ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2022: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ, ಸ್ಫೋಟಕ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

devdutt padikkal

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐ.ಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ರೌಂಡ್ 1 ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಬೃಹತ್ ಮೊತ್ತ ದಾಖಲಿಸಿದ್ದಲ್ಲದೆ, ಎದುರಾಳಿಯನ್ನ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ 99ರನ್‌ಗಳ ಗೆಲುವಿನ ಶುಭಾರಂಭ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕದ ಪರ ಓಪನರ್ ದೇವದತ್ ಪಡಿಕಲ್ ಸ್ಫೋಟಕ ಇನ್ನಿಂಗ್ಸ್‌ ಆಡುವ ಮೂಲಕ ಎದುರಾಳಿ ಬೌಲರ್‌ಗಳನ್ನ ಚಿಂದಿ ಮಾಡಿದ್ದಾರೆ. ದೇಶೀಯ ಖ್ಯಾತ ಟಿ20 ಟೂರ್ನಮೆಂಟ್‌ನ ಉದ್ಘಾಟನಾ ದಿನದಂದೇ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ.

ದೇವದತ್ ಪಡಿಕ್ಕಲ್ ಅಬ್ಬರ, ಅಜೇಯ ಶತಕ ದಾಖಲು

ದೇವದತ್ ಪಡಿಕ್ಕಲ್ ಅಬ್ಬರ, ಅಜೇಯ ಶತಕ ದಾಖಲು

ಗ್ರೂಪ್ ಸಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಮೊಹಾಲಿಯಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 28ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಈ ವೇಳೆಯಲ್ಲಿ ಎರಡನೇ ವಿಕೆಟ್‌ಗೆ ಮನೀಷ್ ಪಾಂಡೆ ಜೊತೆಗೆ ಶತಕದ ಜೊತೆಯಾಟವಾಡಿದ ದೇವದತ್ ಪಡಿಕ್ಕಲ್ ಶತಕದ ಜೊತೆಯಾಟವಾಡಿದ್ರು.

ಎರಡನೇ ವಿಕೆಟ್‌ಗೆ 148ರನ್‌ಗಳ ಅಮೋಘ ಜೊತೆಯಾಟವಾಡಿದ ಈ ಜೋಡಿ ಮಹಾರಾಷ್ಟ್ರ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಒಂದೆಡೆ ಮನೀಶ್ ಪಾಂಡೆ 38 ಎಸೆತಗಳಲ್ಲಿ 50ರನ್ ಸಿಡಿಸಿ ಔಟಾದ್ರೆ, ದೇವದತ್ ಪಡಿಕ್ಕಲ್ ಅಜೇಯ ಶತಕ ಸಿಡಿಸುವ ಮೂಲಕ ತಂಡದ ಸ್ಕೋರನ್ನ 200ರ ಗಡಿದಾಟುವಂತೆ ಆಟವಾಡಿದ್ರು.

200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ದೇವದತ್ ಪಡಿಕ್ಕಲ್ 62 ಎಸೆತಗಳಲ್ಲಿ ಅಜೇಯ 124ರನ್‌ ಸಿಡಿಸುವ ಮೂಲಕ ಅಬ್ಬರದ ಆಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 6 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು. ಇವರ ಅದ್ಭುತ ಆಟದಿಂದಾಗಿ ಕರ್ನಾಟಕ 2 ವಿಕೆಟ್ ನಷ್ಟಕ್ಕೆ 215ರನ್ ಕಲೆಹಾಕಿತು.

