
1 ರನ್‌ಗಳಿಂದ ಸೋತ ಪಾಕಿಸ್ತಾನ, ಜಿಂಬಾಬ್ವೆಗೆ ಗೆಲುವು
ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಪವರ್‌ಪ್ಲೇ ಓವರ್‌ಗಳ ಒಳಗೆ ಓಪನರ್ಸ್‌ಗಳಿಬ್ಬರನ್ನು ಕಳೆದುಕೊಂಡಿತು. ಟಾಪ್ ಆರ್ಡರ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ ಪರ ಓಪನರ್ಸ್ ಕೈ ಕೊಟ್ಟ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಅಂತಿಮ ಎಸೆತದಲ್ಲಿ 3ರನ್‌ಗಳು ಬೇಕಿದ್ದ ವೇಳೆಯಲ್ಲಿ ಒಂದು ರನ್‌ಗಳಷ್ಟ ಕಲೆಹಾಕಿದ ಶಾಹಿನ್ ಅಫ್ರಿದಿ ನಂತರದ ಓಟದಲ್ಲಿ ರನೌಟ್ ಆದ್ರು. ಪರಿಣಾಮ ಜಿಂಬಾಬ್ವೆ ತಂಡವು 1ರನ್‌ಗಳ ರೋಚಕ ಗೆಲುವು ಸಂಪಾದಿಸಿತು. ಈ ಮೂಲಕ ವಿಶ್ವಕಪ್‌ನಲ್ಲಿ ಸೆಮಿಸ್‌ಗೆ ತಲುಪಲು ಜಿಂಬಾಬ್ವೆ ಪ್ರಬಲ ಪೈಪೋಟಿ ತಂಡವಾಗಿ ಮಾರ್ಪಟ್ಟಿದೆ.
ಜಿಂಬಾಬ್ವೆ ಪರ ಬ್ಯಾಟಿಂಗ್‌ನಲ್ಲಿ ಮಂಕಾದ್ರೂ ಸಹ ಬೌಲಿಂಗ್‌ನಲ್ಲಿ ಮಿಂಚಿದ ಸಿಕಂದರ್ ರಾಜಾ 4 ಓವರ್‌ಗಳಲ್ಲಿ 25ರನ್ ನೀಡಿ 3 ವಿಕೆಟ್ ಸಂಪಾದಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ್ರು.
ಟಿ20 ವಿಶ್ವಕಪ್: ಕೆ.ಎಲ್ ರಾಹುಲ್ ಫಾರ್ಮ್ ವೈಫಲ್ಯ, ಕನ್ನಡಿಗನನ್ನ ಬೆಂಬಲಿಸಿದ ವಾಸಿಂ ಜಾಫರ್

ಕಳೆದ ಎರಡು ಟಿ20 ವಿಶ್ವಕಪ್‌ನಲ್ಲಿ ಆಡಿರ್ಲಿಲ್ಲ ಜಿಂಜಾಬ್ವೆ
ಕೆಲವು ಕಾಣರಾಂತರಗಳಿಂದ ಬಾಹ್ಯ ಸಮಸ್ಯೆಗಳಿಂದ ಜಿಂಬಾಬ್ವೆ ತಂಡವು ಕಳೆದೆರಡು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಅರ್ಹತಾ ಸುತ್ತಿನ ಪಂದ್ಯಗಳನ್ನ ಗೆದ್ದು ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಳೆಯಿಂದಾಗಿ ತಲಾ ಒಂದು ಪಾಯಿಂಟ್ ಗಳಿಸಿತ್ತು. ಆದ್ರೆ ಸೂಪರ್ 12ನಲ್ಲಿ ಪಾಕಿಸ್ತಾನದಂತಹ ಬಲಿಷ್ಠ ತಂಡವನ್ನ ಸೋಲಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಂಪಾದಿಸಿದೆ. ಜಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯದ ಫಲಿತಾಂಶವು ಸುವರ್ಣಾಕ್ಷರದಲ್ಲಿ ಬರೆಯುವಂತಾಗಿದೆ.
PAK vs ZIM: ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲು; ತಂಡದ ಬ್ಯಾಟಿಂಗ್ ವಿರುದ್ಧ ಸಿಟ್ಟಿಗೆದ್ದ ಪಾಕ್ ನಾಯಕ

ಫಲಿತಾಂಶ ಹೀಗೆ ಹೊರಬಂದ್ರೆ, ಜಿಂಬಾಬ್ವೆ ಸೆಮಿಫೈನಲ್ ತಲುಪಲಿದೆ!
ಹೌದು ಜಿಂಬಾಬ್ವೆ ತಂಡವು ಟಿ20 ವಿಶ್ವಕಪ್ ಸೆಮಿಫೈನಲ್ ತಲುಪುವ ಎಲ್ಲಾ ಅವಕಾಶಗಳಿವೆ. ಆದ್ರೆ ಕೆಲವೊಂದು ಫಲಿತಾಂಶಗಳು ಜಿಂಬಾಬ್ವೆ ಪರ ಆಗಬೇಕಿದೆ. ಅದೇನಂದ್ರೆ ಮೊದಲಿಗೆ ಜಿಂಬಾಬ್ವೆ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಬೇಕಿದೆ.
ಈ ಎರಡು ತಂಡಗಳ ವಿರುದ್ಧ ಜಿಂಬಾಬ್ವೆ ಜಯದ ಜೊತೆಗೆ ದಕ್ಷಿಣ ಆಫ್ರಿಕಾ ತಂಡವು ನಂತರದ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಸೋಲನ್ನ ಅನುಭವಿಸಿದ್ರೆ, ಜಿಂಬಾಬ್ವೆ ತಂಡವು ಸೆಮಿಫೈನಲ್ ಪ್ರವೇಶಿಸಿವುದು ಬಹುತೇಕ ಗ್ಯಾರೆಂಟಿ.
ಹೀಗಾಗಿ ಜಿಂಬಾಬ್ವೆ ಮುಂದಿನ ಎರಡು ಪಂದ್ಯ ಜಯಿಸೋದ್ರ ಜೊತೆಗೆ, 3 ಪಾಯಿಂಟ್ಸ್ ಜೊತೆಗೆ ನೆಟ್‌ರನ್‌ರೇಟ್‌ನಲ್ಲಿ (5.200) ಎಲ್ಲರಿಗಿಂತ ಮುಂದಿರುವ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳನ್ನ ಸೋತಿದ್ದೇ ಆದಲ್ಲಿ ಜಿಂಬಾಬ್ವೆ ಅತಿದೊಡ್ಡ ಕನಸು ನನಸಾಗಲಿದೆ.

ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ
ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ಮಿಲ್ಟನ್ ಶುಂಬಾ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಬಾನಿ


Click it and Unblock the Notifications
