
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲ ಪಂದ್ಯ
ಏಷ್ಯಾಕಪ್‌ನಂತೆಯೇ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ತಿಂಗಳ 23 ರಂದು ಭಾರತೀಯ ಕಾಲಮಾನ ಮಧ್ಯಾಹ್ನ ಒಂದೂವರೆ ಗಂಟೆಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಪ್ರಸ್ತುತ ಪಾಕಿಸ್ತಾನ ಉತ್ತಮ ಫಾರ್ಮ್‌ನಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಟಿ20 ಸರಣಿಯನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್-ಪಾಕಿಸ್ತಾನ-ಬಾಂಗ್ಲಾದೇಶ ಒಳಗೊಂಡ ಸರಣಿ ಇದಾಗಿದೆ. ಕಿವೀಸ್ ತಂಡವನ್ನ ಫೈನಲ್‌ನಲ್ಲಿ ಬಾಬರ್ ಅಜಮ್ ಪಡೆ ಸೋಲಿಸಿದೆ.
T20 World Cup 2022: ವಿವಿಧ ತಂಡಗಳಿಗೆ ತರಬೇತಿ ನೀಡುತ್ತಿರುವ 5 ಮಾಜಿ ಆರ್‌ಸಿಬಿ ಆಟಗಾರರು

ವಿಶ್ವದ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಕಾಟ
ಹೌದು, ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯವು ಒಂದು ಎಸೆತವನ್ನೂ ಕಾಣದೆ ಕೊನೆಗೊಂಡಿದ್ದನ್ನ ಕಂಡಿದ್ದೇವೆ. ಇದ್ರ ಬೆನ್ನಲ್ಲೇ ಅಭಿಮಾನಿಗಳಿಗೆ ಶಾಕಿಂಗ್ ವಿಚಾರ ಏನಂದ್ರೆ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯಕ್ಕೂ ಮಳೆ ಕಾಟ ಎದುರಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ
.
ಅಕ್ಟೋಬರ್ 23ರಂದು ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯ ಕಾಟ ಎದುರಾಗುವ ಸಂಭವವಿದೆ. ಪಂದ್ಯದ ದಿನದಂದು ಶೇಕಡಾ 80ರಷ್ಟು ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಹ್ಯುಮಿಡಿಟಿ ಶೇಕಡಾ 83ರಷ್ಟಿರಲಿದ್ದು, ಗಾಳಿಯು 19/km ವೇಗದಲ್ಲಿ ಬೀಸಲಿದೆ.
ಶನಿವಾರ ಅಂದ್ರೆ ಪಂದ್ಯದ ಹಿಂದಿನ ದಿನ 100ಕ್ಕೆ ಶೇಕಡಾ 99ರಷ್ಟು ಮಳೆ ಬರುವ ಸಾಧ್ಯತೆಯಿರುವುದರಿಂದ ಪಿಚ್ ಔಟ್‌ಫೀಲ್ಡ್ ತೇವಾಂಶದಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ. ಇದಷ್ಟೇ ಅಲ್ಲದೆ ಎಂಸಿಜಿಯಲ್ಲಿ ಅಕ್ಟೋಬರ್ 24, 25ರಂದು ಕೂಡ ಮಳೆ ಬರುವ ವರದಿ ಬಿತ್ತರವಾಗಿದೆ. ಇದ್ರಿಂದ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯ ಜೊತೆಗೆ ಅದೆಷ್ಟು ಪಂದ್ಯವನ್ನ ವೀಕ್ಷಿಸುವ ಅವಕಾಶ ಕಳೆದುಕೊಳ್ಳುತ್ತಾರೆ ಎಂಬುದು ತಿಳಿದುಬರಲಿದೆ.

ಭಾರತ-ಪಾಕ್ ಪಂದ್ಯ ನಡೆಯದಿದ್ರೆ ಐಸಿಸಿಗೆ ಭಾರೀ ಮುಖಭಂಗ, ನಷ್ಟ
ಹೌದು ಭಾರತ-ಪಾಕ್ ಪಂದ್ಯವು ಮಳೆಯಿಂದ ಕೊಚ್ಚಿ ಹೋದ್ರೆ ಅಭಿಮಾನಿಗಳಿಗೆ ಭಾರೀ ನಿರಾಸೆಯ ಜೊತೆಗೆ ಐಸಿಸಿಗೂ ಆಯೋಜನೆಯ ಕುರಿತು ಟೀಕೆಗಳನ್ನ ಎದುರಿಸಬೇಕಾಗುತ್ತದೆ. ಜೊತೆಗೆ ಹೆಚ್ಚು ನಷ್ಟವನ್ನು ಸಹ ಕಾಣಬಹುದಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಹಿಂದೆಯೇ ಘೋಷಿಸಿದಂತೆ 2022ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನದ ಪಂದ್ಯದ ಟಿಕೆಟ್‌ಗಳು ಫೆಬ್ರವರಿ 7 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟವನ್ನು ಪ್ರಾರಂಭಿಸಲಾಗಿತ್ತು . ಆದ್ರೆ ಈ ಪಂದ್ಯದ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿದ್ದು ಇತಿಹಾಸ.

ಪಾಕ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11 ರೆಡಿ
ನ್ಯೂಜಿಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪಾಕಿಸ್ತಾನ ಈಗಾಗಲೇ ಕಾಂಗರೂ ನಾಡಿಗೆ ಕಾಲಿಟ್ಟಿದ್ದು, ಟೀಂ ಇಂಡಿಯಾ ವಿರುದ್ಧ ಫೈಟ್‌ಗೆ ರೆಡಿಯಾಗಿದೆ. ಈ ಬ್ಲಾಕ್‌ಬಸ್ಟರ್ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಕೊನೆ ಕ್ಷಣದ ನಿರ್ಧಾರಗಳಲ್ಲಿ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೇ ಈಗಾಗಲೇ ಆಡುವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಈಗಾಗಲೇ ತಿಳಿಸಿದರು. ಈ ಮಾಹಿತಿಯನ್ನು ಆಟಗಾರರಿಗೂ ಕೂಡ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ಶಮಿ ಯಾಕೆ ಅತ್ಯುತ್ತಮ ಬೌಲರ್ ಎನ್ನುವುದಕ್ಕೆ ಇಲ್ಲಿವೆ ಮೂರು ಕಾರಣಗಳು

ಟೀಂ ಇಂಡಿಯಾ ವಿಶ್ವಕಪ್ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ರಿಷಭ್ ಪಂತ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ಮೊಹಮ್ಮದ್ ಶಮಿ


Click it and Unblock the Notifications