Ind vs SA 3rd ODI: 7 ವಿಕೆಟ್‌ಗಳಿಂದ ಗೆದ್ದ ಭಾರತ, 2-1 ಅಂತರದಲ್ಲಿ ಸರಣಿ ಜಯ

 116 ರನ್‌ಗಳಿಗೆ ಕುಸಿತಗೊಂಡ ಮಹಾರಾಷ್ಟ್ರ

116 ರನ್‌ಗಳಿಗೆ ಕುಸಿತಗೊಂಡ ಮಹಾರಾಷ್ಟ್ರ

ಕರ್ನಾಟಕ ನೀಡಿದ್ದ 216ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಮಹಾರಾಷ್ಟ್ರ ತಂಡವು ಕರ್ನಾಟಕ ದಾಳಿಗೆ ತತ್ತರಿಸಿ ಹೋಯಿತು. ಮಹಾರಾಷ್ಟ್ರ ಟಾಪ್ ಆರ್ಡರ್ ಬ್ಯಾಟರ್‌ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಇದಕ್ಕೆ ಸಾಕ್ಷಿಯೆಂಬತೆ ಅಗ್ರಕ್ರಮಾಂಕದ ಆರು ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ಗೆ ವಿಕೆಟ್ ಒಪ್ಪಿಸಿದ್ರು.

ಪವನ್ ಶಾ 0, ಯಶ್ ನಹರ್ 1, ಸಿದ್ಧೇಶ್ ವೀರ್ 5, ನೌಶಾದ್ ಶೇಖ್ 4, ಅಜೀಮ್ ಕಾಜಿ 6, ಕೌಶಲ್ ತಾಂಬೆ 4ರನ್‌ಗಳಿಸಿ ಪೆವಿಲಿಯನ್ ಸೇರಿದ್ರು. ನಾಯಕ ಸತ್ಯಜೀತ್ ಬಚಾವ್ ಆಟ 8ರನ್‌ಗೆ ಕೊನೆಗೊಂಡಿತು. ಆದ್ರೆ ದಿವ್ಯಾಂಗ್ ಹಿಂಗನೇಕರ್ ಕೆಳಕ್ರಮಾಂಕದಲ್ಲಿ ಹೋರಾಟ ಪ್ರದರ್ಶಿಸಿ 47ರನ್, ಎಸ್. ಎಂ ಕಾಜಿ 28 ರನ್ ಕಲೆಹಾಕಿದ್ದು ಬಿಟ್ಟರೆ, ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಮಹಾರಾಷ್ಟ್ರ 116ರನ್ ಗಳಿಸಲಷ್ಟೇ ಶಕ್ತಗೊಂಡಿತು. ಪರಿಣಾಮ ಕರ್ನಾಟಕ 99ರನ್‌ಗಳ ಭರ್ಜರಿ ಜಯ ಸಾಧಿಸಿತು.

ಭವಿಷ್ಯದ ಎಬಿ ಡಿವಿಲಿಯರ್ಸ್ ಆಗಬಲ್ಲ ಮೂವರು ಮಾಡ್ರನ್ ಡೇ ಕ್ರಿಕೆಟಿಗರು

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಲುವ್ನಿತ್ ಸಿಸೋಡಿಯಾ(ವಿಕೆಟ್ ಕೀಪರ್), ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್
ಮಹಾರಾಷ್ಟ್ರ ಆಡುವ ಬಳಗ: ಸತ್ಯಜೀತ್ ಬಚಾವ್ (ನಾಯಕ), ಅಜೀಮ್ ಕಾಜಿ, ನೌಶಾದ್ ಶೇಖ್ (ವಿಕೆಟ್ ಕೀಪರ್), ಪವನ್ ಶಾ, ಯಶ್ ನಹರ್, ಸಿದ್ಧೇಶ್ ವೀರ್, ಆಶಯ್ ಪಾಲ್ಕರ್, ಕೌಶಲ್ ತಾಂಬೆ, ದಿವ್ಯಾಂಗ್ ಹಿಂಗನೇಕರ್, ರಾಜವರ್ಧನ್ ಹಂಗರ್ಗೇಕರ್, ರಾಮಕೃಷ್ಣ ಘೋಷ್

Story first published: Tuesday, October 11, 2022, 20:10 [IST]
Other articles published on Oct 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X