಾಗೂ ಎಬಾಡಾಟ್ ಹೊಸೈನ್ ತಲಾ 2 ವಿಕೆಟ್ ಪಡೆದರು. ಶೊರಿಫುಲ್ ಇಸ್ಲಾಮ್ 1 ವಿಕೆಟ್ ಪಡೆದರು.

ಟಿ20 ವಿಶ್ವಕಪ್ ಚಿತ್ರಮಂದಿರಗಳಲ್ಲಿ ನೇರಪ್ರಸಾರಕ್ಕೆ ಐಸಿಸಿ ಜೊತೆ ಒಪ್ಪಂದ ಮಾಡಿಕೊಂಡ INOX

ಬಾಂಗ್ಲಾ ಪರ ಶಾಕೀಬ್ ಅಲ್ ಹಸನ್ ಏಕಾಂಗಿ ಹೋರಾಟ ವ್ಯರ್ಥ

ಬಾಂಗ್ಲಾ ಪರ ಶಾಕೀಬ್ ಅಲ್ ಹಸನ್ ಏಕಾಂಗಿ ಹೋರಾಟ ವ್ಯರ್ಥ

209ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡವು ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಗುರಿ ಮುಟ್ಟಲು ಸಾಧ್ಯವಾಗದೇ 48ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು. ಬಾಂಗ್ಲಾದೇಶ ಪರ ಆಲ್‌ರೌಂಡರ್ ಮತ್ತು ನಾಯಕ ಶಕೀಬ್ ಅಲ್ ಹಸನ್ ಏಕಾಂಗಿ ಹೋರಾಟ ಪ್ರದರ್ಶಿಸಿದ್ರು.

ಇದಕ್ಕೂ ಮುನ್ನ ಓಪನರ್ ನಜೀಮುಲ್ ಹುಸ್ಸೇನ್ 11, ಲಿಟ್ಟನ್ ದಾಸ್ 23, ಸೌಮ್ಯ ಸರ್ಕಾರ್ 23, ಅಫಿಪ್ ಹುಸೇನ್ 4, ನುರುಲ್ ಹಸನ್ 2, ಯಾಸಿರ್ ಅಲಿ 6ರನ್‌ಗಳಿಸಿ ಔಟಾದ್ರು. ಆದ್ರೆ ಬಾಂಗ್ಲಾ ನಾಯಕ ಶಕೀಬ್ ಏಕಾಂಗಿಯಾಗಿ ಹೋರಾಟ ಪ್ರದರ್ಶಿಸಿ 44 ಎಸೆತಗಳಲ್ಲಿ 70 ರನ್ ಕಲೆಹಾಕಿ ಔಟಾದರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

ಅಂತಿಮವಾಗಿ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ ಟೇಬಲ್ ಟಾಪರ್ ಆಗಿದೆ. ಪಾಕಿಸ್ತಾನ 3 ಪಂದ್ಯಗಳಲ್ಲಿ 2 ಜಯಿಸಿ ದ್ವಿತೀಯ ಸ್ಥಾನದಲ್ಲಿದೆ. ಬಾಂಗ್ಲಾದೇಶ 3ಕ್ಕೆ 3 ಪಂದ್ಯ ಸೋತು ಕೊನೆಯ ಸ್ಥಾನ ತಲುಪಿದೆ.

SMAT 2022: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ, ಸ್ಫೋಟಕ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಬಾಂಗ್ಲಾದೇಶ ಪ್ಲೇಯಿಂಗ್ 11
ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಶಾಕಿಬ್ ಅಲ್ ಹಸನ್ (ನಾಯಕ), ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಹಮ್ಮದ್ ಸೈಫುದ್ದೀನ್, ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್

ಬೆಂಚ್: ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ನಸುಮ್ ಅಹ್ಮದ್, ಸಬ್ಬೀರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್


ನ್ಯೂಜಿಲೆಂಡ್ ಪ್ಲೇಯಿಂಗ್ 11
ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಟಿನ್ ಗಪ್ಟಿಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್‌ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ, ಆಡಮ್ ಮಿಲ್ನೆ, ಟಿಮ್ ಸೌಥಿ (ನಾಯಕ), ಟ್ರೆಂಟ್ ಬೌಲ್ಟ್

ಬೆಂಚ್: ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ಬ್ಲೇರ್ ಟಿಕ್ನರ್, ಡೇನ್ ಕ್ಲೀವರ್, ಲ್ಯುಕಿ ಫರ್ಗುಸನ್

Story first published: Wednesday, October 12, 2022, 13:14 [IST]
Other articles published on Oct 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+